ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ನೆಟ್ಟಿಗರು ತಲೆ ಕೆರೆದುಕೊಳ್ಳುವಂತೆ ಮಾಡಿದೆ.
ಈ ವಿಡಿಯೋವನ್ನು ಪತ್ರಕರ್ತೆ ನೈಲಾ ಇನಾಯತ್ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ನೆಟ್ಟಿಗರು ಬಿದ್ದೂ ಬಿದ್ದೂ ನಗುತ್ತಿದ್ದಾರೆ.
ಅಷ್ಟಕ್ಕೂ ರಕ್ಷಣಾ ಸಚಿವರು ಪತ್ರಿಕಾಗೋಷ್ಠಿಯಲ್ಲಿ ಜನಸಂಖ್ಯೆಯ ಬೆಳವಣಿಗೆಯ ಬಗ್ಗೆ ವಿಚಿತ್ರವಾದ ಸಿದ್ಧಾಂತವನ್ನು ಉಲ್ಲೇಖಿಸಿದ್ದು, ನಗುವಿಗೆ ಕಾರಣವಾಗಿದೆ.
ವಿಡಿಯೋದಲ್ಲಿ ಖವಾಜಾ ಆಸಿಫ್ ಹೇಳಿದ್ದೇನೆಂದರೆ, “ರಾತ್ರಿ 8 ಗಂಟೆಗೆ ಮಾರುಕಟ್ಟೆಗಳು ಮುಚ್ಚಲ್ಪಟ್ಟ ಸ್ಥಳಗಳಲ್ಲಿ, ಜನಸಂಖ್ಯೆಯ ಬೆಳವಣಿಗೆ ಕಡಿಮೆಯಾಗಿದೆ” ಎಂದಿದ್ದಾರೆ. ಇದು ಜನರನ್ನು ವಿಚಿತ್ರಕ್ಕೆ ತಳ್ಳಿದೆ. ಅಂದರೆ ಸಚಿವರು ರಾತ್ರಿ 8 ಗಂಟೆಯ ನಂತರ ಶಿಶುಗಳನ್ನು ಮಾಡಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದಾರೆಯೇ ಎಂದು ಜನರು ಪ್ರಶ್ನಿಸುತ್ತಿದ್ದು, ಇಂಥ ವಿಚಿತ್ರ ಎಲ್ಲಿಯೂ ಕೇಳಲಿಲ್ಲ ಎನ್ನುತ್ತಿದ್ದಾರೆ.
New research, babies can’t be made after 8pm. “There’s no population increase in countries where markets close at 8pm,” defence minister. pic.twitter.com/G5IUAuOYD6
— Naila Inayat (@nailainayat) January 4, 2023

