HomeLatest NewsBREAKING: ಭಾರತ-ರಷ್ಯಾ ನಡುವೆ ಹಲವು ಒಪ್ಪಂದಗಳಿಗೆ ಸಹಿ: ರಷ್ಯಾ ನಾಗರಿಕರಿಗೆ 30 ದಿನಗಳವರೆಗೆ ಉಚಿತ ಇ-ವೀಸಾ...

BREAKING: ಭಾರತ-ರಷ್ಯಾ ನಡುವೆ ಹಲವು ಒಪ್ಪಂದಗಳಿಗೆ ಸಹಿ: ರಷ್ಯಾ ನಾಗರಿಕರಿಗೆ 30 ದಿನಗಳವರೆಗೆ ಉಚಿತ ಇ-ವೀಸಾ ಸೌಲಭ್ಯ

ನವದೆಹಲಿ: ಭಾರತ-ರಷ್ಯಾ ಉಭಯ ದೇಶಗಳ ನಡುವೆ ನಡೆದ ದ್ವಿಪಕ್ಷೀಯ ಮಾತುಕತೆ ವೇಳೆ ಹಲವಾರು ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ.

ನವದೆಹಲಿಯ ಹೈದರಾಬಾದ್ ಹೌಸ್ ನಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಸಮ್ಮುಖದಲ್ಲಿ ದ್ವಿಪಕ್ಷೀಯ ಮಾತುಕತೆ ನಡೆದಿದ್ದು, ಈ ವೇಳೆ ಹಲವು ಒಪ್ಪಂದಗಳಿಗೆ ಸಹಿ ಹಾಕಲಾಯಿತು.

ದ್ವಿಪಕ್ಷೀಯ ಮಾತುಕತೆ ಬಳಿಕ ವ್ಲಾಡಿಮಿರ್ ಪುಟಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಜಂಟಿ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಮಾತನಾಡಿದ ರಷ್ಯಾ ಅಧ್ಯಕ್ಷ ಪುಟಿನ್, ಭಾರತ ನೀಡಿದ ಆತಿಥ್ಯಕ್ಕೆ ಸಂತಸವಾಗಿದೆ. ಉಭಯ ದೇಶಗಳ ನಡುವೆ ಆರ್ಥಿಕ ಅಭಿವೃದ್ಧಿ ಮತ್ತಷ್ಟು ಸಮೃದ್ಧಿಯಾಗಲಿದೆ. ಆರ್ಥಿಕತೆ, ವಾಣಿಜ್ಯ, ರಕ್ಷಣೆ ವಿಚಾರವಾಗಿ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದೇವೆ. 2030ರವರೆಗೆ ಹಲವು ಯೋಜನೆಗಳಿಗೆ ಒಪ್ಪಂದ ಮಾಡಿಕೊಂಡಿದ್ದೇವೆ ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಭಾರತ-ರಷ್ಯಾ ನಡುವಿನ ನೀತಿ ಸಮೃದ್ಧಪಡಿಸಲು ಈ ಭೇಟಿ ಪೂರಕವಾಗಿದೆ. ರಷ್ಯಾ ನಗರಿಕರಿಗೆ 30 ದಿನಗಳವರೆಗೆ ಉಚಿತ ಇ-ವೀಸಾ ಸೌಲಭ್ಯ ನೀಡುವುದಾಗಿ ಭಾರತ ಒಪ್ಪಿದೆ. ರಷ್ಯಾ ನಗರಿಕರಿಗೆ ಗ್ರೂಪ್ ಟೂರಿಸ್ಟ್ ಇ-ವೀಸಾ ನೀಡಲು ನಿರ್ಧರಿಸಲಾಗಿದೆ. ಹೊಸದಾಗಿ ಎರಡು ರಾಯಭಾರ ಕಚೇರಿಗಳನ್ನು ತೆರೆಯಲಾಗುವುದು. ಯಾವುದೇ ಅಡೆತಡೆ ಲ್ಲದೇ ಭಾರತಕ್ಕೆ ಇಂಧನ ಪೂರೈಕೆ ಮುಂದುವರೆಸುತ್ತೇವೆ. ಭಾರತೀಯ ಔಷಧ ನಿರ್ಮಾಣ ಸಂಸ್ಥೆಗಳಿಗೆ ಸಹಕಾರ ಮುಂದುವರೆಯಲಿವೆ. ರಷ್ಯಾದಲ್ಲಿಯೂ ಭಾರತೀಯ ಸಿನಿಮಾಗಳು ಜನಪ್ರಿಯವಾಗಿವೆ. ಈ ನಿಟ್ಟಿನಲ್ಲಿಯೂ ಪ್ರೋತ್ಸಾಹ ನೀಡಲಾಗುವುದು. ಮೇಕ್ ಇನ್ ಇಂಡಿಯಾ ಕಾರ್ಯಕ್ರಮಕ್ಕೆ ಉತ್ತೇಜನ ನೀಡುತ್ತೇವೆ. ರಷ್ಯಾ ಹಾಗೂ ಭಾರತ ಸ್ವತಂತ್ರವಾಗಿ ವಿದೇಶಾಂಗ ನೀತಿಗಳನ್ನು ಹೊಂದಿರಲಿವೆ ಎಂದು ಹೇಳಿದರು.

For Latest News Updates, Join Our Whatsapp Community🚩
RELATED ARTICLES

Most Popular