ನವದೆಹಲಿ: ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಭಾರತದ ಹವಾ ಜೋರಾಗಿದೆ. ಫೋರ್ಬ್ಸ್ ಬಿಡುಗಡೆ ಮಾಡಿರುವ ವರ್ಲ್ಡ್ ಬಿಲಿಯನೇರ್ಸ್ ಲಿಸ್ಟ್ 2026 ರ ಪ್ರಕಾರ, ಈ ವರ್ಷ ಭಾರತದಿಂದ ಹೊಸದಾಗಿ 26 ಮಂದಿ ಬಿಲಿಯನೇರ್ ಕ್ಲಬ್‌ಗೆ ಸೇರ್ಪಡೆಯಾಗಿದ್ದಾರೆ. ಇದರೊಂದಿಗೆ ಭಾರತವು ಅಮೆರಿಕ ಮತ್ತು ಚೀನಾ ನಂತರ ವಿಶ್ವದ ಮೂರನೇ ಅತಿ ಹೆಚ್ಚು ಬಿಲಿಯನೇರ್‌ಗಳನ್ನು ಹೊಂದಿರುವ ದೇಶವಾಗಿ ಹೊರಹೊಮ್ಮಿದೆ.
ಭಾರತದ ಟಾಪ್ 10 ಶ್ರೀಮಂತರು:
ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಅವರು 98.8 ಶತಕೋಟಿ ಡಾಲರ್ (ಸುಮಾರು 8.2 ಲಕ್ಷ ಕೋಟಿ ರೂ.) ಆಸ್ತಿಯೊಂದಿಗೆ ಭಾರತ ಹಾಗೂ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ತಮ್ಮ ಅಗ್ರಸ್ಥಾನವನ್ನು ಉಳಿಸಿಕೊಂಡಿದ್ದಾರೆ.
ಮುಕೇಶ್ ಅಂಬಾನಿ: $98.8 ಬಿಲಿಯನ್
ಗೌತಮ್ ಅದಾನಿ: $61.4 ಬಿಲಿಯನ್
ಸಾವಿತ್ರಿ ಜಿಂದಾಲ್ ಮತ್ತು ಕುಟುಂಬ: $37.2 ಬಿಲಿಯನ್ (ಭಾರತದ ಅತ್ಯಂತ ಶ್ರೀಮಂತ ಮಹಿಳೆ)ಲಕ್ಷ್ಮಿ ಮಿತ್ತಲ್ ಸೇರಿದಂತೆ ಭಾರತದ ಟಾಪ್ 10 ಶ್ರೀಮಂತರ ಒಟ್ಟು ಆಸ್ತಿ ಮೌಲ್ಯ ಬರೋಬ್ಬರಿ 368 ಶತಕೋಟಿ ಡಾಲರ್ ಆಗಿದೆ
ಪಟ್ಟಿಯಲ್ಲಿ ಮಿಂಚಿದ 26 ಹೊಸ ಮುಖಗಳು:
ಈ ಬಾರಿ ತಂತ್ರಜ್ಞಾನ, ಶಿಕ್ಷಣ, ಜ್ಯುವೆಲ್ಲರಿ ಮತ್ತು ಎಫ್‌ಎಮ್‌ಸಿಜಿ (FMCG) ವಲಯದ ಗಣ್ಯರು ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ:
ಕುಮುದ್ ಬಜಾಜ್: ಮಧುರ್ ಬಜಾಜ್ ಅವರ ಪತ್ನಿ 4.1 ಶತಕೋಟಿ ಡಾಲರ್ ಆಸ್ತಿಯೊಂದಿಗೆ ಹೊಸಬರ ಪಟ್ಟಿಯಲ್ಲಿ ಮೊದಲಿಗರು.
ಕಿಶೋರ್ ಜೈನ್: ಖಜಾನಾ ಜ್ಯುವೆಲ್ಲರಿ ಮಾಲೀಕರು ($2.2 ಬಿಲಿಯನ್).
ಅರವಿಂದ್ ಶ್ರೀನಿವಾಸ್: ಪರ್ಪ್ಲೆಕ್ಸಿಟಿ ಎಐ (Perplexity AI) ಸಹ-ಸಂಸ್ಥಾಪಕ ($2.1 ಬಿಲಿಯನ್).
ಅಲಖ್ ಪಾಂಡೆ ಮತ್ತು ಪ್ರತೀಕ್ ಬೂಬ್: ಫಿಸಿಕ್ಸ್ ವಾಲಾ (PhysicsWallah) ಸಂಸ್ಥಾಪಕರು ತಲಾ 1 ಶತಕೋಟಿ ಡಾಲರ್ ಆಸ್ತಿಯೊಂದಿಗೆ ಬಿಲಿಯನೇರ್ ಕ್ಲಬ್ ಸೇರಿದ್ದಾರೆ.
ಫಿಸಿಕ್ಸ್ ವಾಲಾ ಮ್ಯಾಜಿಕ್:
ನವೆಂಬರ್ 2025 ರಲ್ಲಿ ನಡೆದ ಫಿಸಿಕ್ಸ್ ವಾಲಾ ಐಪಿಒ (IPO) ಭರ್ಜರಿ ಯಶಸ್ಸು ಕಂಡ ಹಿನ್ನೆಲೆಯಲ್ಲಿ ಅಲಖ್ ಪಾಂಡೆ ಅವರು ಬಿಲಿಯನೇರ್ ಆಗಿ ಹೊರಹೊಮ್ಮಿದ್ದಾರೆ. 2016 ರಲ್ಲಿ ಯೂಟ್ಯೂಬ್ ಚಾನೆಲ್ ಮೂಲಕ ಆರಂಭವಾದ ಇವರ ಪಯಣ ಇಂದು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದೆ.
ಇತರ ಪ್ರಮುಖ ಹೆಸರುಗಳು:
ಬಾಲಾಜಿ ವೇಫರ್ಸ್‌ನ ವಿರಾನಿ ಸಹೋದರರು, ವಿಜಯ್ ಸೇಲ್ಸ್‌ನ ನಾನು ಗುಪ್ತಾ, ಲಾರಸ್ ಲ್ಯಾಬ್ಸ್‌ನ ಸತ್ಯನಾರಾಯಣ ಚಾವಾ ಮತ್ತು ಎಂವಿ ಫೋಟೋವೋಲ್ಟಾಯಿಕ್ ಪವರ್‌ನ ಡಿ.ವಿ. ಮಂಜುನಾಥ್ ಅವರು ಕೂಡ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

