ರಾಯಚೂರು: ಇನ್ ಸ್ಟಾ ಗ್ರಾಂ ನಲ್ಲಿ ರೀಲ್ಸ್ ನೋಡುವವರು ಈ ಸುದ್ದಿ ಓದಲೇಬೇಕು. ರೀಲ್ಸ್ ವಿಡಿಯೋ ನೋಡುವಾಗ ಬಂದ ಒಂದು ಲಿಂಕ್ ಕ್ಲಿಕ್ ಮಾಡಿ ವ್ಯಕ್ತಿಯೋರ್ವ 30 ಲಕ್ಷ ರೂಪಾಯಿ ಕಳೆದುಕೊಂಡಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ.
ರಾಯಚೂರಿನ ಖಾಸಗಿ ಕಂಪನಿ ಉದ್ಯೋಗಿಯೊಬ್ಬರಿಗೆ ಇನ್ಸ್ ಸ್ಟಾಗ್ರಾಂ ನಲ್ಲಿ ರೀಲ್ಸ್ ನೋಡುವ ಹವ್ಯಾಸವಿತ್ತು. ಹೀಗೆ ರೀಲ್ಸ್ ನೋಡುತ್ತಿದಾಗ ಅದರಲ್ಲಿ ಬಂದ ಒಂದು ಲಿಂಕ್ ನ್ನು ಆಕಸ್ಮಿಕವಾಗಿ ಕ್ಲಿಕ್ ಮಡಿದ್ದಾರೆ ಅಷ್ಟೇ. ಆ ಲಿಂಕ್ ಅವರನ್ನು ಆನ್ ಲೈನ್ ಗೇಮಿಂಗ್ ಪ್ಲಾಟ್ ಫಾರ್ಮ್ ಗೆ ಕರೆದೊಯ್ದಿದೆ.
ಆನ್ ಲೈನ್ ಗೇಮಿಂಗ್ ನಲ್ಲಿ ಹೂಡಿಕೆ ಮಾಡುವಂತೆ ಪ್ರೇರೇಪಿಸಿದೆ. ಆರಂಭದಲ್ಲಿ ಕಡಿಮೆ ಹಣವನ್ನು ಹೂಡಿಕೆ ಮಾಡಿದ್ದ ಉದ್ಯೋಗಿಗೆ ಬರ ಬರುತ್ತ ವಂಚನೆಯಾಗಿದೆ. ಬರೋಬ್ಬರು 30 ಲಕ್ಷ ರೂಪಾಯಿ ಹಣ ಕಳೆದುಕೊಂಡಿದ್ದಾರೆ. 30 ಲಕ್ಷ ಹಣ ಕಳೆದುಕೊಳ್ಳುತ್ತಿದ್ದಂತೆ ಎಚ್ಚೆತ್ತ ವ್ಯಕ್ತಿ ರಾಯಚೂರು ಸೈಬರ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

