HomeLatest NewsT20 World Cup 2026: ಪಾಕ್ ವಿರುದ್ಧ ಗೆಲ್ಲಲು ಭಾರತ ಈ ಇಬ್ಬರನ್ನು ಕಣಕ್ಕಿಳಿಸಲೇಬೇಕು ಎಂದ...

T20 World Cup 2026: ಪಾಕ್ ವಿರುದ್ಧ ಗೆಲ್ಲಲು ಭಾರತ ಈ ಇಬ್ಬರನ್ನು ಕಣಕ್ಕಿಳಿಸಲೇಬೇಕು ಎಂದ ಪಠಾಣ್

ಇಂದು ( ಫೆಬ್ರವರಿ 15 ) ಕೊಲಂಬೊದ ಪ್ರೇಮದಾಸ ಕ್ರೀಡಾಂಗಣದಲ್ಲಿ ಐಸಿಸಿ ಟಿ ಟ್ವೆಂಟಿ ವಿಶ್ವಕಪ್ 2026ರ ಗ್ರೂಪ್ ಹಂತದ 27ನೇ ಪಂದ್ಯ ನಡೆಯಲಿದ್ದು, ಬದ್ಧ ವೈರಿಗಳಾದ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ.

ಸಂಜೆ ಏಳು ಗಂಟೆಗೆ ಆರಂಭವಾಗಲಿದ್ದು, ಈ ಪಂದ್ಯದಲ್ಲಿ ಗೆಲ್ಲುವ ತಂಡ ಎ ಗುಂಪಿನ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯುವುದರ ಜೊತೆಗೆ ಸೂಪರ್ 8 ಸುತ್ತಿಗೆ ಅರ್ಹತೆ ಗಿಟ್ಟಿಸಿಕೊಳ್ಳಲಿದೆ. ಹೀಗಾಗಿ ಈ ಪಂದ್ಯದ ಮಹತ್ವ ಹೆಚ್ಚಾಗಿದೆ.

ಇನ್ನು ಶ್ರೀಲಂಕಾದ ಕೊಲಂಬೊ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯುವ ಕಾರಣ ಅಲ್ಲಿಗೆ ತಕ್ಕ ಹಾಗೆ ತಂಡವನ್ನು ಸಿದ್ಧಪಡಿಸಿಕೊಳ್ಳಬೇಕಾಗಿರುವುದು ಭಾರತಕ್ಕೆ ಅಗತ್ಯವಾಗಿದ್ದು, ಹೆಚ್ಚು ಸ್ಪಿನ್ನರ್‌ಗಳೊಂದಿಗೆ ಕಣಕ್ಕಿಳಿಯುವುದು ಉತ್ತಮ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಭಾರತದ ಮಾಜಿ ಕ್ರಿಕೆಟಿಗ, 2007ರ ಟಿ ಟ್ವೆಂಟಿ ವಿಶ್ವಕಪ್ ವಿಜೇತ ಇರ್ಫಾನ್ ಪಠಾಣ್ ಸಹ ಈ ಕುರಿತು ಮಾತನಾಡಿದ್ದು, ಅರ್ಷ್‌ದೀಪ್ ಸಿಂಗ್ ಕಣಕ್ಕಿಳಿಸುವ ಬದಲು ಕುಲ್‌ದೀಪ್ ಯಾದವ್‌ರನ್ನು ತಂಡಕ್ಕೆ ಕರೆತರಬೇಕು ಎಂದಿದ್ದಾರೆ. ಪ್ರೇಮದಾಸ ಕ್ರೀಡಾಂಗಣಕ್ಕೆ ತಕ್ಕನಾಗಿ ಹಾಗೂ ಪಾಕಿಸ್ತಾನ ತಂಡಕ್ಕೆ ಕಾಡುವ ಸಲುವಾಗಿ ಕುಲ್‌ದೀಪ್ ಯಾದವ್ ಸರಿಯಾದ ಆಯ್ಕೆ ಎಂಬುದು ಇರ್ಫಾನ್ ಪಠಾಣ್ ಅಭಿಪ್ರಾಯ. ವೇಗಿಯಾಗಿ ಜಸ್‌ಪ್ರೀತ್ ಬುಮ್ರಾ ತಂಡದಲ್ಲಿದ್ದರೆ, ವರುಣ್ ಚಕ್ರವರ್ತಿ, ಅಕ್ಸರ್ ಪಟೇಲ್ ಹಾಗೂ ಕುಲ್‌ದೀಪ್ ಯಾದವ್ ಈ ಮೂವರು ಸ್ಪಿನ್ನರ್‌ಗಳನ್ನು ಕಣಕ್ಕಿಳಿಸಬೇಕು ಎಂದಿದ್ದಾರೆ.

ಇನ್ನು ಕಳೆದ ಪಂದ್ಯಗಳಲ್ಲಿ ಗಮನಾರ್ಹ ಪ್ರದರ್ಶನ ನೀಡದ ರಿಂಕು ಸಿಂಗ್‌ರನ್ನು ಈ ಪಂದ್ಯದಿಂದ ಕೈಬಿಡಲಿದ್ದಾರೆ ಎನ್ನುವ ಸುದ್ದಿಗಳು ಹರಿದಾಡುತ್ತಿದ್ದು, ಇರ್ಫಾನ್ ಪಠಾಣ್ ರಿಂಕು ಸಿಂಗ್ ತಂಡದಲ್ಲಿರಬೇಕು ಎಂದು ರಿಂಕು ಪರ ಬ್ಯಾಟ್ ಬೀಸಿದ್ದಾರೆ. ವಾಷಿಂಗ್ಟನ್ ಸುಂದರ್ ರೀತಿಯ ಆಟಗಾರನ ಬದಲು ರಿಂಕು ಸಿಂಗ್‌ ಕಣಕ್ಕಿಳಿಸಿದರೆ ಡೆತ್ ಓವರ್‌ಗಳಲ್ಲಿ ರಿಂಕು ತಂಡದ ಕೈಹಿಡಿಯಲಿದ್ದಾರೆ ಎಂದು ಪಠಾಣ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪಠಾಣ್ ಪ್ರಕಾರ ಪಾಕ್ ವಿರುದ್ಧ ಕಣಕ್ಕಿಳಿಯಬೇಕಾದ ಭಾರತ ತಂಡ: ಅಭಿಷೇಕ್ ಶರ್ಮಾ, ಇಶಾನ್ ಕಿಶನ್ (ವಿಕೆಟ್‌ಕೀಪರ್), ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ (ನಾಯಕ), ಹಾರ್ದಿಕ್ ಪಾಂಡ್ಯ, ಶಿವಮ್ ದುಬೆ, ರಿಂಕು ಸಿಂಗ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ ಮತ್ತು ವರುಣ್ ಚಕ್ರವರ್ತಿ.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular