HomeEntertainmentಈ ಯುವಕನ ಜೊತೆ ಪ್ರೀತಿಯಲ್ಲಿ ಬಿದ್ದಿದ್ದರಾ ನಟಿ ಜಾನ್ವಿ ? ಫೋಟೋ ವೈರಲ್

ಈ ಯುವಕನ ಜೊತೆ ಪ್ರೀತಿಯಲ್ಲಿ ಬಿದ್ದಿದ್ದರಾ ನಟಿ ಜಾನ್ವಿ ? ಫೋಟೋ ವೈರಲ್

ಬಾಲಿವುಡ್‌ ನಟಿ ಜಾನ್ವಿ ಕಪೂರ್ ಲವ್‌ ನಲ್ಲಿದ್ದಾರೆ ಎನ್ನುವ ಸುದ್ದಿ ಅನೇಕ ದಿನಗಳಿಂದ ಹರಿದಾಡುತ್ತಿದೆ. ಅದಕ್ಕೆ ಈಗ ಮತ್ತೊಂದು ಸಾಕ್ಷ್ಯ ಸಿಕ್ಕಿದೆ. ನಟಿ ಜಾನ್ವಿ ಕಪೂರ್‌, ಶಿಖರ್ ಪಹಾರಿಯಾ ಜೊತೆ ಡೇಟ್‌ ಮಾಡ್ತಿದ್ದಾರೆ ಎಂಬ ಅನುಮಾನವಿದೆ. ಅವರಿಬ್ಬರು ಅಲ್ಲಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದು ಇದಕ್ಕೆ ಕಾರಣ.

ಈಗ ಜಾನ್ವಿ ಕಪೂರ್‌ ಹಾಗೂ ಶಿಖರ್‌ ಪಹಾರಿಯಾ ಮತ್ತೆ ಒಟ್ಟಿಗೆ ಕಾಣಿಸಿಕೊಂಡು ಚರ್ಚೆಗೆ ಬಂದಿದ್ದಾರೆ. ಬಾಲಿವುಡ್‌ ಸ್ಟಾರ್ಸ್‌ ಮಕ್ಕಳಿಗೆ ಹತ್ತಿರವಾಗಿರುವ, ಪ್ರಭಾವಿ ಓರಿ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಒಂದನ್ನು ಹಂಚಿಕೊಂಡಿದ್ದಾರೆ. ಓರಿ ಫೋಟೋದಲ್ಲಿ ಜಾನ್ವಿ ಕಪೂರ್‌ ಹಾಗೂ ಶಿಖರ್‌ ಪಹಾರಿಯಾ ಅವರನ್ನು ನೋಡಬಹುದು.

ನಟಿ ಜಾನ್ವಿ ಕಪೂರ್‌ , ಶಿಖರ್ ಜೊತೆ ಓರಿ ಊಟ ಮಾಡ್ತಿದ್ದಾರೆ. ಓರಿ, ಇನ್ಸ್ಟಾಗ್ರಾಮ್‌ ಸ್ಟೋರಿಯಲ್ಲಿ ಫೋಟೋವನ್ನು ಪೋಸ್ಟ್‌ ಮಾಡಿದ್ದಾರೆ. ಫೋಟೋ ನೋಡಿದ ಅಭಿಮಾನಿಗಳು  ಜಾನ್ವಿ ಮತ್ತು ಶಿಖರ್‌ ಮಧ್ಯೆ ಏನೂ ನಡೀತಾ ಇದೆ ಎನ್ನುತ್ತಿದ್ದಾರೆ. ಆದ್ರೆ ಈವರೆಗೂ ಜಾನ್ವಿ ಹಾಗೂ ಶಿಖರ್‌ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular