HomeIPL 2026IPL 2026: ವೈಭವ್ ಬ್ಯಾಟಿಂಗ್ ಅಬ್ಬರಕ್ಕೆ ನಲುಗಿ ಟೂರ್ನಿಯಿಂದ ಹೊರಬಿದ್ದ ಹೈದರಾಬಾದ್; ಕ್ವಾಲಿಫಯರ್ 2ಗೆ ಎಂಟ್ರಿ...

IPL 2026: ವೈಭವ್ ಬ್ಯಾಟಿಂಗ್ ಅಬ್ಬರಕ್ಕೆ ನಲುಗಿ ಟೂರ್ನಿಯಿಂದ ಹೊರಬಿದ್ದ ಹೈದರಾಬಾದ್; ಕ್ವಾಲಿಫಯರ್ 2ಗೆ ಎಂಟ್ರಿ ಕೊಟ್ಟ ರಾಜಸ್ಥಾನ್

ನಿನ್ನೆ ( ಮೇ 27 ) ನ್ಯೂ ಚಂಡೀಗಢ್‌ನ ಮುಲ್ಲಾನ್‌ಪುರ್‌ನ ಮಹಾರಾಜ ಯದವೀಂದ್ರ ಸಿಂಗ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026ರ ಎಲಿಮಿನೇಟರ್ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ರಾಜಸ್ಥಾನ್ ರಾಯಲ್ಸ್ 47 ರನ್‌ಗಳ ಗೆಲುವನ್ನು ದಾಖಲಿಸುವ ಮೂಲಕ ಕ್ವಾಲಿಫಯರ್ 2ಗೆ ಎಂಟ್ರಿ ಕೊಟ್ಟಿದ್ದು, ಸೋತ ಹೈದರಾಬಾದ್ ಟೂರ್ನಿಯಿಂದ ಎಲಿಮಿನೇಟ್ ಆಗಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್ ವೈಭವ್ ಸೂರ್ಯವಂಶಿ ಹಾಗೂ ಧ್ರುವ್ ಜುರೆಲ್ ಅಬ್ಬರದ ಆಟದ ನೆರವಿನಿಂದ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 243 ರನ್ ಕಲೆಹಾಕಿ ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ 244 ರನ್‌ಗಳ ಗುರಿಯನ್ನು ನೀಡಿತು. ಈ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾದ ಸನ್‌ರೈಸರ್ಸ್ ಹೈದರಾಬಾದ್ 19.2 ಓವರ್‌ಗಳಲ್ಲಿ 196 ರನ್‌ಗಳಿಗೆ ಆಲ್‌ಔಟ್ ಆಯಿತು.

ರಾಜಸ್ಥಾನ್ ರಾಯಲ್ಸ್ ಇನ್ನಿಂಗ್ಸ್: ತಂಡದ ಪರ ಆರಂಭಿಕರಾಗಿ ವೈಭವ್ ಸೂರ್ಯವಂಶಿ ಹಾಗೂ ಯಶಸ್ವಿ ಜೈಸ್ವಾಲ್ ಕಣಕ್ಕಿಳಿದರು. ಈ ಜೋಡಿ 8 ಓವರ್‌ಗಳಲ್ಲಿ 125 ರನ್‌ಗಳ ಜತೆಯಾಟವನ್ನಾಡಿತು. ವೈಭವ್ ಸೂರ್ಯವಂಶಿ ಕೇವಲ 29 ಎಸೆತಗಳಲ್ಲಿ 5 ಬೌಂಡರಿ ಹಾಗೂ 12 ಸಿಕ್ಸರ್ ಸಹಿತ 97 ರನ್ ಬಾರಿಸಿದರೆ, ಯಶಸ್ವಿ ಜೈಸ್ವಾಲ್ 29 ರನ್ ಬಾರಿಸಿದರು. ವೈಭವ್ ವಿಕೆಟ್ ಬಿದ್ದ ಬಳಿಕ ಕಣಕ್ಕಿಳಿದು ಅಬ್ಬರಿಸಿದ ಧ್ರುವ್ ಜುರೆಲ್ 21 ಎಸೆತಗಳಲ್ಲಿ 5 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 50 ರನ್ ಬಾರಿಸಿ ತಂಡದ ರನ್ ವೇಗವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸಿದರು. ನಾಯಕ ರಿಯಾನ್ ಪರಾಗ್ 12 ಎಸೆತಗಳಲ್ಲಿ 26 ರನ್ ಬಾರಿಸಿದರೆ, ಡೊನೊವನ್ ಫೆರೆರಾ 12, ದಸುನ್ ಶನಕ 5, ಜೋಫ್ರಾ ಆರ್ಚರ್ 4, ನಾಂದ್ರೆ ಬರ್ಗರ್ 1, ಸುಶಾಂತ್ ಮಿಶ್ರಾ ಅಜೇಯ 1 ರನ್ ಹಾಗೂ ರವೀಂದ್ರ ಜಡೇಜಾ ಅಜೇಯ 12 ರನ್ ಗಳಿಸಿದರು.
ಸನ್ ರೈಸರ್ಸ್ ಹೈದರಾಬಾದ್ ಪರ ಪ್ರಫುಲ್ ಹಿಂಗೆ ಮೂರು ವಿಕೆಟ್, ಈಶಾನ್ ಮಲಿಂಗ, ಶಿವಾಂಗ್ ಕುಮಾರ್ ಹಾಗೂ ನಿತಿಶ್ ಕುಮಾರ್ ರೆಡ್ಡಿ ತಲಾ ಒಂದೊಂದು ವಿಕೆಟ್ ಪಡೆದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸನ್ ರೈಸರ್ಸ್ ಹೈದರಾಬಾದ್ ಇನ್ನಿಂಗ್ಸ್: ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಅಭಿಷೇಕ್ ಶರ್ಮಾ ಎರಡನೇ ಎಸೆತಕ್ಕೆ ವಿಕೆಟ್ ಒಪ್ಪಿಸಿ ಡಕ್‌ಔಟ್ ಆದರು. ನಂತರ ಕಣಕ್ಕಿಳಿದ ಇಶಾನ್ ಕಿಶನ್ ಬೌಂಡರಿಗಳ ಸುರಿಮಳೆಗೈದು 11 ಎಸೆತಕ್ಕೆ 33 ರನ್ ಬಾರಿಸಿ ಬೇಡದ ಶಾಟ್ ಬಾರಿಸಲು ಹೋಗಿ ಔಟ್ ಆದರು. ಇನ್ನುಳಿದಂತೆ ಸ್ಮರಣ್ ರವಿಚಂದ್ರನ್ 1 ರನ್ ಹಾಗೂ ಟ್ರಾವಿಸ್ ಹೆಡ್ 17 ರನ್‌ಗೆ ಪೆವಿಲಿಯನ್ ಸೇರಿಕೊಂಡರು. ಅಲ್ಲಿಗೆ ಕೇವಲ 4.4 ಓವರ್‌ಗಳಲ್ಲಿ 57 ರನ್‌ಗೆ 4 ವಿಕೆಟ್ ಕಳೆದುಕೊಂಡ ಸನ್‌ರೈಸರ್ಸ್ ಸಂಕಷ್ಟಕ್ಕೆ ಸಿಲುಕಿಕೊಂಡಿತು. ಆಧಾರವಾಗಬೇಕಿದ್ದ ಹೆನ್‌ರಿಕ್ ಕ್ಲಾಸೆನ್ ಸಹ 18 ರನ್‌ಗೆ ಔಟ್ ಆಗಿ ಅಭಿಮಾನಿಗಳಿಗೆ ಪಂದ್ಯದ ಮೇಲೆ ನಂಬಿಕೆ ಹೋಗುವಂತೆ ಮಾಡಿದರು. ನಿತಿಶ್ ಕುಮಾರ್ ರೆಡ್ಡಿ ಹಾಗೂ ಸಲೀಲ್ ಅರೋರಾ ಅರ್ಧಶತಕದ ಜತೆಯಾಟವಾಡಿದರೂ ಗೆಲುವಿನತ್ತ ತಂಡ ಕೊಂಡೊಯ್ಯುವ ಧೈರ್ಯ ಮಾಡಲಿಲ್ಲ. ನಿತಿಶ್ ಕುಮಾರ್ ರೆಡ್ಡಿ 38 ಹಾಗೂ ಸಲೀಲ್ ಅರೋರಾ 35 ರನ್ ಗಳಿಸಿದರು. ನಾಯಕ ಪ್ಯಾಟ್ ಕಮಿನ್ಸ್ ಕೇವಲ 1 ರನ್, ಶಿವಾಂಗ್ ಕುಮಾರ್ 27, ಈಶಾನ್ ಮಲಿಂಗ 5 ಹಾಗೂ ಸಕಿಬ್ ಹೊಸೈನ್ ಅಜೇಯ 5 ರನ್ ಕಲೆಹಾಕಿದರು.

ರಾಜಸ್ಥಾನ್ ರಾಯಲ್ಸ್ ಪರ ಜೋಫ್ರಾ ಆರ್ಚರ್ ಮೂರು ವಿಕೆಟ್, ನಾಂದ್ರೆ ಬರ್ಗರ್, ಸುಶಾಂತ್ ಮಿಶ್ರಾ ಹಾಗೂ ರವೀಂದ್ರ ಜಡೇಜಾ ತಲಾ ಎರಡು ವಿಕೆಟ್ ಪಡೆದರೆ, ಯಶ್ ರಾಜ್ ಪೂಂಜಾ ಒಂದು ವಿಕೆಟ್ ಪಡೆದರು.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular