HomeEntertainmentಬೆಂಗಳೂರಿನಲ್ಲಿ ಶುಕ್ರವಾರ ಐಷಾರಾಮಿ ಚಿತ್ರಮಂದಿರ ಆರಂಭ

ಬೆಂಗಳೂರಿನಲ್ಲಿ ಶುಕ್ರವಾರ ಐಷಾರಾಮಿ ಚಿತ್ರಮಂದಿರ ಆರಂಭ

ಬೆಂಗಳೂರು ನಗರದಲ್ಲಿ ಶುಕ್ರವಾರ ಬಹುಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಐಷಾರಾಮಿ ಮಲ್ಟಿಪ್ಲೆಕ್ಸ್ ಚಿತ್ರಮಂದಿರ ಉದ್ಘಾಟನೆಯಾಗಲಿದೆ. ನಗರದ ಖ್ಯಾತ ‘ಕಪಾಲಿ’ ಚಿತ್ರಮಂದಿರವಿದ್ದ ಜಾಗದಲ್ಲಿಯೇ ಈ ಹೊಸ ಮಲ್ಟಿಪ್ಲೆಕ್ಸ್ ನಿರ್ಮಾಣಗೊಂಡಿದೆ.

ಈಗಾಗಲೇ ಹೈದರಾಬಾದ್‌ನ ಗಚಿಬೌಲಿ ಪ್ರದೇಶದಲ್ಲಿ ಎಎಂಬಿ ಸಿನಿಮಾಸ್ ಮಲ್ಟಿಪ್ಲೆಕ್ಸ್‌‌ ಕಾರ್ಯಾರಂಭ ಮಾಡಿದೆ. ಆಂಧ್ರಪ್ರದೇಶದ ಸಿನಿಮಾ ವಿತರಣಾ ಸಂಸ್ಥೆಗಳ ಪೈಕಿ ಒಂದಾಗಿರುವ ಏಷ್ಯನ್ ಸಿನಿಮಾಸ್ ಜೊತೆಗೂಡಿ ನಟ ಮಹೇಶ್ ಬಾಬು ಬೆಂಗಳೂರಲ್ಲಿಯೂ ಮಲ್ಟಿಪ್ಲೆಕ್ಸ್ ನಿರ್ಮಾಣ ಮಾಡಿದ್ದಾರೆ.

ಇದು ದಕ್ಷಿಣ ಭಾರತದ ಮೊದಲ ಡಾಲ್ಬಿ ಅಟ್ಮಾಸ್ (Dolby Atmos) ಸೌಂಡ್, ವಿಷನ್ ಅನುಭವ ನೀಡುವ ಚಿತ್ರಮಂದಿರವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ ಹೊಸ ಮಲ್ಟಿಪ್ಲೆಕ್ಸ್ ವಿನ್ಯಾಸ ಜನರ ಗಮನ ಸೆಳೆಯುತ್ತಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಯಾವುದು ಮೊದಲ ಚಿತ್ರ?: ಎಎಂಬಿ ಸಿನಿಮಾಸ್ ಬೆಂಗಳೂರಿನಲ್ಲಿ ಶುಕ್ರವಾರ ಕಾರ್ಯಾರಂಭ ಮಾಡಲಿದೆ. ಈ ಚಿತ್ರಮಂದಿರದ ಟಿಕೆಟ್ ಬುಕ್ಕಿಂಗ್ ಈಗಾಗಲೇ ಆರಂಭವಾಗಿದೆ. ಚಿರಂಜೀವಿ ನಟನೆಯ ‘ಮನ ಶಂಕರವರಪ್ರಸಾದ್‌ ಗಾರು’ ಹಾಗೂ ‘ಅವತಾರ್‌ ಫೈರ್ ಅಂಡ್ ಆಷ್’ ಚಿತ್ರಗಳನ್ನು ಪ್ರದರ್ಶನ ಮಾಡಲಾಗುತ್ತದೆ.

ಮಹೇಶ್ ಬಾಬು ಕಪಾಲಿ ಚಿತ್ರಮಂದಿರ ಇದ್ದ ಜಾಗದಲ್ಲಿ ಹೊಸ ಮಲ್ಟಿಪ್ಲೆಕ್ಸ್ ನಿರ್ಮಾಣ ಮಾಡಿದ್ದಾರೆ. ಆದರೆ ಅವರು ಕಪಾಲಿ ಎಂಬ ಹೆಸರನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ. ನೂತನ ಚಿತ್ರಮಂದಿರಕ್ಕೆ ‘AMB ಸಿನಿಮಾಸ್ ಕಪಾಲಿ’ ಎಂದು ನಾಮಕರಣ ಮಾಡಲಾಗಿದೆ.

ಹೊಸ ಮಲ್ಟಿಪ್ಲೆಕ್ಸ್ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅವರು ಪೋಸ್ಟ್ ಹಾಕಿದ್ದು, “ಜನವರಿ 16 ರಂದು ಬೆಂಗಳೂರಿನ AMB ಸಿನಿಮಾಸ್‌ನಲ್ಲಿ ದಕ್ಷಿಣ ಭಾರತದ ಮೊದಲ ಡಾಲ್ಬಿ ಥಿಯೇಟರ್ ಔಪಚಾರಿಕವಾಗಿ ಬಾಗಿಲು ತೆರೆಯುತ್ತದೆ. ಇದನ್ನು ಸಾಧಿಸಲು ಪ್ರಯತ್ನ ಮಾಡಿದ TEAM AMB ಬಗ್ಗೆ ತುಂಬಾ ಹೆಮ್ಮೆ ಇದೆ. ಶೀಘ್ರದಲ್ಲೇ ನಮ್ಮ ಬೆಂಗಳೂರಿನಲ್ಲಿ ನಿಮ್ಮೆಲ್ಲರನ್ನೂ ಭೇಟಿ ಮಾಡಲು ಎದುರು ನೋಡುತ್ತಿದ್ದೇನೆ” ಎಂದು ಹೇಳಿದ್ದಾರೆ.

2017ರಲ್ಲಿ ಏಷ್ಯಾದ ಅತಿ ದೊಡ್ಡ ಚಿತ್ರಮಂದಿರ ಎಂದು ಖ್ಯಾತಿ ಪಡೆದಿದ್ದ ‘ಕಪಾಲಿ’ ಚಿತ್ರಮಂದಿರವನ್ನು ಮುಚ್ಚಲಾಗಿತ್ತು. 1,465 ಸೀಟುಗಳನ್ನು ಹೊಂದಿದ್ದ ಬಹುದೊಡ್ಡ ಚಿತ್ರಮಂದಿರ ಕಪಾಲಿಯಾಗಿತ್ತು.

ಈ ಜಾಗದಲ್ಲಿಯೇ ಮಹೇಶ್ ಬಾಬು ಒಡೆತನದ ‘AMB ಸಿನಿಮಾಸ್ ಕಪಾಲಿ’ ನಿರ್ಮಾಣಗೊಂಡಿದೆ. 1968ರಲ್ಲಿ ಆರಂಭವಾಗಿದ್ದ ‘ಕಪಾಲಿ’ ಚಿತ್ರಮಂದಿರಕ್ಕೂ ಕನ್ನಡ ಚಿತ್ರಗಳಿಗೂ ಭಾವನಾತ್ಮಕ ನಂಟಿದೆ. ಹಲವಾರು ಕನ್ನಡ ಚಿತ್ರಗಳು ಇಲ್ಲಿ ಬಿಡುಗಡೆಯಾಗಿ ಯಶಸ್ವಿಯಾಗಿ ಪ್ರದರ್ಶನ ಕಂಡಿವೆ.

ಬೆಂಗಳೂರಿನ ಗಾಂಧಿನಗರದಲ್ಲಿ ಚಿತ್ರಮಂದಿರಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಕಪಾಲಿ ಸಹ ಪ್ರದರ್ಶನ ನಿಲ್ಲಿಸಿದ ಬಳಿಕ ಸಿನಿಮಾ ಅಭಿಮಾನಿಗಳು ಬೇಸರ ಹೊರ ಹಾಕಿದ್ದರು. ಈಗ ‘AMB ಸಿನಿಮಾಸ್ ಕಪಾಲಿ’ ಎಂಬ ಹೆಸರಿನಲ್ಲಿ ಐಷಾರಾಮಿ ಥಿಯೇಟರ್ ಪ್ರಾರಂಭವಾಗಿದೆ.

‘AMB ಸಿನಿಮಾಸ್ ಕಪಾಲಿ’ಯಲ್ಲಿ 60 ಅಡಿ ಅಗಲದ 9 ಸ್ಕ್ರೀನ್​​ಗಳು ಇವೆ. ಪ್ರತಿ ಸ್ಕ್ರೀನ್​​ 600 ಪ್ರೇಕ್ಷಕರ ಡ್ಯಾಂ ಸಾಮರ್ಥ್ಯವನ್ನು ಹೊಂದಿದೆ. ಸ್ಕ್ರೀನ್‌ಗಳು ಅತ್ಯುತ್ತಮ ಗುಣಮಟ್ಟದ ವಿಡಿಯೋ, ಆಡಿಯೋ ಗುಣಮಟ್ಟವನ್ನು ಹೊಂದಿರಲಿವೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular