HomeLatest Newsಇಂದು ಕೊನೆ ದಿನ ಆ ತಂಡ ಗೆದ್ದರೆ ಟೂರ್ನಿಯಿಂದ ಎಲ್ಲರೂ ಔಟ್: ಸೋತರೆ ಕೆಕೆಆರ್‌ಗಿದೆ ಚಾನ್ಸ್;...

ಇಂದು ಕೊನೆ ದಿನ ಆ ತಂಡ ಗೆದ್ದರೆ ಟೂರ್ನಿಯಿಂದ ಎಲ್ಲರೂ ಔಟ್: ಸೋತರೆ ಕೆಕೆಆರ್‌ಗಿದೆ ಚಾನ್ಸ್; ಆದರೆ ಇಷ್ಟು ರನ್ ಅಂತರದಿಂದ ಗೆಲ್ಲಲೇಬೇಕು, ಇಲ್ಲವೇ ಇಷ್ಟು ಓವರ್‌ನಲ್ಲಿ ಚೇಸ್ ಮಾಡಲೇಬೇಕು!

ಇಂದು ( ಮೇ 24 ) 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಹಂತದ ಕೊನೆಯ ಪಂದ್ಯಗಳು ಜರುಗಲಿವೆ. ಮಧ್ಯಾಹ್ನ ಮುಂಬೈ ಇಂಡಿಯನ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗಲಿವೆ. ಸಂಜೆ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗಲಿವೆ.

ಈ ಬಾರಿಯ ಐಪಿಎಲ್ ಹೇಗಿದೆ ಎಂದರೆ ಕೊನೆಯ ದಿನದ ಪಂದ್ಯದ ಫಲಿತಾಂಶ ಕೊನೆಯದಾಗಿ ಪ್ಲೇಆಫ್ ಪ್ರವೇಶಿಸುವ ತಂಡವನ್ನು ನಿರ್ಧರಿಸಲಿದೆ.

ನಿನ್ನೆ ( ಮೇ 23 ) ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ ಗೆದ್ದು 15 ಅಂಕಗಳನ್ನು ಗೆದ್ದು ಪ್ಲೇಆಫ್‌ ಆಸೆಯಲ್ಲಿದೆ. ಇನ್ನು 14 ಅಂಕಗಳನ್ನು ಹೊಂದಿರುವ ರಾಜಸ್ಥಾನ್ ರಾಯಲ್ಸ್ ಇಂದು ಮುಂಬೈ ಇಂಡಿಯನ್ಸ್ ಜತೆ ಕಣಕ್ಕಿಳಿಯಲಿದ್ದು, ಈ ಪಂದ್ಯವನ್ನೇದರೂ ಗೆದ್ದರೆ 16 ಅಂಕಗಳಾಗಲಿದ್ದು, ನೇರವಾಗಿ ಪ್ಲೇಆಫ್‌ಗೆ ಪ್ರವೇಶಿಸಲಿದೆ. ಹೀಗಾಗಿ ಪಂಜಾಬ್ ಪ್ಲೇಆಫ್ ತಲುಪಲು ರಾಜಸ್ಥಾನ್ ಸೋಲಲೇಬೇಕಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಎರಡು ತಂಡಗಳು ಮಾತ್ರವಲ್ಲದೇ 13 ಪಂದ್ಯಗಳನ್ನಾಡಿ 6 ಪಂದ್ಯಗಳಲ್ಲಿ ಗೆದ್ದು 6 ಪಂದ್ಯಗಳಲ್ಲಿ ಸೋತು ಒಂದು ಪಂದ್ಯ ಡ್ರಾ ಆದ ಕಾರಣ 13 ಅಂಕ ಹೊಂದಿರುವ ಕೆಕೆಆರ್ ಸಹ ರಾಜಸ್ಥಾನ್ ಸೋತರೆ ತಾವೂ ಸಹ ಸಂಜೆ ಡೆಲ್ಲಿ ಕ್ಯಾಪಿಟಲ್ಸ್ ಜತೆ ನಡೆಯಲಿರುವ ಪಂದ್ಯವನ್ನು ಗೆದ್ದು ಪಂಜಾಬ್ ಕಿಂಗ್ಸ್ ರೀತಿ 15 ಅಂಕವನ್ನು ಹೊಂದಿ ತಾವೂ ಸಹ ಪ್ಲೇಆಫ್‌ಗೆ ಒಂದು ಕೈ ನೋಡಿಬಿಡೋಣ ಎಂಬ ಲೆಕ್ಕಾಚಾರದಲ್ಲಿದ್ದಾರೆ.

ಅವರ ಆಸೆಯಂತೆ ಇಂದು ರಾಜಸ್ಥಾನ್ ಸೋತರೆ, ಕೆಕೆಆರ್ ಡೆಲ್ಲಿ ವಿರುದ್ಧ ಮೊದಲು ಬ್ಯಾಟಿಂಗ್ ಮಾಡಿದರೆ 200 ರನ್ ಕಲೆಹಾಕಿದರೆ 77 ರನ್ ಅಥವಾ ಅದಕ್ಕಿಂತ ಅಧಿಕ ರನ್‌ಗಳ ಅಂತರದಿಂದ ಗೆಲ್ಲಬೇಕು. ಒಂದುವೇಳೆ 201 ರನ್ ಚೇಸ್ ಮಾಡಿದರೆ 12.1ರಿಂದ 12.4 ಓವರ್‌ಗಳಲ್ಲಿ ಚೇಸ್ ಮಾಡಲೇಬೇಕು. ಹೀಗೆ ಕೆಕೆಆರ್ ಪ್ಲೇಆಫ್ ಹಾದಿ ಅತಿ ಕಷ್ಟಕರವಾಗಿದೆ.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular