HomeLatest NewsSHOCKING : ಅಮೆರಿಕದಲ್ಲಿ ತನ್ನ ಇಬ್ಬರು ಗಂಡು ಮಕ್ಕಳನ್ನು ಹತ್ಯೆಗೈದ ಭಾರತೀಯ ಮೂಲದ ಮಹಿಳೆ ಅರೆಸ್ಟ್.!

SHOCKING : ಅಮೆರಿಕದಲ್ಲಿ ತನ್ನ ಇಬ್ಬರು ಗಂಡು ಮಕ್ಕಳನ್ನು ಹತ್ಯೆಗೈದ ಭಾರತೀಯ ಮೂಲದ ಮಹಿಳೆ ಅರೆಸ್ಟ್.!

ತನ್ನ ಇಬ್ಬರು ಗಂಡು ಮಕ್ಕಳನ್ನು ಹತ್ಯೆಗೈದ ಆರೋಪದಲ್ಲಿ ಭಾರತೀಯ ಮೂಲದ ಮಹಿಳೆಯೋರ್ವರನ್ನು ಬಂಧಿಸಲಾಗಿದೆ. ನ್ಯೂಜೆರ್ಸಿಯಲ್ಲಿ 35 ವರ್ಷದ ಭಾರತೀಯ ಮೂಲದ ಮಹಿಳೆ ತನ್ನ ಇಬ್ಬರು ಮಕ್ಕಳನ್ನು ಕೊಲೆ ಮಾಡಿದ್ದಾಳೆ ಎಂದು ಆರೋಪಿಸಲಾಗಿದ್ದು, ಪೊಲೀಸರು ಬಂಧಿದ್ದಾರೆ.

ತನಿಖೆಯ ಪ್ರಕಾರ, ನ್ಯೂಜೆರ್ಸಿಯ ಹಿಲ್ಸ್ಬರೋದ ಪ್ರಿಯತರ್ಸಿನಿ ನಟರಾಜನ್ ಎಂದು ಗುರುತಿಸಲಾದ ಆರೋಪಿ ಮಂಗಳವಾರ ತನ್ನ ಇಬ್ಬರು ಮಕ್ಕಳ ಸಾವಿಗೆ ಕಾರಣಳಾಗಿದ್ದಾಳೆ. ಜನವರಿ 13 ರಂದು ಮಕ್ಕಳ ತಂದೆ ಸಂಜೆ ಕಾನೂನು ಜಾರಿ ಸಂಸ್ಥೆಗಳಿಗೆ (911) ಕರೆ ಮಾಡಿದ್ದಾರೆ ಎಂದು ಸೋಮರ್ಸೆಟ್ ಕೌಂಟಿ ಪ್ರಾಸಿಕ್ಯೂಟರ್ ಜಾನ್ ಮೆಕ್ಡೊನಾಲ್ಡ್ ಬುಧವಾರ ಮಾಹಿತಿ ನೀಡಿದ್ದಾರೆ.
ಪ್ರಾಸಿಕ್ಯೂಟರ್ ಪ್ರಕಾರ, ತಂದೆ ಕೆಲಸ ಮುಗಿಸಿಕೊಂಡು ಮನೆಗೆ ಬಂದ ನಂತರ, 5 ಮತ್ತು 7 ವರ್ಷ ವಯಸ್ಸಿನ ತಮ್ಮ ಇಬ್ಬರು ಗಂಡು ಮಕ್ಕಳು ಪ್ರಜ್ಞಾಹೀನ ಸ್ಥಿತಿಯಲ್ಲಿ ಇರುವುದನ್ನು ನೋಡಿದರು. “ತನ್ನ ಹೆಂಡತಿ ಅವರಿಗೆ ಏನೋ ಮಾಡಿದ್ದಾಳೆ” ಎಂದು ತಿಳಿದು ಪೊಲೀಸರಿಗೆ ಸುದ್ದಿ ಮುಟ್ಟಿಸಿದರು.

ಘಟನಾ ಸ್ಥಳಕ್ಕೆ ಬಂದ ನಂತರ ಪೊಲೀಸರು ಮನೆಯೊಳಗಿನ ಮಲಗುವ ಕೋಣೆಯಲ್ಲಿ ಇಬ್ಬರು ಮೃತ ಮಕ್ಕಳನ್ನು ಪತ್ತೆ ಮಾಡಿದರು. ಇಬ್ಬರು ಮಕ್ಕಳು ಸ್ಥಳದಲ್ಲೇ ಮೃತಪಟ್ಟಿದ್ದರು. ಪೊಲೀಸರು ಕೂಡಲೇ ಮಹಿಳೆಯನ್ನು ಬಂಧಿಸಿ ತನಿಖೆ ನಡೆಸಿದರು. ಮಹಿಳೆ ಮೇಲೆ ಶಸ್ತ್ರಾಸ್ತ್ರವನ್ನು ಹೊಂದಿದ ಆರೋಪ ಹಾಗೂ ಕೊಲೆ ಮಾಡಿದ ಎರಡು ಆರೋಪಗಳನ್ನು ಹೊರಿಸಲಾಯಿತು. ನಂತರ ಹಿಲ್ಸ್ಬರೋ ಪೊಲೀಸ್ ಅಧಿಕಾರಿಗಳು ಆಕೆಯನ್ನು ಬಂಧಿಸಿ ಸೋಮರ್ಸೆಟ್ ಕೌಂಟಿ ಜೈಲಿಗೆ ಶಿಫ್ಟ್ ಮಾಡಿದರು.ಕೊಲೆಗೆ ಕಾರಣ ತಿಳಿದು ಬಂದಿಲ್ಲ, ಪೊಲೀಸ್ ತನಿಖೆಯಿಂದಷ್ಟೇ ಸತ್ಯ ಹೊರಬರಬೇಕಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular