HomeEntertainmentಸೂಪರ್ ಸ್ಟಾರ್ ಆದ್ರೂ ಸಿಂಪಲ್ ಅಂದ್ರೆ ಇವರೇ: ಸೆಕ್ಯೂರಿಟಿ ಚೆಕ್ ವೇಳೆ ಶಾರುಖ್ ಖಾನ್ ವಿನಯವಂತಿಕೆಗೆ...

ಸೂಪರ್ ಸ್ಟಾರ್ ಆದ್ರೂ ಸಿಂಪಲ್ ಅಂದ್ರೆ ಇವರೇ: ಸೆಕ್ಯೂರಿಟಿ ಚೆಕ್ ವೇಳೆ ಶಾರುಖ್ ಖಾನ್ ವಿನಯವಂತಿಕೆಗೆ ನೆಟ್ಟಿಗರ ಜೈಕಾರ

ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್ ಸಿನಿಮಾ ವಿಚಾರವಾಗಿ ಮಾತ್ರವಲ್ಲದೆ, ತಮ್ಮ ನಡವಳಿಕೆಯ ಮೂಲಕವೂ ಆಗಾಗ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗೆ ಮುಂಬೈ ವಿಮಾನ ನಿಲ್ದಾಣದಲ್ಲಿ ನಡೆದ ಘಟನೆಯೊಂದು ಇದಕ್ಕೆ ಸಾಕ್ಷಿಯಾಗಿದ್ದು, ಈ ಕುರಿತ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.

ಗುರುವಾರ ಮುಂಜಾನೆ ಶಾರುಖ್ ಖಾನ್ ಅವರು ಮುಂಬೈ ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ, ಭದ್ರತಾ ತಪಾಸಣೆಯ ಭಾಗವಾಗಿ ಅಲ್ಲಿನ ಸಿಬ್ಬಂದಿ ಅವರನ್ನು ತಡೆದಿದ್ದಾರೆ. ಈ ವೇಳೆ ಮುಖದ ಗುರುತು ಪತ್ತೆ ಹಚ್ಚುವ ಪ್ರಕ್ರಿಯೆಗಾಗಿ ಅವರು ಧರಿಸಿದ್ದ ಕೂಲಿಂಗ್ ಗ್ಲಾಸ್ ತೆಗೆಯುವಂತೆ ಭದ್ರತಾ ಅಧಿಕಾರಿ ವಿನಂತಿಸಿದ್ದಾರೆ. ಯಾವುದೇ ಹಮ್ಮು-ಬಿಮ್ಮು ಪ್ರದರ್ಶಿಸದೆ, ಶಾರುಖ್ ತಕ್ಷಣವೇ ತಮ್ಮ ಕನ್ನಡಕ ತೆಗೆದು ಸಹಕರಿಸಿದ್ದಾರೆ.

ಕೇವಲ ನಿಯಮ ಪಾಲಿಸುವುದು ಮಾತ್ರವಲ್ಲದೆ, ಭದ್ರತಾ ತಪಾಸಣೆ ಮುಗಿದ ನಂತರ ಶಾರುಖ್ ಅವರು ಆ ಅಧಿಕಾರಿಯ ಬೆನ್ನು ತಟ್ಟಿ, ನಗುಮೊಗದಿಂದಲೇ ಅಲ್ಲಿಂದ ಹೊರಟಿದ್ದಾರೆ. ಸೂಪರ್ ಸ್ಟಾರ್ ಆಗಿದ್ದರೂ ಕೂಡ ವಿಮಾನ ನಿಲ್ದಾಣದ ಶಿಷ್ಟಾಚಾರಗಳನ್ನು ಸಾಮಾನ್ಯ ನಾಗರಿಕನಂತೆ ಪಾಲಿಸಿದ ಅವರ ಈ ನಡವಳಿಕೆ ಈಗ ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಹಂಚಿಕೊಂಡಿರುವ ಅಭಿಮಾನಿಗಳು, ಶಾರುಖ್ ಅವರ ವಿನಯವಂತಿಕೆಯನ್ನು ಕೊಂಡಾಡುತ್ತಿದ್ದಾರೆ. ಕಾನೂನಿನ ಮುಂದೆ ಎಲ್ಲರೂ ಒಂದೇ ಎನ್ನುವುದನ್ನು ಕಿಂಗ್ ಖಾನ್ ಸಾಬೀತುಪಡಿಸಿದ್ದಾರೆ ಎಂದು ಜನರು ಕಮೆಂಟ್ ಮಾಡುತ್ತಿದ್ದಾರೆ. ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ, ಶಾರುಖ್ ಖಾನ್ ಮುಂದಿನ ದಿನಗಳಲ್ಲಿ ‘ಕಿಂಗ್’ ಎಂಬ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular