HomeLive Newsಬೇಹುಗಾರಿಕೆ ಪ್ರಕರಣ: ಮಜೀದ್ ನನ್ನು ಗಲ್ಲಿಗೇರಿಸಿದ ಇರಾನ್

ಬೇಹುಗಾರಿಕೆ ಪ್ರಕರಣ: ಮಜೀದ್ ನನ್ನು ಗಲ್ಲಿಗೇರಿಸಿದ ಇರಾನ್

ಇಸ್ರೇಲ್ ಪರ ಬೇಹುಗಾರಿಕೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ವ್ಯಕ್ತಿಯನ್ನು ಇರಾನ್ ಗಲ್ಲಿಗೇರಿಸಿರುವ ಘಟನೆ ನಡೆದಿದೆ.

ಇರಾನ್ ಹಾಗೂ ಇಸ್ರೇಲ್ ನಡುವೆ ಯುದ್ಧದ ಸಂಘರ್ಷ ಮುಂದುವರೆದಿರುವ ನಡುವೆಯೇ ಇಸ್ರೇಲ್ ಪರ ಬೇಹುಗಾರಿಕೆ ನಡೆಸುತ್ತಿದ್ದ ವ್ಯಕ್ತಿಯನ್ನು ಇರಾನ್ ಬಂಧಿಸಿತ್ತು. ಇದೀಗ ಆರೋಪಿಗೆ ಗಲ್ಲುಶಿಕ್ಷೆ ವಿಧಿಸಲಾಗಿದೆ. ಮಜೀದ್ ಮೊಸೆಯ್ಬಿ ಮರಣದಂಡನೆಗೆ ಗುರಿಯಾದ ವ್ಯಕ್ತಿ.

ಈತ ಇಸ್ರೇಲ್ ಗಾಗಿ ಬೇಹುಕ್ಗಾರಿಕೆ ನಡೆಸುತ್ತಿದ್ದ. ಇಸ್ರೇಲ್ ಗುಪ್ತಚರ ಸಂಸ್ಥೆಗೆ ಸೂಕ್ಷ್ಮ ಮಾಹಿತಿಗಳನ್ನು ರವಾನಿಸುತ್ತಿದ್ದ ಎಂಬುದು ಸಾಬೀತಾಗಿತ್ತು. ಇರಾನ್ ಸುಪ್ರೀಂ ಕೋರ್ಟ್ ಕೂಡ ಇದನ್ನು ಖಚಿತಪಡಿಸಿತ್ತು. ಕ್ರಿಮಿನಲ್ ವಿಚಾರಣೆ ಬಳಿಕ ಆತನನ್ನು ಗಲ್ಲಿಗೇರಿಸಲಾಗಿದೆ ಎಂದು ಮಿಜಾನ್ ವೆಬ್ ಸೈಟ್ ತಿಳಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular