ಬೆಂಗಳೂರು : ರಾಜ್ಯಕ್ಕೆ ರಣದೀಪ್ ಸುರ್ಜೇವಾಲ ಆಗಮನ ಕುರಿತು ಜೆಡಿಎಸ್ ತೀವ್ರ ವಾಗ್ದಾಳಿ ನಡೆಸಿದೆ . ಕೇರಳಂ, ತಮಿಳುನಾಡು, ಅಸ್ಸಾಂ, ಪುದುಚೇರಿ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಿಗೆ ವಿಧಾನಸಭಾ ಚುನಾವಣಾ ದಿನಾಂಕ ಘೋಷಣಾದ ಬೆನ್ನಲ್ಲೇ ಕಾಂಗ್ರೆಸ್ ಕಲೆಕ್ಷನ್ ಏಜೆಂಟ್, ಕರ್ನಾಟಕದ ಸೂಪರ್ ಸಿಎಂ ರಣದೀಪ್ ಸುರ್ಜೇವಾಲ ಬೆಂಗಳೂರಿಗೆ ಬರುತ್ತಿದ್ದಾರೆ ಎಂದು ಜೆಡಿಎಸ್ ಎಕ್ಸ್ ಖಾತೆಯಲ್ಲಿ ಕಿಡಿಕಾರಿದೆ.
ಜೆಡಿಎಸ್ ಟ್ವೀಟ್
ಕಾಂಗ್ರೆಸ್’ನ ವಸೂಲಿವಾಲಾ @rssurjewala ರಾಜ್ಯಕ್ಕೆ ಆಗಮನ! ಕೇರಳಂ, ತಮಿಳುನಾಡು, ಅಸ್ಸಾಂ, ಪುದುಚೇರಿ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಿಗೆ ವಿಧಾನಸಭಾ ಚುನಾವಣಾ ದಿನಾಂಕ ಘೋಷಣಾದ ಬೆನ್ನಲ್ಲೇ @INCIndia ಕಲೆಕ್ಷನ್ ಏಜೆಂಟ್, ಕರ್ನಾಟಕದ ಸೂಪರ್ ಸಿಎಂ ರಣದೀಪ್ ಸುರ್ಜೇವಾಲ ಬೆಂಗಳೂರಿಗೆ ಬರುತ್ತಿದ್ದಾರೆ!! ಹೈಕಮಾಂಡ್ ಗುಲಾಮಗಿರಿಯಲ್ಲಿ ತೊಡಗಿರುವ ಇಲ್ಲಿನ@INCKarnataka ಪಟಾಲಂ ಮತ್ತು ಡಿಸಿಎಂ @DKShivakumar ಕರ್ನಾಟಕವನ್ನು ಎಟಿಎಂ ಮಾಡಿಕೊಂಡು, ಹೈಕಮಾಂಡ್ ಖಜಾನೆ ತುಂಬಿಸಲು ಜನರ ತೆರಿಗೆ ಹಣವನ್ನು ಲೂಟಿ ಹೊಡೆಯುತ್ತಿದ್ದಾರೆ. ಕಳೆದ ಬಾರಿ ವಾಲ್ಮೀಕಿ ನಿಗಮದಲ್ಲಿ ನೂರಾರು ಕೋಟಿ ರೂ. ದೋಚಿ ತೆಲಂಗಾಣ ರಾಜ್ಯದಲ್ಲಿ ಅಕ್ರಮವಾಗಿ ಚುನಾವಣೆ ನಡೆಸಿದ್ದ ಕಾಂಗ್ರೆಸ್, ಈಗ ರಾಜ್ಯದ ಯಾವ ನಿಗಮ- ಮಂಡಳಿಗಳಲ್ಲಿ ದರೋಡೆಗೆ ಸಂಚು ರೂಪಿಸಿದೆ ಎಂಬ ಅನುಮಾನ ಎಲ್ಲರನ್ನು ಕಾಡುತ್ತಿದೆ. ಕಮಿಷನ್’ಗಾಗಿ ಗುತ್ತಿಗೆದಾರರ ರಕ್ತ ಹೀರುತ್ತಿರುವ, ಜನರಿಗೆ ಬೆಲೆ ಏರಿಕೆ ಮತ್ತು ತೆರಿಗೆ ಬರೆ ಎಳೆಯುತ್ತ ವಸೂಲಿಗಿಳಿದಿರುವ ಕಮಿಷನ್ ಕಾಂಗ್ರೆಸ್ ಸರ್ಕಾರದ ಬಗ್ಗೆ ರಾಜ್ಯದ ಜನರೆ ಎಚ್ಚರ! ಎಂದು ಜೆಡಿಎಸ್ ಎಕ್ಸ್ ಖಾತೆಯಲ್ಲಿ ಕಿಡಿಕಾರಿದೆ.
https://twitter.com/JanataDal_S/status/2034880743038419183
ಬಿಜೆಪಿ ವಾಗ್ಧಾಳಿ
ಬಳ್ಳಾರಿ ಜಿಲ್ಲೆಯಲ್ಲಿ ಸಂಬಳ ಸಿಗದೆ ಕೃಷಿ ಇಲಾಖೆ ನೌಕರ ಆತ್ಮಹತ್ಯೆ ಕಲಬುರಗಿ ಜಿಲ್ಲೆಯಲ್ಲಿ ಸಂಬಳ ಸಿಗದೆ ಗ್ರಂಥಪಾಲಕಿ ಆತ್ಮಹತ್ಯೆ ಚಿಕ್ಕಮಗಳೂರು ಹಾಗೂ ಚಾಮರಾಜನಗರ ಜಿಲ್ಲೆಯಲ್ಲಿ ಸಂಬಳ ಸಿಗದೆ ನೀರಗಂಟಿ ಆತ್ಮಹತ್ಯೆ, ಭ್ರಷ್ಟ ಸರ್ಕಾರ ನೌಕರರಿಗಾಗಿ “ನೇಣುಭಾಗ್ಯ” ಜಾರಿಗೊಳಿಸಿದೆ. ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವ ಸರ್ಕಾರ ಸಂಬಳ ನೀಡದೆ ಸಿಬ್ಬಂದಿಯನ್ನು ಸ್ಮಶಾನಕ್ಕೆ ಅಟ್ಟುತ್ತಿದೆ. ಸಂವೇದನೆ ಇಲ್ಲದ ಕಟುಕ ಕಾಂಗ್ರೆಸ್ ಸರ್ಕಾರಕ್ಕೆ ಕನ್ನಡಿಗರು ತಕ್ಕ ಪಾಠ ಕಲಿಸುವ ಕಾಲ ದೂರವಿಲ್ಲ ಎಂದು ಬಿಜೆಪಿ ಟ್ವೀಟ್ ನಲ್ಲಿ ಕಿಡಿಕಾರಿದೆ.
https://twitter.com/BJP4Karnataka/status/2034875081776603445

