HomeSportsIPL 2026: 12 ಸಿಕ್ಸರ್, 5 ಬೌಂಡರಿ; ಅಯ್ಯಯ್ಯೋ ಅಬ್ಬರಿಸಿ ಬೊಬ್ಬಿರಿದು ಐಪಿಎಲ್ ವೇಗದ ಶತಕ...

IPL 2026: 12 ಸಿಕ್ಸರ್, 5 ಬೌಂಡರಿ; ಅಯ್ಯಯ್ಯೋ ಅಬ್ಬರಿಸಿ ಬೊಬ್ಬಿರಿದು ಐಪಿಎಲ್ ವೇಗದ ಶತಕ ಮಿಸ್ ಮಾಡಿಕೊಂಡ ವೈಭವ್ ಸೂರ್ಯವಂಶಿ

ಇಂದು ( ಮೇ 27 ) ನ್ಯೂ ಚಂಡೀಗಢ್‌ನ ಮುಲ್ಲಾನ್‌ಪುರ್‌ನ ಮಹಾರಾಜ ಯದವೀಂದ್ರ ಸಿಂಗ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್ 2026ರ ಎಲಿಮಿನೇಟರ್ ಪಂದ್ಯ ನಡೆಯುತ್ತಿದ್ದು, ಸನ್ ರೈಸರ್ಸ್ ಹೈದರಾಬಾದ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗಿವೆ.

ಪಂದ್ಯದಲ್ಲಿ ಟಾಸ್ ಗೆದ್ದಿರುವ ಸನ್ ರೈಸರ್ಸ್ ಹೈದರಾಬಾದ್ ಬೌಲಿಂಗ್ ಆರಿಸಿಕೊಂಡಿದ್ದು, ರಾಜಸ್ಥಾನ್ ರಾಯಲ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು.

ರಾಜಸ್ಥಾನ್ ರಾಯಲ್ಸ್ ಪರ ಆರಂಭಿಕರಾಗಿ ವೈಭವ್ ಸೂರ್ಯವಂಶಿ ಹಾಗೂ ಯಶಸ್ವಿ ಜೈಸ್ವಾಲ್ ಕಣಕ್ಕಿಳಿದರು. ಈ ಜೋಡಿ 8 ಓವರ್‌ಗಳಲ್ಲಿ 125 ರನ್‌ಗಳ ಜತೆಯಾಟವನ್ನಾಡಿತು. ಈ ಪೈಕಿ ವೈಭವ್ ಸೂರ್ಯವಂಶಿಯದ್ದೇ 97 ರನ್‌ಗಳ ಕೊಡುಗೆ ಇತ್ತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕೇವಲ 29 ಎಸೆತಗಳಲ್ಲಿ 5 ಬೌಂಡರಿ ಹಾಗೂ 12 ಸಿಕ್ಸರ್ ಸಹಿತ 97 ರನ್ ಬಾರಿಸಿ ಪ್ರಫುಲ್ ಹಿಂಗೆಗೆ ಕ್ಯಾಚ್ ನೀಡಿದ ವೈಭವ್ ಕ್ರಿಸ್ ಗೇಲ್ ಹೆಸರಿನಲ್ಲಿದ್ದ ಐಪಿಎಲ್ ವೇಗದ ಶತಕ ಬಾರಿಸುವಲ್ಲಿ ವಿಫಲರಾದರು.

ಹೌದು 2013ರಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಕ್ರಿಸ್ ಗೇಲ್ 30 ಎಸೆತಗಳಲ್ಲಿ ಶತಕ ಬಾರಿಸಿದ್ದರು.

ಇಂದು 28 ಎಸೆತಗಳಿಗೆ 97 ರನ್ ಬಾರಿಸಿದ್ದ ವೈಭವ್ ಈ ದಾಖಲೆ ಮುರಿದು ಹೊಸ ದಾಖಲೆ ಬರೆಯುವ ಅವಕಾಶವಿತ್ತು. ಆದರೆ 29ನೇ ಎಸೆತದಲ್ಲಿ ವಿಕೆಟ್ ಒಪ್ಪಿಸಿದ ವೈಭವ್ ಈ ಮಹಾ ದಾಖಲೆ ಮುರಿಯುವ ಮಹಾ ಅವಕಾಶ ಮಿಸ್ ಮಾಡಿಕೊಂಡರು.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular