ಬೆಂಗಳೂರು: ರಾಜ್ಯದಲ್ಲಿನ ಖಾಸಗಿ ವೃತ್ತಿಪರ ಕಾಲೇಜುಗಳು ಹಾಗೂ ವಿಶ್ವವಿದ್ಯಾಲಯಗಳಲ್ಲಿನ(ಅನುದಾನಿತ, ಅನುದಾನ ರಹಿತ, ಅಲ್ಪಸಂಖ್ಯಾತ- ಧಾರ್ಮಿಕ & ಭಾಷಾ ಅಲ್ಪಸಂಖ್ಯಾತ) ವಿವಿಧ ವೃತ್ತಿಪರ ಕೋರ್ಸ್ ಗಳಲ್ಲಿ ಲಭ್ಯವಿರುವ ಸರ್ಕಾರಿ ಕೋಟಾದ ಸೀಟುಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ(KEA) ಮೂಲಕ ಹಂಚಿಕೆ ಮಾಡುತ್ತಿದೆ.
ಪ್ರವೇಶ ಸಂದರ್ಭದಲ್ಲಿ ಸರ್ಕಾರ ನಿಗದಿಪಡಿಸಿರುವ ಶುಲ್ಕ ಮತ್ತು ಕಾನೂನು ಅಡಿಯಲ್ಲಿ ನಿಗದಿಪಡಿಸಿರುವ ಇನ್ನಿತರೇ ಶುಲ್ಕವನ್ನು ಹೊರತುಪಡಿಸಿ, ಹೆಚ್ಚಿನ ಶುಲ್ಕಕ್ಕೆ ಬೇಡಿಕೆ ಇಟ್ಟ ಪಕ್ಷದಲ್ಲಿ ನೊಂದ ವಿದ್ಯಾರ್ಥಿಗಳು ಬೆಂಗಳೂರಿನ ಮಲ್ಲೇಶ್ವರದ KEA ಕಚೇರಿಯ ನೆಲ ಮಹಡಿಯಲ್ಲಿ ಇರುವ ಶುಲ್ಕ ನಿಯಂತ್ರಣ ಸಮಿತಿಯ ಮುಂದೆ ದೂರು ಸಲ್ಲಿಸಬಹುದು ಎಂದು ಶುಲ್ಕ ನಿಯಂತ್ರಣ ಸಮಿತಿ ಅಧ್ಯಕ್ಷರಾದ ನ್ಯಾಯಮೂರ್ತಿ ಬಿ.ಶ್ರೀನಿವಾಸಗೌಡ ತಿಳಿಸಿದ್ದಾರೆ.

