ಚಿತ್ರದುರ್ಗ : ಕೈಮಗ್ಗ ಮತ್ತು ಜವಳಿ ಇಲಾಖೆ ವತಿಯಿಂದ ನೇಕಾರ ಸಮ್ಮಾನ್ ಯೋಜನೆಯಡಿ 2025-26ನೇ ಸಾಲಿನಲ್ಲಿ ನೋಂದಣಿಯಾದ ನೇಕಾರರು ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ (ಪಿ.ಎಂ.ಜೆ.ಜೆ.ಬಿ.ವೈ) ಮತ್ತು ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (ಪಿ.ಎಂ.ಎಸ್.ಬಿ.ವೈ) ಅಡಿ ವಿಮಾ ಸೌಲಭ್ಯ ಪಡೆಯಲು ಆರ್ಥಿಕ ನೆರವು ನೀಡಲಾಗುವುದು.
ವಿಮೆ ಪಡೆಯುವುದು ಕಡ್ಡಾಯವಾಗಿದ್ದು, 18 ರಿಂದ 50 ವರ್ಷದ ಅರ್ಹ ನೇಕಾರರು ಪಿ.ಎಂ.ಜೆ.ಜೆ.ಬಿ.ವೈ ಯೋಜನೆಯಡಿ ಹಾಗೂ 18 ರಿಂದ 70 ವರ್ಷದ ಅರ್ಹ ನೇಕಾರರು ಪಿ.ಎಂ.ಎಸ್.ಬಿ.ವೈ ಅಡಿ ನೋಂದಾಯಿಸಿಕೊಳ್ಳಬಹುದು. ಇವರನ್ನು 2026-27ನೇ ಸಾಲಿನ ನೇಕಾರ ಸಮ್ಮಾನ್ ಯೋಜನೆಯಡಿ ಆರ್ಥಿಕ ನೆರವು ನೀಡಲು ಪರಿಗಣಿಸಲಾಗುವುದು.
ಅರ್ಹರು ವಿಮೆಯಡಿ ನೋಂದಾಯಿಸಿಕೊಂಡ ರಸೀದಿ, ಬ್ಯಾಂಕ್ ಪಾಸ್ ಬುಕ್ ಪ್ರತಿ, ಬ್ಯಾಂಕ್ ಸ್ಟೇಟ್‌ಮೆಂಟ್ ಪ್ರತಿ, ಆಧಾರ್ ಕಾರ್ಡ್, ನೇಕಾರರ ಪೆಹಚಾನ್ ಕಾರ್ಡ್ ದಾಖಲೆಗಳೊಂದಿಗೆ ಚಿತ್ರದುರ್ಗ ನಗರದ ಜಿಲ್ಲಾ ಪಂಚಾಯಿತಿಯಲ್ಲಿರುವ ಕಚೇರಿಗೆ ಮೇ 31ರೊಳಗಾಗಿ ಸಲ್ಲಿಸಲು ಸೂಚಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 08194-221426 ಸಂಪರ್ಕಿಸಬಹುದು ಎಂದು ಕೈಮಗ್ಗ ಮತ್ತು ಜವಳಿ ಉಪನಿರ್ದೇಶಕರು ತಿಳಿಸಿದ್ದಾರೆ.

