HomeSportsBIG NEWS: ಐಪಿಎಲ್ ಪಂದ್ಯ: ಶಾಸಕರಿಗೆ 2 ಟಿಕೆಟ್ ನೀಡಲು ಒಪ್ಪಿದ ಕೆ.ಎಸ್.ಸಿ.ಎ

BIG NEWS: ಐಪಿಎಲ್ ಪಂದ್ಯ: ಶಾಸಕರಿಗೆ 2 ಟಿಕೆಟ್ ನೀಡಲು ಒಪ್ಪಿದ ಕೆ.ಎಸ್.ಸಿ.ಎ

ಬೆಂಗಳೂರು: ಮಾರ್ಚ್ 28 ನಾಳೆಯಿಂದ ಐಪಿಎಲ್ ಪಂದ್ಯಾವಳಿ ಆರಂಭವಾಗಲಿದ್ದು, ಶಾಸಕರಿಗೆ ಐಪಿಎಲ್ ಪಂದ್ಯ ವೀಕ್ಷಣೆಗೆ ಟಿಕೆಟ್ ನೀಡಬೇಕು ಎಂಬ ವಿಚಾರ ಭಾರಿ ಚರ್ಚೆಗೆ ಕಾರಣವಾಗಿತ್ತು.

ವಿಧಾನಸಭೆ ಅಧಿವೇಶನದಲ್ಲಿ ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್ ಐಪಿಎಲ್​ ಮ್ಯಾಚ್​ಗಳ ಟಿಕೆಟ್​ ಬಗ್ಗೆ ಕೇಳಿದ ಪ್ರಶ್ನೆ ರಾಜಕೀಯ ಜಟಾಪಟಿಗೆ ತಿರುಗಿತ್ತು. ಅಲ್ಲದೇ ಇದೇ ವಿಚಾರವಾಗಿ ವಿಪಕ್ಷದ ನಾಯಕ ಆರ್.ಅಶೋಕ್ ಸಹ ಧ್ವನಿಗೂಡಿಸಿದ್ದರು. ಈ ಎಲ್ಲಾ ಬೆಳವಣಿಗೆ ಬೆನ್ನಲ್ಲೇ ಶಾಸಕರ ಐಪಿಎಲ್ ಟಿಕೆಟ್ ಸಮಸ್ಯೆ ಬಗೆಹರಿದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕೆ.ಎಸ್‌.ಸಿ.ಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಅವರು ಇಂದು ವಿಧಾನಸೌಧದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ಚರ್ಚೆ ಮಾಡಿದರು. ಈ ವೇಳೆ ನಾಳೆ ಮಾರ್ಚ್ 28ರಂದು ಉದ್ಘಾಟನಾ ಪಂದ್ಯಕ್ಕೆ ಶಾಸಕರಿಗೆ 1+1 ಒಟ್ಟು 2 ಟಿಕೆಟ್ ನೀಡಲು ಒಪ್ಪಿಕೊಂಡಿದ್ದಾರೆ.

ಸದ್ಯ ಒಬ್ಬ ಶಾಸಕರಿಗೆ ಎರಡು ಟಿಕೆಟ್ ನೀಡಲು ಒಪ್ಪಿರುವ ಕೆ.ಎಸ್‌.ಸಿ.ಎ, ಮುಂದಿನ‌ ಐಪಿಎಲ್‌ ಪಂದ್ಯಕ್ಕೆ 4 ಟಿಕೆಟ್ ನೀಡುವ ಬಗ್ಗೆ ನಿರ್ಧರಿಸಲಾಗುವುದು ಎಂದು ತಿಳಿಸಿದೆ.

ಮಾರ್ಚ್ 28 ರಿಂದ ಐಪಿಎಲ್ 19ನೇ ಸೀಸನ್ ಆರಂಭವಾಗಲಿದೆ, ಒಟ್ಟು 74 ಪಂದ್ಯಗಳು 65 ದಿನಗಳಲ್ಲಿ ನಡೆಯಲಿವೆ. ಉದ್ಘಾಟನಾ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ.

ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಎಚ್) ತಂಡವನ್ನು ಎದುರಿಸಲಿದ್ದು, ನಾಳೆ ಸಂಜೆ 7:30 ಕ್ಕೆ ಪಂದ್ಯ ಆರಂಭವಾಗಲಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular