ಡೆಹ್ರಾಡೂನ್: ಬದರಿನಾಥದಿಂದ ಡೆಹ್ರಾಡೂನ್‌ಗೆ ಪ್ರಯಾಣಿಸುತ್ತಿದ್ದಾಗ ನಾಪತ್ತೆಯಾಗಿದ್ದ, ‘ಟ್ರಾನ್ಸ್ ಭಾರತ್ ಏವಿಯೇಷನ್ ಪ್ರೈವೇಟ್ ಲಿಮಿಟೆಡ್’ಗೆ ಸೇರಿದ ಹೆಲಿಕಾಪ್ಟರ್‌ನ ಅವಶೇಷಗಳು ಉತ್ತರಾಖಂಡದ ಚಮೋಲಿ ಜಿಲ್ಲೆಯ ಜೋಶಿಮಠದ ಬಳಿ ಪತ್ತೆಯಾಗಿವೆ.
ಈ ಘಟನೆಯ ಹಿನ್ನೆಲೆಯಲ್ಲಿ, ಮುನ್ನೆಚ್ಚರಿಕಾ ಕ್ರಮವಾಗಿ ಟ್ರಾನ್ಸ್ ಭಾಅರತ್ ಏವಿಯೇಷನ್ ನ ವಿಮಾನಯಾನ ಸಂಸ್ಥೆಯ ಎಲ್ಲಾ ಹೆಲಿಕಾಪ್ಟರ್‌ಗಳ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ.
ಜೋಶಿಮಠ ಕಣಿವೆಯ ಮೇಲೆ ಸಂಪರ್ಕ ಕಡಿದುಕೊಂಡ ಹೆಲಿಕಾಪ್ಟರ್
ಉತ್ತರಾಖಂಡ ನಾಗರಿಕ ವಿಮಾನಯಾನ ಅಭಿವೃದ್ಧಿ ಪ್ರಾಧಿಕಾರದ (UCADA) ಪ್ರಕಾರ, ‘VT-HCX’ ಎಂಬ ಕರೆ ಸಂಕೇತ (call sign) ಹೊಂದಿದ್ದ ಈ ಹೆಲಿಕಾಪ್ಟರ್, ಮಧ್ಯಾಹ್ನ ಸುಮಾರು 1:14ಕ್ಕೆ ಡೆಹ್ರಾಡೂನ್‌ನ ಸಹಸ್ರಧಾರಾಕ್ಕೆ ಹೊರಟಿತ್ತು. ಜೋಶಿಮಠ ಕಣಿವೆಯ ಮೇಲೆ ಹಾರುತ್ತಿದ್ದಾಗ ಅದು ಸಂಪರ್ಕ ಕಳೆದುಕೊಂಡಿತು ಮತ್ತು ಅದರ ಟ್ರ್ಯಾಕಿಂಗ್ ವ್ಯವಸ್ಥೆಯು ಸಿಗ್ನಲ್‌ಗಳನ್ನು ಸ್ವೀಕರಿಸುವುದನ್ನು ನಿಲ್ಲಿಸಿತು. ಆರಂಭದಲ್ಲಿ ಅದರ ನಿಖರ ಸ್ಥಳವನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ.
ಆದಾಗ್ಯೂ, ಗರ್ವಾಲ್ ಕಮಿಷನರ್ ಆನಂದ್ ಸ್ವರೂಪ್ ಅವರು, ಹೆಲಿಕಾಪ್ಟರ್ ಅಪಘಾತಕ್ಕೀಡಾಗಿದೆ ಎಂಬುದಕ್ಕೆ ಯಾವುದೇ ಅಧಿಕೃತ ದೃಢೀಕರಣವಿಲ್ಲವೆಂದೂ, ಸದ್ಯಕ್ಕೆ ಅದು ‘ನಾಪತ್ತೆಯಾಗಿದೆ’ ಎಂದು ಮಾತ್ರ ವರದಿಯಾಗಿದೆ ಎಂದೂ ತಿಳಿಸಿದರು. ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ‘ಎಕ್ಸ್’ (X) ಜಾಲತಾಣದಲ್ಲಿ ಪೋಸ್ಟ್ ಒಂದರ ಮೂಲಕ ಅಪಘಾತವನ್ನು ದೃಢಪಡಿಸಿದ ನಂತರ, ಸ್ವರೂಪ್ ಅವರ ಈ ಹೇಳಿಕೆ ಬಂದಿದೆ.
ಈ ಚಾರ್ಟರ್ಡ್ ಹೆಲಿಕಾಪ್ಟರ್ ಅನ್ನು ಒಬ್ಬ ಪ್ರಯಾಣಿಕರು ಬುಕ್ ಮಾಡಿದ್ದರು ಮತ್ತು ಅದು ಬದರಿನಾಥದಿಂದ ಸಹಸ್ರಧಾರಾಕ್ಕೆ ಪ್ರಯಾಣಿಸುತ್ತಿತ್ತು ಎಂದು ಸ್ವರೂಪ್ ತಿಳಿಸಿದರು. ಜೋಶಿಮಠದ ಮೇಲ್ಭಾಗದಲ್ಲಿ ಅದು ಕೊನೆಯದಾಗಿ ಪತ್ತೆಯಾಗಿತ್ತು, ಆ ನಂತರ ಸಂಪರ್ಕ ಕಡಿದುಕೊಂಡಿತು. ಇದರಲ್ಲಿ ಒಬ್ಬ ಪೈಲಟ್ ಮತ್ತು ಐವರು ಪ್ರಯಾಣಿಕರಿದ್ದರು. UCADA ನೀಡಿರುವ ಮಾಹಿತಿಯ ಪ್ರಕಾರ, ಈ ಐವರು ಪ್ರಯಾಣಿಕರು ಬೆಂಗಳೂರಿನವರು ಎಂದು ತಿಳಿದುಬಂದಿದೆ.
ಹೆಲಿಕಾಪ್ಟರ್ ದುರಂತದಲ್ಲಿ ಪೈಲಟ್ ಸೇರಿ ಆರು ಜನರು ಸಾವನ್ನಪ್ಪಿದ್ದು, ಅವರಲ್ಲಿ ಐವರು ಬೆಂಗಳೂರು ಮೂಲದವರು. ಮೃತರನ್ನು ಕ್ಯಾಪ್ಟನ್ ಹಿಮಾಂಶು ಎಂದು ಗುರುತಿಸಲಾಗಿದೆ. ಪ್ರಯಾಣಿಕರಾದ ಐವರು ವ್ಯಕ್ತಿಗಳನ್ನು ಪ್ರತಾಪ, ಅರುಣ್, ಶಂಕರ್ ಗೌಡ, ಸುಧೀರ್ ಕೆ. ಮತ್ತು ಎಚ್.ಎಸ್. ನಟರಾಜ ಎಂದು ಗುರುತಿಸಲಾಗಿದೆ.
ಇವರಲ್ಲಿ ಅರುಣ್ ಬೆಂಗಳುರು ಸಿಸಿಬಿ ಇನ್ಸ್ ಪೆಕ್ಟರ್. ಚಾಅರ್ ಧಾಮ್ ಯಾತ್ರೆಗೆಂದು ಸ್ನೇಹಿತರ ಜೊತೆಗೆ ತೆರಳಿದ್ದರು. ಬದರಿನಾಥ ದೇವರ ದರ್ಶನ ಪಡೆದು ಜೋಶಿಮಠದತ್ತ ವಾಪಸ್ ಆಗುತ್ತಿದ್ದಾಗ ವಿಮಾನ ದುರಂತ ಸಂಭವಿಸಿದೆ.
ಉತ್ತರಾಖಂಡದಲ್ಲಿ ಹೆಲಿಕಾಪ್ಟರ್ ಪತನ ಪ್ರಕರಣ: ಸಿಸಿಬಿ ಇನ್ಸ್ ಪೆಕ್ಟರ್ ಅರುಣ್ ಸಾಲಂಕೆ ಸೇರಿ ಬೆಂಗಳೂರು ಮೂಲದ ಐವರು ದುರ್ಮರಣ
ಡೆಹ್ರಾಡೂನ್: ಉತ್ತರಾಖಂಡದಲ್ಲಿ ಸಂಭವಿಸಿದ ಹೆಲಿಕಾಪ್ಟರ್ ದುರಂತದಲ್ಲಿ ಪೈಲಟ್ ಸೇರಿ ಆರು ಜನರು ಸಾವನ್ನಪ್ಪಿದ್ದು, ಅವರಲ್ಲಿ ಐವರು ಬೆಂಗಳೂರು ಮೂಲದವರಾಗಿದ್ದಾರೆ.
ಬೆಂಗಳೂರಿನ ಸಿಸಿಬಿ ಇನ್ಸ್ ಪೆಕ್ಟರ್ ಅರುಣ್ ಸಾಅಲಂಕೆ ಸೇರಿದಂತೆ ಬೆಂಗಳೂರು ಮೂಲದ ಐವರು ಮೃತಪಟ್ಟಿದ್ದಾರೆ. ನಾಲ್ವರು ಸ್ನೇಹಿತರ ಜೊತೆಗೆ ಅರುಣ್ ಸಾಲಂಕೆ ಛಾರ್ ಧಾಮ್ ಯಾತ್ರೆಗೆ ತೆರಳಿದ್ದರು. ಬದರಿನಾಥ ದೇವರ ದರ್ಶನ ಪಡೆದು ಹೆಲಿಕಾಪ್ಟರ್ ನಲ್ಲಿ ಜೊಶಿಮಠದತ್ತ ವಾಪಸ್ ಆಗುತ್ತಿದ್ದಾಗ ಚಮೋಲಿ ಜಿಲ್ಲೆಯ ಬಳಿ ಹೆಲಿಕಾಪ್ಟರ್ ಪತನಗೊಂಡಿದೆ.
ಜೋಶಿಮಠದ ಕಣಿವೆಯತ್ತ ಹೆಲಿಕಾಪ್ಟರ್ ಬರುತ್ತಿದ್ದಂತೆ ವಿಮಾನ ನಾಪತ್ತೆಯಾಗಿದ್ದು, ಸಂಪರ್ಕ ಕಡಿತಗೊಂಡಿದೆ. ಚಮೋಲಿ ಜಿಲ್ಲೆಯಲ್ಲಿ ಹೆಲಿಕಾಪ್ಟರ್ ಪತನಗೊಂಡಿದೆ. ಪೈಲಟ್ ಸೇರಿ ಬೆಂಗಳೂರಿನ ಐವರು ಸೇರಿದಂತೆ ಒಟ್ಟು ಆರು ಜನರು ಸಾವನ್ನಪ್ಪಿದ್ದಾರೆ.
ಬೆಂಗಳೂರಿನ ಸಿಸಿಬಿ ಪೊಲೀಸ್ ಇನ್ಸ್‌ಪೆಕ್ಟರ್ ಕೂಡ ಒಬ್ಬರಾಗಿದ್ದಾರೆ. ಪೊಲೀಸ್ ಇನ್ಸ್ಪೆಕ್ಟರ್ ಅರುಣ್ ಸಾಲಂಕಿ ಸಾವನ್ನಪ್ಪಿದ್ದಾರೆ. ಸ್ನೇಹಿತರು ಹಾಗೂ ಕುಟುಂಬಸ್ಥರೊಂದಿಗೆ ಚಾರ್‌ಧಾಮ್ ಪ್ರವಾಸಕ್ಕೆ ತೆರಳಿದ್ದ ಅರುಣ್ ಸಾಲಂಕಿ ದುರಂತದಲ್ಲಿ ಸಾವಿಗೀಡಾಗಿದ್ದಾರೆ. ಮೃತ ಅರುಣ್ ಸಾಲಂಕಿ ಅವರಿಗೆ ಇಬ್ಬರು ಮಕ್ಕಳಿದ್ದಾರೆ ಎಂದು ತಿಳಿದುಬಂದಿದೆ.
ಹೆಲಿಕಾಪ್ಟರ್ ದುರಂತದಲ್ಲಿ ಮಡಿದವರನ್ನು ಪೈಲಟ್ ಹಿಮಾಂಶು ಹಾಗೂ ಅವರ ಜೊತೆಗಿದ್ದ ಬೆಂಗಳೂರು ಮೂಲದ ಇನ್ಸ್ ಪೆಕ್ಟರ್ ಅರುಣ್, ಪ್ರತಾಪ, ಶಂಕರ್ ಗೌಡ, ಸುಧೀರ್, ಕೆ ಹೆಎಸ್ ನಟರಾಜ ಎಂದು ಗುರುತಿಸಲಾಗಿದೆ.
ಇನ್ನೂ ಘಟನೆ ಬಗ್ಗೆ ಮೊದಲ ಪ್ರತಿಕ್ರಿಯೆ ನೀಡಿರುವ ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ ಅವರು, ಜೋಶಿಮಠ ಸಮೀಪದ ಚಾಯೀ ಗ್ರಾಮದ ಬಳಿ ಸಂಭವಿಸಿರುವ ಹೆಲಿಕಾಪ್ಟರ್ ಅಪಘಾತ ನಿಜಕ್ಕೂ ದುರದೃಷ್ಟಕರ. ಈ ಬಗ್ಗೆ ಮಾಹಿತಿ ಬಂದಿದೆ. ಜಿಲ್ಲಾಡಳಿತ, ವಿಪತ್ತು ನಿರ್ವಹಣಾ ಇಲಾಖೆ ಮತ್ತು ಎಸ್‌ಡಿಆರ್‌ಎಫ್ ಜಂಟಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ. ನಾನು ಇಡೀ ಘಟನೆಯನ್ನ ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದೇನೆ. ಗಂಭೀರವಾಗಿ ಗಾಯಗೊಂಡವರನ್ನ ಉತ್ತಮ ಚಿಕಿತ್ಸೆಗಾಗಿ ತಕ್ಷಣವೇ ಏರ್ ಲಿಫ್ಟ್ ಮಾಡಲು ಸೂಚನೆ ನೀಡಲಾಗಿದೆ. ಪ್ರಯಾಣಿಕರು ಸುರಕ್ಷಿತವಾಗಿ ಮರಳಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ.

