ಸಾರ್ವಜನಿಕ ವಲಯದ ಬ್ಯಾಂಕ್‌ನಲ್ಲಿ ಉದ್ಯೋಗ ಪಡೆಯಲು ಕಾಯುತ್ತಿರುವ ಅಭ್ಯರ್ಥಿಗಳಿಗೆ ಇಂಡಿಯನ್ ಓವರ್‌ಸೀಸ್ ಬ್ಯಾಂಕ್ (IOB) ಮತ್ತೊಂದು ಬೃಹತ್ ನೇಮಕಾತಿ ಅಧಿಸೂಚನೆ ಹೊರಡಿಸಿದೆ. ದೇಶಾದ್ಯಂತ ಇರುವ ಬ್ಯಾಂಕ್ ಶಾಖೆಗಳಲ್ಲಿ ವಿವಿಧ ವಿಭಾಗಗಳ ಸ್ಪೆಷಲಿಸ್ಟ್ ಹಾಗೂ ಜನರಲಿಸ್ಟ್ ಹುದ್ದೆಗಳನ್ನು ನಿಯಮಿತ ಆಧಾರದ ಮೇಲೆ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಈ ನೇಮಕಾತಿಯಡಿ ಒಟ್ಟು 291 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಅರ್ಹತೆ ಮತ್ತು ಅಗತ್ಯ ಅನುಭವ ಹೊಂದಿರುವ ಅಭ್ಯರ್ಥಿಗಳು ಆಗಸ್ಟ್ 29, 2026ರಿಂದ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ವಿವಿಧ ವಿಭಾಗಗಳಲ್ಲಿ ಖಾಲಿ ಹುದ್ದೆಗಳು
IOB ಹೊರಡಿಸಿರುವ ಅಧಿಸೂಚನೆಯ ಪ್ರಕಾರ ಹುದ್ದೆಗಳ ವಿವರ ಹೀಗಿದೆ:
-
ಮ್ಯಾನೇಜರ್ – ಬ್ರಾಂಚ್ ಮ್ಯಾನೇಜ್‌ಮೆಂಟ್: 100 ಹುದ್ದೆಗಳು
-
ಮ್ಯಾನೇಜರ್, ಸೀನಿಯರ್ ಮ್ಯಾನೇಜರ್ – ಐಟಿ: 75 ಹುದ್ದೆಗಳು
-
ಮ್ಯಾನೇಜರ್, ಸೀನಿಯರ್ ಮ್ಯಾನೇಜರ್ – ಇನ್ಫರ್ಮೇಷನ್ ಸೆಕ್ಯುರಿಟಿ: 8 ಹುದ್ದೆಗಳು
-
ಮ್ಯಾನೇಜರ್, ಸೀನಿಯರ್ ಮ್ಯಾನೇಜರ್ – IS ಆಡಿಟ್: 7 ಹುದ್ದೆಗಳು
-
ಅಸಿಸ್ಟೆಂಟ್ ಮ್ಯಾನೇಜರ್ – ಸೆಕ್ಯುರಿಟಿ: 25 ಹುದ್ದೆಗಳು
-
ಸೀನಿಯರ್ ಮ್ಯಾನೇಜರ್ – ಡೇಟಾಬೇಸ್, ನೆಟ್‌ವರ್ಕ್ ಅಡ್ಮಿನಿಸ್ಟ್ರೇಟರ್: 15 ಹುದ್ದೆಗಳು
-
ಸೀನಿಯರ್ ಮ್ಯಾನೇಜರ್ – ಸೈಬರ್ ಸೆಕ್ಯುರಿಟಿ ಅಡ್ಮಿನಿಸ್ಟ್ರೇಟರ್: 5 ಹುದ್ದೆಗಳು
-
ಮ್ಯಾನೇಜರ್, ಸೀನಿಯರ್ ಮ್ಯಾನೇಜರ್ – ಕ್ರೆಡಿಟ್: 50 ಹುದ್ದೆಗಳು
-
ಸೀನಿಯರ್ ಮ್ಯಾನೇಜರ್ – ರಿಸ್ಕ್: 6 ಹುದ್ದೆಗಳು
ಶೈಕ್ಷಣಿಕ ಅರ್ಹತೆ
ಹುದ್ದೆಗೆ ಅನುಗುಣವಾಗಿ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ, BE, B.Tech, ME, M.Tech, MBA (ಫೈನಾನ್ಸ್) ಅಥವಾ ತತ್ಸಮಾನ ಕೋರ್ಸ್‌ಗಳಲ್ಲಿ ವಿದ್ಯಾರ್ಹತೆ ಹೊಂದಿರಬೇಕು.
ಇದರ ಜೊತೆಗೆ ಸಂಬಂಧಿತ ಹುದ್ದೆಗೆ ನಿಗದಿಪಡಿಸಿರುವಂತೆ ಉದ್ಯೋಗ ಅನುಭವವೂ ಅಗತ್ಯವಿರುತ್ತದೆ. ಪ್ರತಿ ಹುದ್ದೆಗೆ ಸಂಬಂಧಿಸಿದ ನಿರ್ದಿಷ್ಟ ವಿದ್ಯಾರ್ಹತೆ ಮತ್ತು ಅನುಭವದ ವಿವರಗಳನ್ನು ಅಧಿಕೃತ ಅಧಿಸೂಚನೆಯಲ್ಲಿ ಪರಿಶೀಲಿಸಬೇಕು.
ಅಭ್ಯರ್ಥಿಗಳ ವಯೋಮಿತಿ ಹುದ್ದೆಗೆ ಅನುಗುಣವಾಗಿ 25ರಿಂದ 45 ವರ್ಷಗಳವರೆಗೆ ಇರಬೇಕು. ಸರ್ಕಾರದ ನಿಯಮಗಳ ಪ್ರಕಾರ ಅರ್ಹ ಮೀಸಲು ವರ್ಗದ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗುತ್ತದೆ.
ಅರ್ಜಿ ಸಲ್ಲಿಕೆಗೆ ಕೊನೆಯ ದಿನ
ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಸೆಪ್ಟೆಂಬರ್ 15, 2026ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಅರ್ಜಿ ಶುಲ್ಕ:
-
ಜನರಲ್/OBC/EWS: ₹1,000
-
SC/ST/PwBD/ESM/ಮಹಿಳಾ ಅಭ್ಯರ್ಥಿಗಳು: ₹175
ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ?
ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಸ್ಕ್ರೀನಿಂಗ್, ಆನ್‌ಲೈನ್ CBT ಪರೀಕ್ಷೆ ಮತ್ತು ಸಂದರ್ಶನ ನಡೆಯಲಿದೆ.
ಆನ್‌ಲೈನ್ ಪರೀಕ್ಷೆಯಲ್ಲಿ ಪಡೆದ ಅಂಕಗಳಿಗೆ 80% ವೇಯಿಟೇಜ್ ಹಾಗೂ ಸಂದರ್ಶನಕ್ಕೆ 20% ವೇಯಿಟೇಜ್ ನೀಡಲಾಗುತ್ತದೆ. ಇದರ ಆಧಾರದ ಮೇಲೆ ಅಂತಿಮ ಮೆರಿಟ್ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ. ಆನ್‌ಲೈನ್ ಪರೀಕ್ಷೆಯಲ್ಲಿ ಪ್ರತಿ ತಪ್ಪು ಉತ್ತರಕ್ಕೆ 1/4 ಅಂಕದ ನೆಗೆಟಿವ್ ಮಾರ್ಕಿಂಗ್ ಇರಲಿದೆ. ಹೀಗಾಗಿ ಅಭ್ಯರ್ಥಿಗಳು ಉತ್ತರಗಳನ್ನು ಆಯ್ಕೆ ಮಾಡುವಾಗ ಎಚ್ಚರಿಕೆ ವಹಿಸಬೇಕು.
₹1.05 ಲಕ್ಷದವರೆಗೆ ವೇತನ
ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಹುದ್ದೆಗೆ ಅನುಗುಣವಾಗಿ ₹48,480ರಿಂದ ₹1,05,280ರವರೆಗೆ ಮೂಲ ವೇತನ (Basic Pay) ದೊರೆಯಲಿದೆ.ಇದರ ಜೊತೆಗೆ ಬ್ಯಾಂಕ್‌ನ ನಿಯಮಗಳ ಪ್ರಕಾರ ವಿವಿಧ ಅಲವಾನ್ಸ್‌ಗಳು ಮತ್ತು ಇತರ ಸೌಲಭ್ಯಗಳು ಕೂಡ ಲಭ್ಯವಾಗಲಿವೆ.

