HomeKarnatakaಹಾಲು ಉತ್ಪಾದಕರ ಸಂಘದ ಮಹಿಳಾ ಕಾರ್ಯದರ್ಶಿ ಆತ್ಮಹತ್ಯೆ: 9 ಜನರ ವಿರುದ್ಧ FIR ದಾಖಲು

ಹಾಲು ಉತ್ಪಾದಕರ ಸಂಘದ ಮಹಿಳಾ ಕಾರ್ಯದರ್ಶಿ ಆತ್ಮಹತ್ಯೆ: 9 ಜನರ ವಿರುದ್ಧ FIR ದಾಖಲು

ಚಿಕ್ಕಮಗಳೂರು: ಹೊಸ ಕಮಿಟಿಯವರು ಹಳೇ ಲೆಕ್ಕಾಚಾರ ಕೇಳಿ ಕಿರುಕುಳ ನೀಡಿದ್ದಕ್ಕೆ ಮನನೊಂದು ಹಾಲು ಉತ್ಪಾದಕರ ಸಂಘದ ಮಹಿಳಾ ಕಾರ್ಯದರ್ಶಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕಮಗಳೂರು ಜಿಲ್ಲೆಯ ತರಿಕೆರೆ ತಾಲೂಕಿನ ಹೆಚ್.ಮಲ್ಲೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

45 ವರ್ಷದ ಉಷಾ ಆತ್ಮಹತ್ಯೆಗೆ ಶರಣಾದವರು. ಸಾವಿಗೂ ಮುನ್ನ ಮೂರು ಪುಟಗಳ ಡೆತ್ ನೋಟ್ ಬರೆದಿಟ್ಟಿದ್ದಾರೆ. ಅಲ್ಲದೇ ೨೫ ನಿಮಿಷಗಳ ವಿಡಿಯೋ ರೆಕಾರ್ಡ್ ಮಾಡಿಟ್ಟಿದ್ದಾರೆ.

2010ರಿಂದ ಉಷಾ ಹಾಲು ಉತ್ಪಾಅದಕರ ಸಂಘದಲ್ಲಿ ಕಾರ್ಯದರ್ಶಿಯಾಗಿದ್ದರು. ಹೊಸ ಕಮಿಟಿಯವರು 2020ರ ಲೆಕ್ಕಾಚಾರ ಕೇಳಿ ಕಿರುಕುಳ ನೀಡುತ್ತಿದ್ದರು. ಸಂಘದ ಹಣವನ್ನು ದುರುಪಯೋಗ ಮಾಡಿದ್ದಾರೆ ಎಂದು ಆರೋಪಿಸಿ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದರಂತೆ. ಇದರಿಂದ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

2020ರ ಕೆಲಸಕ್ಕೆ ಈಗ ಬಿಲ್ ಕೇಳುತ್ತಾರೆ. ಎಲ್ಲಿಂದ ತರಲಿ? ದಂಡ ಕಟ್ಟಿ ಎಂದಿದ್ದರೆ ಕಟ್ಟುತ್ತಿದ್ದೆ. ಕೋರ್ಟು, ಪೊಲೀಸು ಎಂದು ಹೇದರಿಸುತ್ತಿದ್ದೀರಿ. ಒಂದು ಅವಕಾಶ ನೀಡುತ್ತಿಲ್ಲ. ಇಡೀ ಊರ‍ೇ ಒಂದಾಗಿ ಅವಮಾನ ಮಾಡುತ್ತಿದೆ. ಊರಿನ ಯುವಕರು ಚುಚ್ಚು ಮಾತು ಕೇಳಿ ತುಂಬಾ ಘಾಸಿಯಾಗಿದೆ ಎಂದು ಡೆತ್ ನೋಟ್ ನಲ್ಲಿ ಬರೆದಿದ್ದಾರೆ. ಪತ್ನಿ ಆತ್ಮಹತ್ಯೆ ಬಗ್ಗೆ ಪತಿ ರಮೇಶ್, ತರೀಕೆರೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ದೂರಿನ ಹಿನ್ನೆಲೆಯಲ್ಲಿ 9 ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಪ್ರಕರಣ ದಾಖಾಲಾಗುತ್ತಿದ್ದಂತೆ ಆರೋಪಿಗಳು ನಾಪತ್ತೆಯಾಗಿದ್ದಾರೆ.

ಆತ್ಮಹತ್ಯೆ ತಡೆ ಸಹಾಯವಾಣಿ: ಎಲ್ಲಾ ಸಮಸ್ಯೆಗಳಿಗೂ ಸಾವು ಪರಿಹಾರವಲ್ಲ. ಆತ್ಮಹತ್ಯೆ ತಡೆ ಸಹಾಯವಾಣಿ ಸಂಖ್ಯೆ (022)27546669

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular