HomeIndia14.12 ಸೆಕೆಂಡ್‌ಗಳಲ್ಲಿ ಪೇಟ ಕಟ್ಟಿ ʼಗಿನ್ನೆಸ್ʼ ದಾಖಲೆ ಬರೆದ ಭಾರತೀಯ

14.12 ಸೆಕೆಂಡ್‌ಗಳಲ್ಲಿ ಪೇಟ ಕಟ್ಟಿ ʼಗಿನ್ನೆಸ್ʼ ದಾಖಲೆ ಬರೆದ ಭಾರತೀಯ

ಪೇಟ ಭಾರತೀಯ ಪುರುಷರ ವೇಷಭೂಷಣದ ಪ್ರಮುಖ ಭಾಗ. ನಮ್ಮ ಕರ್ನಾಟಕದಲ್ಲಿ ಮೈಸೂರು ಪೇಟ ಅತೀ ಹೆಚ್ಚು ಜನಪ್ರಿಯವಾಗಿರುವಂತದ್ದು.

ಸಾಮಾನ್ಯವಾಗಿ ಸಾಂಪ್ರದಾಯಿಕ ಕಾರ್ಯಕ್ರಮಗಳ ಸಂದರ್ಭದಲ್ಲಿ ದೇಶದ ಹೆಚ್ಚಿನ ಕಡೆಗಳಲ್ಲಿ ಅಲ್ಲಿನ ಸಂಪ್ರದಾಯದಂತೆ ಈ ಪೇಟವನ್ನು ಧರಿಸಲಾಗುತ್ತದೆ. ನೀವೂ ಕೂಡ ಯಾವಾಗಲಾದರೂ ಈ ರೀತಿ ಪೇಟವನ್ನು ಧರಿಸಿರ್ತೀರಾ. ಹೀಗಾಗಿ ಆ ಪೇಟವನ್ನು ಕಟ್ಟೋದಕ್ಕೆ ಒಟ್ಟು ಎಷ್ಟು ಟೈಮ್ ಬೇಕೆಂಬುದು ನಿಮಗೆ ಚೆನ್ನಾಗಿಯೇ ಗೊತ್ತಿರುತ್ತೆ.

ಆದ್ರೆ ಇಲ್ಲೊಬ್ಬರು ಪೇಟವನ್ನು ಅತ್ಯಂತ ವೇಗವಾಗಿ ಕಟ್ಟುವ ಮೂಲಕ ವಿಶ್ವದಾಖಲೆಯನ್ನು ಬರೆದಿದ್ದಾರೆ. ಇದರ ಜೊತೆ ಅವರು ಈ ಪೇಟ ಕಟ್ಟೋದಕ್ಕೆ ತೆಗೆದುಕೊಂಡ ಸಮಯ ಕೇಳಿದ್ರೆ ನಿಮಗೂ ಕೂಡಾ ಶಾಕ್ ಆಗುತ್ತೆ. ಯಾಕಂದ್ರೆ ಕೇವಲ 14.12 ಸೆಕೆಂಡುಗಳಲ್ಲಿ ಪೇಟ ಕಟ್ಟುವ ಮೂಲಕ ಈ ದಾಖಲೆ ನಿರ್ಮಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆದಿತ್ಯ ಪಚೋಲಿ ಎಂಬವರೇ ಈ ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಮಾಡಿದ್ದು ಈ ಬಗ್ಗೆ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ತನ್ನ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದೆ. ಕೇವಲ 14 ಸೆಕೆಂಡುಗಳಲ್ಲಿ ಆದಿತ್ಯ ಇನ್ನೊಬ್ಬ ವ್ಯಕ್ತಿಗೆ ಪೇಟವನ್ನು ಕಟ್ಟುವ ವೀಡಿಯೊವನ್ನು ಶೇರ್ ಮಾಡಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular