HomeKarnatakaಠೇವಣಿದಾರರ ಹಣ ಅಕ್ರಮ ವರ್ಗಾವಣೆ: 16.95 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ

ಠೇವಣಿದಾರರ ಹಣ ಅಕ್ರಮ ವರ್ಗಾವಣೆ: 16.95 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ

ಬೆಂಗಳೂರು: ಬೆಂಗಳೂರಿನ ಸಿರಿ ವೈಭವ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತ ಸೊಸೈಟಿಯಲ್ಲಿ ನಡೆದ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಅಧ್ಯಕ್ಷೆ ಬಿ.ಎಸ್. ನಾಗವಲ್ಲಿ, ಅವರ ಪತಿ ಹಾಗೂ ಮಾಜಿ ಸಿಇಒ ವಿ.ಆರ್. ರಾಜೇಶ್ ಅವರಿಗೆ ಸೇರಿದ 16.95 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿಯನ್ನು ಜಾರಿ ನಿರ್ದೇಶನಾಲಯ(ಇ.ಡಿ.) ಮುಟ್ಟುಗೋಲು ಹಾಕಿಕೊಂಡಿದೆ.

ನಾಗವಲ್ಲಿ ಮತ್ತು ರಾಜೇಶ್ ಸೊಸೈಟಿ ಠೇವಣಿದಾರರ 65 ಕೋಟಿ ರೂಪಾಯಿಗಳನ್ನು ಅಕ್ರಮವಾಗಿ ವರ್ಗಾವಣೆ ಮಾಡಿಕೊಂಡಿದ್ದರು. ಈ ಪ್ರಕರಣದ ತನಿಖೆ ನಡೆಸಿದ ಇ.ಡಿ. ಅಧಿಕಾರಿಗಳು ಇಬ್ಬರು ಅಕ್ರಮವಾಗಿ ಸ್ಥಿರಾಸ್ತಿ ಖರೀದಿಸಿರುವುದನ್ನು ಪತ್ತೆ ಮಾಡಿದ್ದರು. ಆರೋಪಿಗಳು ಬೆಂಗಳೂರು, ಮೈಸೂರು, ರಾಮನಗರ ಸೇರಿದಂತೆ ಹಲವೆಡೆ ಖರೀದಿಸಿದ್ದ ಕೃಷಿ ಭೂಮಿ, ನಿವೇಶನ ಸೇರಿ ಒಟ್ಟು 16.95 ಕೋಟಿ ರೂಪಾಯಿ ಮೌಲ್ಯದ 11 ಸ್ಥಿರಾಸ್ತಿಗಳನ್ನು ಜಪ್ತಿ ಮಾಡಲಾಗಿದೆ.

2011ರಲ್ಲಿ ಉತ್ತರಹಳ್ಳಿಯಲ್ಲಿ ಸಿರಿ ವೈಭವ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತ ಸೊಸೈಟಿ ಸ್ಥಾಪಿಸಿ ಹಲವು ಶಾಖೆಗಳನ್ನು ನಗರದ ವಿವಿಧೆಡೆ ರಾಜೇಶ್ ದಂಪತಿ ಆರಂಭಿಸಿದ್ದರು. ರಾಜೇಶ್ ಸೊಸೈಟಿ ಸಿಇಒ ಆಗಿ ನಾಗವಲ್ಲಿ ಅಧ್ಯಕ್ಷರಾಗಿದ್ದರು. ಸೊಸೈಟಿಯ ಬೈಲಾ ನಿಯಮಗಳನ್ನು ಉಲ್ಲಂಘಿಸಿ ಠೇವಣಿದಾರರ 65 ಕೋಟಿ ರೂಪಾಯಿ ದುರ್ಬಳಕೆ ಮಾಡಿದ ಆರೋಪ ಕೇಳಿ ಬಂದಿತ್ತು. 2022 ರಲ್ಲಿ ಸುಬ್ರಹ್ಮಣ್ಯಪುರ ಠಾಣೆಯಲ್ಲಿ ಸೊಸೈಟಿ ನಿರ್ದೇಶಕ ಶರಣ ಗೌಡ ಜಿ. ಪಾಟೀಲ್ ದೂರು ದಾಖಲಿಸಿದ್ದರು. ತನಿಖೆ ನಡೆಸಿದ ಪೊಲೀಸರು ನಾಗವಲ್ಲಿ, ರಾಜೇಶ್ ದಂಪತಿ ಸೇರಿ ಹಲವರನ್ನು ಬಂಧಿಸಿದ್ದರು. ನಂತರ ಪ್ರಕರಣ ತನಿಖೆಯನ್ನು ಸಿಐಡಿಗೆ ವಹಿಸಲಾಗಿತ್ತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular