ನಿನ್ನೆ ( ಏಪ್ರಿಲ್ 27 ) ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026ರ ಲೀಗ್ ಹಂತದ 39ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು 9 ವಿಕೆಟ್ಗಳ ಪ್ರಚಂಡ ಗೆಲುವನ್ನು ದಾಖಲಿಸಿತು.
ಪಂದ್ಯದಲ್ಲಿ ಟಾಸ್ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ರಜತ್ ಪಟಿದಾರ್ ಬೌಲಿಂಗ್ ಆರಿಸಿಕೊಂಡು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಡೆಲ್ಲಿ ಕ್ಯಾಪಿಟಲ್ಸ್ ಆರ್ಸಿಬಿ ಬೌಲಿಂಗ್ ದಾಳಿಗೆ ತತ್ತರಿಸಿ 16.3 ಓವರ್ಗಳಲ್ಲಿ 75 ರನ್ಗೆ ಆಲ್ಔಟ್ ಆಗಿ ಆರ್ಸಿಬಿಗೆ 76 ರನ್ಗಳ ಗುರಿ ನೀಡಿತು. ಈ ಗುರಿಯನ್ನು ಬೆನ್ನಟ್ಟಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು 6.3 ಓವರ್ಗಳಲ್ಲಿ ಕೇವಲ 1 ವಿಕೆಟ್ ನಷ್ಟಕ್ಕೆ 77 ರನ್ ಬಾರಿಸಿತು.
ಒಂದೆಡೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬೌಲರ್ಗಳು ವಿಕೆಟ್ ಉರುಳಿಸಿ ಬೌಲಿಂಗ್ ಸುಂಟರಗಾಳಿ ಎಬ್ಬಿಸಿದರೆ, ಡೆಲ್ಲಿ ಕ್ಯಾಪಿಟಲ್ಸ್ ಬ್ಯಾಟಿಂಗ್ ವೇಳೆ ಅರುಣ್ ಜೇಟ್ಲಿ ಕ್ರೀಡಾಂಗಣದ ಬಳಿ ಎದ್ದ ಮಹಾ ಗಾಳಿ ಮೈದಾನದಲ್ಲಿದ್ದ ಕ್ರಿಕೆಟ್ ಅಭಿಮಾನಿಗಳು, ದೇಶಿ ಹಾಗೂ ವಿದೇಶಿ ಕ್ರಿಕೆಟಿಗರಿಗೆ ದೆಹಲಿ ಸ್ವಚ್ಛತೆಯ ಚಿತ್ರಣವನ್ನು ಬಿಚ್ಚಿಟ್ಟಿತು.
ಒಂದೇ ಸಮನೆ ಬೀಸಿ ಬಂದ ಗಾಳಿಗೆ ಪ್ಲಾಸ್ಟಿಕ್ ಕವರ್ಗಲು, ಪೇಪರ್ಗಳು ತೇಲಿಬಂದು ಮೈದಾನದ ತುಂಬೆಲ್ಲ ಹಾರಾಡಿದವು. ಇನ್ನು ಕಸದ ರಾಶಿ ಮೈದಾನದಲ್ಲಿ ಹಾರಾಡಿದ ಪರಿಣಾಮ ಕೆಲ ಕ್ಷಣ ಪಂದ್ಯ ನಿಂತಿತ್ತು. ಮೈದಾನದಲ್ಲಿದ್ದ ಆಟಗಾರರು ಧೂಳು ಹಾಗೂ ಕಸದಿಂದ ಪಾರಾಗಲು ಮುಖ ಮುಚ್ಚಿಕೊಳ್ಳಲಾರಂಭಿಸಿದರು.
ಆರ್ಸಿಬಿ ಕಣದಲ್ಲಿದ್ದ ಕಾರಣ ವಿಶ್ವದ ಹಲವು ದೇಶಗಳಲ್ಲಿ ಪಂದ್ಯವನ್ನು ವೀಕ್ಷಿಸುತ್ತಿದ್ದ ಜನರು ಭಾರತದ ರಾಷ್ಟ್ರ ರಾಜಧಾನಿಯ ಸ್ವಚ್ಛತೆ ಕಂಡು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಶುರುವಿಟ್ಟುಕೊಂಡಿದ್ದಾರೆ.

