HomeIPL 2026IPL 2026: ಆರ್‌ಸಿಬಿ ಟ್ರೋಫಿ ಗೆದ್ದಾಗಲೂ ಇಷ್ಟು ಕಿರುಚಾಡಿರಲಿಲ್ಲ ಹೇಜಲ್‌ವುಡ್; ಆತ ರೊಚ್ಚಿಗೇಳಲು ಕಾರಣ ಗುಜರಾತ್‌ನ...

IPL 2026: ಆರ್‌ಸಿಬಿ ಟ್ರೋಫಿ ಗೆದ್ದಾಗಲೂ ಇಷ್ಟು ಕಿರುಚಾಡಿರಲಿಲ್ಲ ಹೇಜಲ್‌ವುಡ್; ಆತ ರೊಚ್ಚಿಗೇಳಲು ಕಾರಣ ಗುಜರಾತ್‌ನ ಆ ಆಟಗಾರ! ವಿಡಿಯೊ

ನಿನ್ನೆ ( ಮೇ 26 ) ಧರಂಶಾಲಾ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026ರ ಮೊದಲನೇ ಕ್ವಾಲಿಫಯರ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ 92 ರನ್‌ಗಳಿಂದ ಗೆದ್ದ ಹಾಲಿ ಚಾಂಪಿಯನ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸತತ ಎರಡನೇ ಬಾರಿಗೆ ಫೈನಲ್‌ ಪ್ರವೇಶಿಸಿದೆ.

ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ಟೈಟನ್ಸ್ ಬೌಲಿಂಗ್ ಆರಿಸಿಕೊಂಡು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಅದರಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 254 ರನ್ ಕಲೆಹಾಕಿ ಗುಜರಾತ್ ಟೈಟನ್ಸ್‌ಗೆ 255 ರನ್‌ಗಳ ಗುರಿಯನ್ನು ನೀಡಿತು. ಈ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾಗಿ ಆರ್‌ಸಿಬಿ ಬೌಲಿಂಗ್ ದಾಳಿಗೆ ನಲುಗಿದ ಗುಜರಾತ್ ಟೈಟನ್ಸ್ 19.3 ಓವರ್‌ಗಳಲ್ಲಿ 162 ರನ್‌ಗಳಿಗೆ ಆಲ್‌ಔಟ್ ಆಯಿತು.

ಆರ್‌ಸಿಬಿ ಗುರಿ ಬೆನ್ನಟ್ಟುವಲ್ಲಿ ಆರಂಭದಿಂದಲೇ ವಿಫಲವಾಗುತ್ತಾ ಸಾಗಿದ ಗುಜರಾತ್ ಟೈಟನ್ಸ್ ಪಂದ್ಯವನ್ನು ಕೈಚೆಲ್ಲಿಬಿಟ್ಟಿತು. ನೋಡುಗರಿಗೆ ಪವರ್‌ಪ್ಲೇ ಮುಗಿಯುವಷ್ಟರಲ್ಲಿಯೇ ಆರ್‌ಸಿಬಿ ಫೈನಲಿಸ್ಟ್ ಎನ್ನುವ ಭವಿಷ್ಯ ಅರ್ಥವಾಗಿಬಿಟ್ಟಿತ್ತು. ಕೇವಲ 5.4 ಓವರ್‌ಗಳಲ್ಲಿ ತನ್ನ ಐದು ವಿಕೆಟ್‌ಗಳನ್ನು ಕಳೆದುಕೊಂಡಿದ್ದ ಗುಜರಾತ್ ಟೈಟನ್ಸ್ ಗೆಲುವಿನ ಆಸೆಯನ್ನು ಕೈಬಿಟ್ಟಿತ್ತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆರ್‌ಸಿಬಿಯ ನಾಯಕ ರಜತ್ ಪಟಿದಾರ್ ಆ ಮಟ್ಟಿಗೆ ತನ್ನ ಬೌಲಿಂಗ್ ಪಡೆಯನ್ನು ಪವರ್‌ಪ್ಲೇನಲ್ಲಿ ಬಳಸಿ ಗುಜರಾತ್ ನೆಮ್ಮದಿಗೆಡಿಸಿದ್ದರು. ಬೌಲರ್‌ಗಳೂ ಸಹ ನಾಯಕ ತಮಗೆ ವಹಿಸಿದ ಕೆಲಸವನ್ನು ತಲೆಗೇರಿಸಿಕೊಂಡು ವಿಕೆಟ್ ಉರುಳಿಸುವುದು ದೊಡ್ಡ ಪ್ರತಿಷ್ಠೆ ಎಂಬಂತೆ ಕೆಲಸ ನಿರ್ವಹಿಸಿದರು. ಆ ತುಡಿತ ಪ್ರತಿ ಬೌಲರ್ ವಿಕೆಟ್ ಪಡೆದಾಗಲೂ ಅವರ ಮುಖದಲ್ಲಿ ಕಾಣಸಿಗುತ್ತಿತ್ತು.

ಅದರಲ್ಲೂ ಜೋಶ್ ಹೇಜಲ್‌ವುಡ್ ಜೋಶ್ ಬಟ್ಲರ್ ವಿಕೆಟ್ ಪಡೆದಾಗ ಕಿರುಚಾಡಿದ ರೀತಿ ಅದನ್ನು ಎತ್ತಿ ತೋರಿಸುತ್ತಿತ್ತು. ಸಾಯಿ ಸುದರ್ಶನ್ ವಿಕೆಟ್ ಬಿದ್ದ ಬಳಿಕ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಜೋಶ್ ಬಟ್ಲರ್ ಡಫಿಗೆ ಒಂದು ಸಿಕ್ಸರ್ ಹಾಗೂ ಒಂದು ಬೌಂಡರಿ ಚಚ್ಚಿದರು. ನಂತರದ ಓವರ್‌ನಲ್ಲಿ ಗಿಲ್ ಕ್ಲೀನ್ ಬೌಲ್ಡ್ ಆದರೂ ಭುವಿಗೆ ಬೌಂಡರಿ ಬಾರಿಸಿದರು.

ಐದನೇ ಓವರ್‌ ಎಸೆದ ಹೇಜಲ್‌ವುಡ್‌ಗೆ ಎರಡು, ಮೂರು ಹಾಗೂ ನಾಲ್ಕನೇ ಎಸೆತಗಳಿಗೆ ಕ್ರಮವಾಗಿ ಬೌಂಡರಿ, ಸಿಕ್ಸರ್ ಹಾಗೂ ಬೌಂಡರಿ ಬಾರಿಸಿದ ಬಟ್ಲರ್ ಒಂದೆಡೆ ವಿಕೆಟ್ ಬೀಳುತ್ತಿದ್ದರೂ ತಂಡದ ಅರ್ಧಶತಕ ಮುಟ್ಟಿಸಿಬಿಟ್ಟರು. ಆದರೆ ನಂತರದ ಎಸೆತದಲ್ಲೇ ಜೋಶ್ ಹೇಜಲ್‌ವುಡ್ ಎಸೆದ ಎಸೆತಕ್ಕೆ ಬಟ್ಲರ್ ಕ್ಲೀನ್ ಬೌಲ್ಡ್ ಆದರು. ಸತತ ಬೌಂಡರಿ ಬಾರಿಸಿಕೊಂಡು ತಲೆ ಕೆಟ್ಟಿದ್ದ ಹೇಜಲ್‌ವುಡ್ ವಿಕೆಟ್ ಉರುಳುತ್ತಿದ್ದಂತೆ ಕಳೆದ ಬಾರಿ ಕಪ್ ಗೆದ್ದಾಗಲೂ ಕಿರುಚದ ಹಾಗೆ ಕಿರುಚಿ ಸಂಭ್ರಮಪಟ್ಟರು. ಬಟ್ಲರ್ 11 ಎಸೆತಗಳಲ್ಲಿ 4 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 29 ರನ್ ಗಳಿಸಿದರು.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular