HomeSportsಐಪಿಎಲ್ ಉದ್ಘಾಟನಾ ಪಂದ್ಯಕ್ಕೆ ಚಿನ್ನಸ್ವಾಮಿ ಕ್ರೀಡಾಂಗಣ ಸಜ್ಜು: ಜನದಟ್ಟಣೆ ನಿಯಂತ್ರಣಕ್ಕೆ AI ಬಳಕೆಗೆ ನಿರ್ಧಾರ

ಐಪಿಎಲ್ ಉದ್ಘಾಟನಾ ಪಂದ್ಯಕ್ಕೆ ಚಿನ್ನಸ್ವಾಮಿ ಕ್ರೀಡಾಂಗಣ ಸಜ್ಜು: ಜನದಟ್ಟಣೆ ನಿಯಂತ್ರಣಕ್ಕೆ AI ಬಳಕೆಗೆ ನಿರ್ಧಾರ

ಬೆಂಗಳೂರು: 2026ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಉದ್ಘಾಟನಾ ಪಂದ್ಯಕ್ಕೆ ಬೆಂಗಳೂರಿನ ಐತಿಹಾಸಿಕ ಚಿನ್ನಸ್ವಾಮಿ ಸ್ಟೇಡಿಯಂ ಸಜ್ಜಾಗಿದೆ. ಮಾರ್ಚ್ 28ರಂದು ಉದ್ಘಾಟನಾ ಪಂದ್ಯ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್​ಸಿಬಿ) ಮತ್ತು ಸನ್ ರೈಸರ್ಸ್ ಹೈದರಾಬಾದ್ (ಎಸ್​ಆರ್​ಹೆಚ್) ನಡುವೆ ಮೊದಲ ಪಂದ್ಯ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಸಾಕಷ್ಟು ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಹಿಂದೆ ಆರ್​ಸಿಬಿ ಐಪಿಎಲ್ ಟ್ರೋಫಿ ಗೆದ್ದ ಸಂಭ್ರಮಾಚರಣೆಯ ಸಂದರ್ಭದಲ್ಲಿ ಸಂಭವಿಸಿದ್ದ ಕಾಲ್ತುಳಿತದ ಘಟನೆಗಳ ಬಳಿಕ ಫ್ರಾಂಚೈಸಿಯು ಪ್ರೇಕ್ಷಕರ ಸುರಕ್ಷತೆಗಾಗಿ ಮಹತ್ವದ ಕ್ರಮಗಳನ್ನು ಕೈಗೊಂಡಿದೆ. ಕ್ರೀಡಾಂಗಣವು 35,000 ಜನರ ಸಾಮರ್ಥ್ಯ ಹೊಂದಿದ್ದರೂ, 28,000 ಪ್ರೇಕ್ಷಕರಿಗೆ ಮಾತ್ರ ಪ್ರವೇಶ ನೀಡಲಾಗುತ್ತದೆ. ಟಿಕೆಟ್ ಮಾರಾಟವು ಬಹುತೇಕ ಆನ್ಲೈನ್ ಮೂಲಕ ನಡೆಯಲಿದ್ದು, ಶೀಘ್ರದಲ್ಲೇ ಮಾರಾಟದ ದಿನಾಂಕವನ್ನು ಪ್ರಕಟಿಸಲಾಗುವುದು.

ಜನದಟ್ಟಣೆ ಪತ್ತೆಗೆ ಹಾಗೂ ನಿಯತ್ರಣಕ್ಕಾಗಿ ಆರ್ಟಿಫಿಶಲ್ ಇಂಟಲಿಜನ್ಸ್ (ಎಐ) ತಂತ್ರಜ್ಞಾನ ಬಳಸಿಕೊಳ್ಳಲಾಗುತ್ತಿದೆ. ಜನದಟ್ಟಣೆ ಕಂಡಕೂಡಲೇ ಹೋಲಿಂಡ್ ಪ್ರದೇಶ ಬಂದ್ ಮಾಡಲಾಗುತ್ತದೆ. ತುರ್ತು ಚಿಕಿತ್ಸೆಗಳಿಗಾಗಿ ಸ್ಟೇಡಿಯಂ ಬಳಿ 8 ಆಂಬುಲೆನ್ಸ್ ಗಳನ್ನು ನಿಯೋಜಿಸಲಾಗುತ್ತಿದೆ. 25 ಸಾವಿರ ಜನರಿಗೆ ಅಡ್ವಾನ್ಸ್ಡ್ ಲೈಫ್ ಸಪೋರ್ಟ್ ಆಂಬುಲೆನ್ಸ್, ಹತ್ತು ಸಾವಿರ ಜನರಿಗೆ ಬೇಸಿಕ್ ಲೈಫ್ ಸಪೋರ್ಟ್ ಆಂಬುಲೆನ್ಸ್, ಪ್ರತಿ 500 ಮೀಟರ್ ಗೆ ಪ್ರಥಮ ಚಿಕಿತ್ಸಾ ಪೆಟ್ಟಿಗೆ ವ್ಯವಸ್ಥೆ ಮಾಡಲಾಗುತ್ತಿದೆ. ಅಲ್ಲದೇ 35 ಸಾವಿರ ಸೀಟ್ ಸಾಮರ್ಥ್ಯವಿದ್ದರೂ ಬಫರ್ ಜೋನ್ ನಿಗದಿ ಮಾಡಲಾಗುತ್ತಿದೆ.

ಇನ್ನು ಆರ್​ಸಿಬಿ ಪಂದ್ಯಗಳ ಟಿಕೆಟ್​ಗಳನ್ನು ಅಧಿಕೃತ ವೆಬ್​ಸೈಟ್ ಮುಖಾಂತರವೇ ಖರೀದಿಸಬೇಕು. ಥರ್ಡ್ ಪಾರ್ಟಿ ಆ್ಯಪ್ ಸೇರಿದಂತೆ ಇನ್ನಿತರ ಜಾಲತಾಣಗಳಲ್ಲಿ ಟಿಕೆಟ್ ಮಾರಾಟ ಲಭ್ಯವಿಲ್ಲ. ಪಂದ್ಯದ ದಿನದಂದು ಅಭಿಮಾನಿಗಳಿಗೆ ಕ್ವೀನ್ಸ್ ರಸ್ತೆ ಭಾಗದ ಪ್ರವೇಶದ್ವಾರಗಳಲ್ಲಿ ಪ್ರವೇಶ ನಿಷೇಧಿಸಲಾಗಿದ್ದು, ಬದಲಾಗಿ ಲಿಂಕ್ ರೋಡ್ ಹಾಗೂ ಕಬ್ಬನ್ ರೋಡ್ ಗೇಟ್​ಗಳ ಮೂಲಕ ಎಂಟ್ರಿ ಪಡೆಯಬಹುದಾಗಿದೆ.

ಪಂದ್ಯದ ದಿನ ವಾಹನಗಳ ಪಾರ್ಕಿಂಗ್​ಗಾಗಿ ಗರುಡಾ ಮಾಲ್, ಸೇಂಟ್ ಜೋಸೆಫ್ ಬಾಯ್ಸ್ ಸ್ಕೂಲ್, ಸೇಂಟ್ ಜೊಸೇಫ್ ಇಂಡಿಯನ್ ಹೈಸ್ಕೂಲ್ ಹಾಗೂ ಫ್ರೀಡಂ ಪಾರ್ಕ್​ಗಳಲ್ಲಿ ವಾಹನಗಳನ್ನು ನಿಲ್ಲಿಸಬಹುದಾಗಿದೆ ಎಂದು ಆರ್​ಸಿಬಿ ಫ್ರಾಂಚೈಸಿ ತಿಳಿಸಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular