HomeIPL 2026ಐಪಿಎಲ್‌ನ ಕೆಲ ಆಟಗಾರರ ಮೇಲೆ ಹನಿಟ್ರ್ಯಾಪ್ ನಡೆದಿದೆ; ಯಾರು ಆ ಆಟಗಾರರು? ಜಗತ್ತಿನ ಶ್ರೀಮಂತ ಲೀಗ್...

ಐಪಿಎಲ್‌ನ ಕೆಲ ಆಟಗಾರರ ಮೇಲೆ ಹನಿಟ್ರ್ಯಾಪ್ ನಡೆದಿದೆ; ಯಾರು ಆ ಆಟಗಾರರು? ಜಗತ್ತಿನ ಶ್ರೀಮಂತ ಲೀಗ್ ಬಗ್ಗೆ ಕೇಳಿಬರುತ್ತಿದೆ ಶಾಕಿಂಗ್ ಸುದ್ದಿ!

ನಿನ್ನೆ ( ಮೇ 7 ) ಸಂಜೆ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಮಾತನಾಡಿ ಐಪಿಎಲ್‌ನಲ್ಲಿ ಆಟಗಾರರ ಜತೆ ಅನಧಿಕೃತ ವ್ಯಕ್ತಿಗಳು ಓಡಾಡುತ್ತಿದ್ದು, ಈ ಕುರಿತು ಬಿಸಿಸಿಐ ಸಲಹಾ ನಿಯಮಗಳ ಪಟ್ಟಿಯನ್ನು ಬಿಡುಗಡೆಗೊಳಿಸುವುದಾಗಿ ತಿಳಿಸಿದ್ದರು.

ಆಟಗಾರರ ಹಾಗೂ ಸಿಬ್ಬಂದಿಗಳ ಹೊಟೇಲ್ ರೂಮ್‌ಗಳಿಗೂ ಅನಧಿಕೃತ ಆಟಗಾರರು ಪ್ರವೇಶಿಸುತ್ತಿದ್ದು, ಇದು ಬಿಸಿಸಿಐ ಗಮನಕ್ಕೆ ಬಂದಿದೆ ಎಂದು ತಿಳಿಸಿದ್ದರು. ಅದರಂತೆ ಬಿಸಿಸಿಐ ಹಲವು ಸಲಹಾ ನಿಯಮಗಳನ್ನು ಪ್ರಕಟಿಸಿದ್ದು, ಈ ಪಟ್ಟಿಯಲ್ಲಿ ಹನಿಟ್ರ್ಯಾಪ್ ಕುರಿತು ಉಲ್ಲೇಖಿಸಿರುವುದು ಆಘಾತಕಾರಿ ವಿಷಯವಾಗಿದೆ.

ಈ ಪಟ್ಟಿಯಲ್ಲಿ ಆಟಗಾರರ ಮೇಲೆ ಹನಿಟ್ರ್ಯಾಪ್ ಮಾಡುವ ಸಾಧ್ಯತೆಗಳಿದ್ದು, ಆಟಗಾರರು ಎಚ್ಚರಿಕೆಯಿಂದ ಇರಬೇಕು ಎಂದು ಸಲಹೆ ನೀಡಿದೆ. ಇನ್ನು ಹೊಟೇಲ್‌ಗಳಿಗೆ ಯಾರೆಲ್ಲ ಬಂದು ಹೋಗಿದ್ದಾರೋ ಅವರ ಮಾಹಿತಿಗಳನ್ನು ಕಡ್ಡಾಯವಾಗಿ ಇಟ್ಟುಕೊಳ್ಳಿ ಎಂದು ಸಲಹೆ ನೀಡಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇನ್ನು ಹನಿಟ್ರ್ಯಾಪ್ ಎಂದರೆ ಲೈಂಗಿಕ ಕಾರಣಕ್ಕಾಗಿಯೇ ಆಗಿರಬೇಕೆಂದಿಲ್ಲ. ಆಟದ ಕುರಿತ ಮಾಹಿತಿ ತಿಳಿದುಕೊಳ್ಳಲೂ ಸಹ ಟ್ರ್ಯಾಪ್ ಮಾಡಿರಬಹುದು. ಹೀಗಾಗಿಯೇ ಬಿಸಿಸಿಐ ಭ್ರಷ್ಟಾಚಾರ ವಿರೋಧಿ ಕ್ರಮಗಳನ್ನು ಮತ್ತಷ್ಟು ಬಿಗಿಪಡಿಸಲು ಮುಂದಾಗಿದೆ.

ಇನ್ನು ಹನಿಟ್ರ್ಯಾಪ್ ಕುರಿತು ಉಲ್ಲೇಖವಾಗುತ್ತಿದ್ದಂತೆ, ಸಾಮಾಜಿಕ ಜಾಲತಾಣದಲ್ಲಿ ಕೆಲವರು ಈ ಕುರಿತು ಬರೆದುಕೊಳ್ಳುತ್ತಿದ್ದು, ಆಟಗಾರರ ಪ್ರೇಯಸಿಯರೇ ಹನಿಟ್ರ್ಯಾಪ್‌ ಮಾಡಿದ್ದಾರೆ ಎಂದು ಟ್ವೀಟ್ ಮಾಡಿ ಸಂಶಯ ಹೊರಹಾಕಿದ್ದಾರೆ.

ಒಟ್ಟಿನಲ್ಲಿ ಜಗತ್ತಿನ ಶ್ರೀಮಂತ ಕ್ರಿಕೆಟ್ ಲೀಗ್ ಸದ್ಯ ಬೇಡದ ವಿಷಯಕ್ಕೆ ಟ್ರೆಂಡ್ ಆಗುತ್ತಿದ್ದು, ಬಿಸಿಸಿಐ ಉಲ್ಲೇಖಿಸಿರುವ ಈ ಹನಿಟ್ರ್ಯಾಪ್ ಹಿಂದಿನ ಸತ್ಯಾಂಶ ಏನು, ಏತಕ್ಕಾಗಿ ಹನಿಟ್ರ್ಯಾಪ್ ನಡೆದಿದೆ, ಯಾವ ಆಟಗಾರರ ಹೆಸರು ಈ ಮಹಾ ವಿವಾದದಲ್ಲಿ ತಳುಕಿಹಾಕಿಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular