HomeLatest Newsದೇಶದೊಳಗಿನ ದೇಶದ್ರೋಹಿ'ಗಳ ವಿರುದ್ಧ ಇರಾನ್ ಕಠಿಣ ಕ್ರಮ ; ಮೂವರನ್ನು ಗಲ್ಲಿಗೇರಿಸಿದ ಸರ್ಕಾರ .!

ದೇಶದೊಳಗಿನ ದೇಶದ್ರೋಹಿ’ಗಳ ವಿರುದ್ಧ ಇರಾನ್ ಕಠಿಣ ಕ್ರಮ ; ಮೂವರನ್ನು ಗಲ್ಲಿಗೇರಿಸಿದ ಸರ್ಕಾರ .!

ಟೆಹ್ರಾನ್: ಇರಾನ್ ಮೇಲೆ ಯುದ್ಧ ಆರಂಭವಾಗಿ 20 ದಿನಗಳು ಕಳೆದಿರುವ ಬೆನ್ನಲ್ಲೇ, ಪೊಲೀಸ್ ಅಧಿಕಾರಿಗಳ ಕೊಲೆ ಮತ್ತು ಅಮೆರಿಕ ಹಾಗೂ ಇಸ್ರೇಲ್ ಪರವಾಗಿ ಗುಪ್ತಚರ ಕಾರ್ಯಾಚರಣೆ ನಡೆಸಿದ ಆರೋಪದ ಮೇಲೆ ಮೂವರನ್ನು ಗಲ್ಲಿಗೇರಿಸಲಾಗಿದೆ ಎಂದು ಇರಾನ್ ನ್ಯಾಯಾಂಗ ಇಲಾಖೆ ಗುರುವಾರ ತಿಳಿಸಿದೆ.

 ಈ ವರ್ಷದ  ಜನವರಿಯಲ್ಲಿ ನಡೆದಿದ್ದ ಪ್ರತಿಭಟನೆಗಳ ವೇಳೆ ಇಬ್ಬರು ಕಾನೂನು ಪಾಲನಾ ಅಧಿಕಾರಿಗಳನ್ನು ಕೊಂದ ಆರೋಪ ಇವರ ಮೇಲಿತ್ತು. “ಜಿಯೋನಿಸ್ಟ್ ಆಡಳಿತ (ಇಸ್ರೇಲ್) ಮತ್ತು ಅಮೆರಿಕದ ಪರವಾಗಿ ವಿಧ್ವಂಸಕ ಕೃತ್ಯ ಎಸಗಿದ ಕಾರಣಕ್ಕೆ ಇಂದು ಬೆಳಿಗ್ಗೆ ಇವರನ್ನು ನೇಣುಹಾಕಲಾಗಿದೆ” ಎಂದು ನ್ಯಾಯಾಂಗ ಇಲಾಖೆಯ ಅಧಿಕೃತ ವೆಬ್‌ಸೈಟ್ ತಿಳಿಸಿದೆ.

ಡಿಸೆಂಬರ್ ಅಂತ್ಯದಲ್ಲಿ ಆರಂಭವಾದ ಸರ್ಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ಇದುವರೆಗೆ 3,117 ಜನರು ಸಾವನ್ನಪ್ಪಿದ್ದಾರೆ ಎಂದು ಇರಾನ್ ಅಧಿಕಾರಿಗಳು ಹೇಳಿದ್ದಾರೆ. ಆದರೆ, ವಿಶ್ವಸಂಸ್ಥೆ ಮತ್ತು ಅಂತರಾಷ್ಟ್ರೀಯ ಮಾನವ ಹಕ್ಕುಗಳ ಸಂಸ್ಥೆಗಳ ಪ್ರಕಾರ ಈ ಸಂಖ್ಯೆ 20,000ಕ್ಕೂ ಅಧಿಕ ಇರಬಹುದು ಎಂದು ಅಂದಾಜಿಸಲಾಗಿದೆ.ಬುಧವಾರವಷ್ಟೇ ಇರಾನ್ ಅಧಿಕಾರಿಗಳು ದೇಶಾದ್ಯಂತ ನೂರಾರು ಜನರನ್ನು ಬಂಧಿಸಿದ್ದು, ಅಮೆರಿಕ ಮತ್ತು ಇಸ್ರೇಲ್ ಹಿತಾಸಕ್ತಿಗಳ ಪರವಾಗಿ ಕೆಲಸ ಮಾಡುತ್ತಿರುವ ‘ದೇಶದ್ರೋಹಿಗಳ’ ವಿರುದ್ಧ ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಗುಪ್ತಚರ ಇಲಾಖೆ ಹೇಳಿಕೆ: ಇರಾನ್‌ನ ಒಟ್ಟು 31 ಪ್ರಾಂತ್ಯಗಳ ಪೈಕಿ 26 ಪ್ರಾಂತ್ಯಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ 111 ‘ರಾಜಪ್ರಭುತ್ವದ ಪರವಾದ ಗುಂಪುಗಳನ್ನು’ ತಡೆಹಿಡಿಯಲಾಗಿದೆ ಎಂದು ಗುಪ್ತಚರ ಸಚಿವಾಲಯ ತಿಳಿಸಿದೆ. 2025ರಲ್ಲಿಯೂ ಇಸ್ರೇಲ್‌ನ ಮೊಸಾದ್ ಏಜೆನ್ಸಿ ಪರವಾಗಿ ಕೆಲಸ ಮಾಡುತ್ತಿದ್ದ ಹಲವರನ್ನು ಇರಾನ್ ಗಲ್ಲಿಗೇರಿಸಿತ್ತು. ಈಗ ಇಸ್ರೇಲ್-ಅಮೆರಿಕ ನಡುವಿನ ಯುದ್ಧ ತೀವ್ರಗೊಳ್ಳುತ್ತಿರುವಂತೆ ಇರಾನ್ ತನ್ನ ದೇಶದೊಳಗಿನ ಕಣ್ಗಾವಲನ್ನು ಮತ್ತಷ್ಟು ಬಿಗಿಗೊಳಿಸಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular