HomeLatest NewsBREAKING: ಬಿಸಿಲ ಝಳ: ಹೀಟ್ ಸ್ಟ್ರೋಕ್ ಗೆ ತೆಲಂಗಾಣದಲ್ಲಿ 16 ಜನರು ಸಾವು

BREAKING: ಬಿಸಿಲ ಝಳ: ಹೀಟ್ ಸ್ಟ್ರೋಕ್ ಗೆ ತೆಲಂಗಾಣದಲ್ಲಿ 16 ಜನರು ಸಾವು

ಹೈದರಾಬಾದ್: ದೇಶದ ಹಲವು ರಾಜ್ಯಗಳಲ್ಲಿ ಬಿರುಗಾಳಿ ಮಳೆ ಅಬ್ಬರ ಜೋರಾಗಿದ್ದರೆ ಮತ್ತೊಂದೆಡೆ ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳಲ್ಲಿ ರಣ ಬಿಸಿಲು ಹೆಚ್ಚಾಗುತ್ತಿದೆ. ಕಳೆದ ಮೂರು ದಿನಗಳಿಂದ ಉಭಯ ರಾಜ್ಯಗಳಲ್ಲಿ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚಾಗಿದ್ದು, ಹಲವರು ಬಲಿಯಾಗಿದ್ದಾರೆ.

ಸುಡು ಬಿಸಿಲಿನಿಂದ ಹೀಟ್ ಸ್ಟ್ರೋಕ್ ಸಂಭವಿಸಿ ತೆಲಂಗಾಣದಲ್ಲಿ 16 ಜನರು ಸಾವನ್ನಪ್ಪಿದ್ದಾರೆ. ಬಿಸಿಲ ಝಳದಿಂದ ತೆಲಂಗಾಣದ ಜನತೆ ತತ್ತರಿಸುತ್ತಿದ್ದು, ರಾಜ್ಯಾದ್ಯಂತ ತೀವ್ರ ಬಿಸಿಗಾಳಿಯಿಂದಾಗಿ 16 ಜನರು ಸಾವನ್ನಪ್ಪಿದ್ದಾರೆ ಎಂದು ತೆಲಂಗಾಣ ಕಂದಾಯ ಸಚಿವ ಪೊಂಗುಲೇಟಿ ಶ್ರೀನಿವಾಸ ರೆಡ್ಡಿ ತಿಳಿಸಿದ್ದಾರೆ.

ಅಧಿಕಾರಿಗಳೊಂದಿಗೆ ಬಿಸಿಗಾಳಿಯ ಪರಿಸ್ಥಿತಿಯನ್ನು ಪರಿಶೀಲಿಸಿದ ಸಚಿವರು, ಜಿಲ್ಲಾಧಿಕಾರಿಗಳು ಸಲ್ಲಿಸಿದ ವರದಿಗಳ ಆಧಾರದ ಮೇಲೆ ಏಳು ಜಿಲ್ಲೆಗಳಿಂದ ಸಾವುಗಳು ವರದಿಯಾಗಿವೆ ಎಂದು ಹೇಳಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸರ್ಕಾರ ಹಂಚಿಕೊಂಡ ಮಾಹಿತಿಯ ಪ್ರಕಾರ, ಜಯಶಂಕರ್ ಭೂಪಾಲಪಲ್ಲಿಯಲ್ಲಿ 4 ಸಾವುಗಳು ವರದಿಯಾಗಿವೆ, ವಾರಂಗಲ್ ಅರ್ಬನ್, ಕರೀಂನಗರ ಮತ್ತು ನಿಜಾಮಾಬಾದ್‌ನಲ್ಲಿ ತಲಾ 3 ಸಾವುಗಳು ಸಂಭವಿಸಿವೆ. ಜೋಗುಳಂಬ ಗಡ್ವಾಲ್, ರಂಗಾ ರೆಡ್ಡಿ ಮತ್ತು ಸೂರ್ಯಪೇಟೆಯಲ್ಲಿ ತಲಾ 1 ಸಾವು ವರದಿಯಾಗಿದೆ.

ಬಿಸಿಗಾಳಿಯಿಂದ ಸಾವನ್ನಪ್ಪಿದವರ ಕುಟುಂಬಗಳಿಗೆ ರಾಜ್ಯ ಸರ್ಕಾರ ತಲಾ 4 ಲಕ್ಷ ರೂಪಾಯಿ ಪರಿಹಾರ ನೀಡಲಿದೆ ಎಂದು ಸಚಿವರು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತೆಲಂಗಾಣದ 16 ಜಿಲ್ಲೆಗಳಲ್ಲಿ 46 ಡಿಗ್ರಿ ಸೆಲ್ಸಿಯಸ್ ಗೂ ಅಧಿಕ ಉಷ್ಣತೆ ದಾಖಲಾಗಿದೆ. ಅತಿ ಹೆಚ್ಚು ತಾಪಮಾನ ದಾಖಲಾಗಿದೆ. ಧರ್ಮಾಪುರಿ, ಗಂಗಾಧಾರ, ಕಾಸ್ಪೇಟ್, ನಿಜಾಮಾಬಾದ್, ಪೆದ್ದಪಲ್ಲಿ, ಮೋತಿ, ಕೊನರಪೇಟಾ, ಖಮ್ಮಮ್ ಕೊಹೆಡಾ, ಖಾನ್ ಪುರ್, ವಾರಂಗಲ್ ನ ಪರ್ವತಗಿರಿ ಸೇರಿದಂತೆ 16 ಜಿಲ್ಲೆಗಳಲ್ಲಿ ದಾಖಲೆ ಮಟ್ಟದಲ್ಲಿ ಅತಿ ಹೆಚ್ಚು ತಾಪಮಾನ ದಾಖಲಾಗಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular