HomeLatest NewsBREAKING: ಅಕ್ರಮ ಗಣಿಗಾರಿಕೆ: ಬಂಡೆ ಸ್ಫೋಟಕ್ಕೆ ಚಿರತೆಗಳು ಸಾವು

BREAKING: ಅಕ್ರಮ ಗಣಿಗಾರಿಕೆ: ಬಂಡೆ ಸ್ಫೋಟಕ್ಕೆ ಚಿರತೆಗಳು ಸಾವು

ಬೆಂಗಳೂರು: ಅಕ್ರಮ ಗಣಿಗಾರಿಕೆಗೆ ಬಂಡೆಗಳನ್ನು ಸ್ಫೋಟಿಸಿದ ಪರಿಣಾಮ ನಾಲ್ಕು ಚಿರತೆಗಳು ಸಾವನ್ನಪ್ಪಿರುವ ಘಟನೆ ಯಶವಂತಪುರ ಕ್ಷೇತ್ರದ ಚಿಕ್ಕನಹಳ್ಳಿಯಲ್ಲಿ ನಡೆದಿದೆ.

ಚಿಕ್ಕನಹಳ್ಳಿ ವ್ಯಾಪ್ತಿಯಲ್ಲಿ ಅವ್ಯಾಹತವಾಗಿ ಅಕ್ರಮ ಗಣಿಗಾರಿಕೆ ನಡೆಸಾಗುತ್ತಿರುವ ಆರೋಪ ಕೇಳಿಬಂದಿದ್ದು, ಬಂಡೆಗಳನ್ನು ಸ್ಫೋಟಿಸಿದ ಪರಿಣಾಮ ನಾಲ್ಕು ಚಿರತೆಗಳು ಸಾವನ್ನಪ್ಪಿವೆ ಎಂದು ಶಾಸಕ ಎಸ್.ಟಿ.ಸೋಮಶೇಖರ್ ಆರೋಪಿಸಿದ್ದಾರೆ.

ಈ ಭಾಗದ ಅಕ್ರಮ ಕ್ರಷರ್ ಗಳನ್ನು ನಿಲ್ಲಿಸುವಂತೆ ಈಗಾಗಲೇ ಅರಣ್ಯ ಇಲಾಖೆಗೆ, ಸಂಬಂಧಪಟ್ಟ ಅಧಿಕಾರಿಗಳಿಗಿಗೆ ಪತ್ರ ಬರೆದಿದ್ದೇನೆ. ಇದನ್ನು ಸರ್ಕಾರ ಹಾಗೂ ಅರಣ್ಯ ಇಲಾಖೆ ಸಚಿವರು ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಎಸ್.ಟಿ.ಸೋಮಶೇಖರ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅರಣ್ಯ ಸಚಿವ ಈಶ್ವರ ಖಂಡ್ರೆ, ಚಿಕ್ಕನಹಳ್ಳಿಯಲ್ಲಿ ನಡೆದ ಬಂಡೆ ಸ್ಫೋಟ ಪ್ರಕರಣ ಅರಣ್ಯ ಇಲಾಖೆ ವ್ಯಾಪ್ತಿಗೆ ಬರುವುದಿಲ್ಲ. ಅಲ್ಲಿ ನಡೆದಿರುವುದು ಕ್ವಾರಿ ಸ್ಫೋಟ. ಘಟನೆಯಲ್ಲಿ ಒಂದು ಚಿರತೆ ಸಾವನ್ನಪ್ಪಿದೆ. ಅದರ ಹೊಟ್ಟೆಯಲ್ಲಿ ಮರಿಗಳಿದ್ದವು ಎಂಬುದು ಪರೀಕ್ಷೆ ವೇಳೆ ತಿಳಿದುಬಂದಿದೆ. ಅದೇನೇ ಇದ್ದರೂ ಈ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular