HomeIPL 2026IPL 2026: 'ಹೆಡ್ ನಿನ್ನ ಹೆಂಡತಿಯ ಒಂದು ರಾತ್ರಿ ರೇಟ್ ಎಷ್ಟು? 6 ಸಾವಿರಕ್ಕೆಲ್ಲ ಬರ್ತಾಳೆ';...

IPL 2026: ‘ಹೆಡ್ ನಿನ್ನ ಹೆಂಡತಿಯ ಒಂದು ರಾತ್ರಿ ರೇಟ್ ಎಷ್ಟು? 6 ಸಾವಿರಕ್ಕೆಲ್ಲ ಬರ್ತಾಳೆ’; ಕೊಹ್ಲಿ ಅಭಿಮಾನಿಗಳ ಕೀಳು ಮನಸ್ಥಿತಿ ಬಹಿರಂಗ!

ನಿನ್ನೆ ( ಮೇ 22 ) ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026ರ ಲೀಗ್ ಹಂತದ 67ನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸನ್ ರೈಸರ್ಸ್ ಹೈದರಾಬಾದ್ 55 ರನ್‌ಗಳ ಭರ್ಜರಿ ಗೆಲುವನ್ನು ದಾಖಲಿಸಿತು.

ಈ ಪಂದ್ಯ ಉಭಯ ತಂಡಗಳ ಪ್ಲೇಆಫ್ ಸುತ್ತಿನ ಕ್ವಾಲಿಫಯರ್ ಪಂದ್ಯವನ್ನು ನಿರ್ಣಯಿಸುತ್ತಿದ್ದ ಕಾರಣದಿಂದಾಗಿ ಮಹತ್ವ ಪಡೆದುಕೊಂಡಿತ್ತು. 256 ರನ್‌ಗಳ ಗುರಿ ನೀಡಿದ್ದ ಸನ್ ರೈಸರ್ಸ್ ಬೆಂಗಳೂರನ್ನು 166 ರನ್ ಒಳಗೆ ಕಟ್ಟಿಹಾಕಿದರೆ ಎರಡನೇ ಸ್ಥಾನಕ್ಕೇರಿ ಕ್ವಾಲಿಫಯರ್ ಒಂದನ್ನು ಆಡುವ ಅವಕಾಶವಿತ್ತು. ಆದರೆ ಬೆಂಗಳೂರು 200 ರನ್ ಗಳಿಸಿದ ಕಾರಣ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲೇ ಮುಂದುವರಿಯಿತು ಹಾಗೂ ಗುಜರಾತ್ ಟೈಟನ್ಸ್ ಎರಡನೇ ಸ್ಥಾನದಲ್ಲಿ ಮುಂದುವರಿಯಿತು ಹಾಗೂ ಹೈದರಾಬಾದ್ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.

ಹೀಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟನ್ಸ್ ತಂಡಗಳು ಒಂದನೇ ಕ್ವಾಲಿಫಯರ್ ಪಂದ್ಯವನ್ನಾಡಲು ಅರ್ಹತೆ ಪಡೆದುಕೊಂಡರೆ, ಹೈದರಾಬಾದ್ ಎಲಿಮಿನೇಟರ್ ಪಂದ್ಯ ಪ್ರವೇಶಿಸಿತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇದು ಪಂದ್ಯದ ಫಲಿತಾಂಶದ ಕುರಿತ ಸುದ್ದಿಯಾದರೆ ಆರ್‌ಸಿಬಿಯ ವಿರಾಟ್ ಕೊಹ್ಲಿ ಹಾಗೂ ಟ್ರಾವಿಸ್ ಹೆಡ್ ನಡುವೆ ವಿವಾದ ಒಂದು ಎದ್ದಿದೆ. ಪ್ಯಾಟ್ ಕಮಿನ್ಸ್ ಬೌಲಿಂಗ್ ವೇಳೆ ವಿರಾಟ್ ಕೊಹ್ಲಿ ಸತತ ಬೌಂಡರಿ ಬಾರಿಸುತ್ತಿದ್ದರು. ಈ ವೇಳೆ ಕಮಿನ್ಸ್‌ಗೆ ಟ್ರಾವಿಸ್ ಹೆಡ್ ಸಲಹೆ ನೀಡಲು ಮುಂದಾದರು.

ಈ ವೇಳೆ ಮೂಗು ತೂರಿಸಿದ ಕೊಹ್ಲಿ ಟ್ರಾವಿಸ್ ಹೆಡ್‌ಗೆ ನೀನೇ ಬೌಲಿಂಗ್ ಮಾಡು ಬಾ ಎಂದು ಆಹ್ವಾನಿಸಿದರು. ಇದಕ್ಕೆ ಪ್ರತ್ಯುತ್ತರ ಕೊಟ್ಟ ಹೆಡ್ ನಾನು ಬೌಲಿಂಗ್‌ಗೆ ಬರುವಷ್ಟರಲ್ಲಿ ನೀನು ಔಟ್ ಆಗಿರುತ್ತೀಯ ಎಂದು ನಯವಾಗಿಯೇ ಕೌಂಟರ್ ಕೊಟ್ಟರು. ತನ್ನ ತಂಡದ ಆಟಗಾರರನ್ನು ಕೆಣಕಿದರೆ ಗಂಭೀರವಾಗಿ ಪರಿಗಣಿಸುವ ನಾಯಕ ಕಮಿನ್ಸ್ ಬೇಕಂತಲೇ ಹೆಡ್‌ಗೆ ಒಂದು ಓವರ್ ಬೌಲಿಂಗ್ ಮಾಡಲು ಕೊಟ್ಟರು. ಅದೇ ಓವರ್‌ನಲ್ಲಿ ಆರ್‌ಸಿಬಿ ನಾಯಕ ರಜತ್ ಪಟಿದಾರ್ ವಿಕೆಟ್ ಬಿತ್ತು. ಈ ಮೂಲಕ ಹೆಡ್ ಬೌಲಿಂಗ್ ಸಲಹೆಯನ್ನು ಗೇಲಿ ಮಾಡಿದ್ದ ಕೊಹ್ಲಿಗೆ ಮೊದಲ ಮುಖಭಂಗವಾಯಿತು.

ಬಳಿಕ ಪಂದ್ಯ ಮುಗಿದ ಬಳಿಕ ಇದನ್ನೇ ಮನಸಿನಲ್ಲಿ ಇಟ್ಟುಕೊಂಡ ಕೊಹ್ಲಿ ಟ್ರಾವಿಸ್ ಹೆಡ್‌ ಕೈಕುಲುಕದೇ ಹೊರಟಿದ್ದಾರೆ. ಆಡದಲ್ಲಿ ಏನೇ ಆಗಲಿ ಪಂದ್ಯ ಮುಗಿದ ಬಳಿಕ ಕೈಕುಲುಕುವುದು ಕ್ರೀಡಾಸ್ಪೂರ್ತಿ. ಇದನ್ನೇ ಮರೆತ ಕೊಹ್ಲಿ ಸ್ವತಃ ಹೆಡ್ ಕೈ ಮುಂದೆ ನೀಡಿದರೂ ಕೈಕುಲುಕದೇ ಅಹಂ ತೋರಿಸಿದ್ದಾರೆ.

ಇತ್ತ ಆಟಗಾರ ಈ ರೀತಿ ವರ್ತಿಸಿದರೆ ಅತ್ತ ಆತನ ಅಭಿಮಾನಿಗಳು ಟ್ರಾವಿಸ್ ಹೆಡ್‌ ಇನ್ಸ್ಟಾಗ್ರಾಮ್ ಖಾತೆಗೆ ನುಗ್ಗಿ ಹೆಡ್ ಹಾಗೂ ಆಕೆಯ ಪತ್ನಿಯ ಕುರಿತು ಅಸಭ್ಯ ಕಾಮೆಂಟ್ ಮಾಡಿದ್ದಾರೆ. ಕೆಲವರು ‘ಹೆಡ್ ನಿನ್ನ ಪತ್ನಿಯ ಒಂದು ರಾತ್ರಿಯ ರೇಟ್ ಎಷ್ಟು, ಆರು ಸಾವಿರಕ್ಕೆಲ್ಲ ಬರ್ತಾಳೆ’ ಎಂದು ಕೇಳಿದ್ದು, ಇನ್ನೂ ಹಲವಾರು ಕಾಮೆಂಟ್‌ಗಳು ಉಲ್ಲೇಖಿಸಲು ಆಗದ ಮಟ್ಟಕ್ಕೆ ಇವೆ. ಹೀಗೆ ಕಾಮೆಂಟ್‌ಗಳು ಹರಿದುಬಂದಿದ್ದು, ನೆಟ್ಟಿಗರು ಪೊಲೀಸರು ಈ ಖಾತೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.

ಇನ್ನೂ ಕೆಲವರು ಇದು ಕೊಹ್ಲಿ ಅಭಿಮಾನಿಗಳು ಮಾಡಿದ ಕಾಮೆಂಟ್ ಅಲ್ಲ ಕೊಹ್ಲಿ ವಿರೋಧಿಗಳು ಕೊಹ್ಲಿ ಹೆಸರು ಕೆಡಿಸುವ ಸಲುವಾಗಿ ಈ ಕೆಲಸ ಮಾಡಿದ್ದಾರ ಎಂದಿದ್ದಾರೆ. ಅದೇನೇ ಇರಲಿ, ವಿದೇಶಿ ಯುವತಿಯರು ಭಾರತದ ಬಗ್ಗೆ ವಿಭಿನ್ನ ಅಭಿಪ್ರಾಯ ಹೊಂದಿರುವಾಗ, ಕಹಿ ಘಟನೆಗಳು ನಡೆಯುತ್ತಿರುವಾಗ ಸ್ಟಾರ್ ಕ್ರಿಕೆಟಿಗನ ಪತ್ನಿಯ ಬಗ್ಗೆ ಬಹಿರಂಗವಾಗಿ ಇಂತಹ ಅಸಹ್ಯ ಕಾಮೆಂಟ್ ಮಾಡುವ ಕಾಮುಕರ ಕುರಿತು ಕ್ರಮ ಕೈಗೊಳ್ಳದೇ ಬಿಡಬಾರದು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular