ಬೆಂಗಳೂರು: ಓಡುವಾಗಲೋ, ಮನೆಯ ಕೆಲಸ ಮಾಡುವಾಗಲೋ ಅಥವಾ ಜಿಮ್‌ನಲ್ಲಿ ವರ್ಕೌಟ್ ಮಾಡುವಾಗಲೋ ಇದ್ದಕ್ಕಿದ್ದಂತೆ ಕಾಲೋ, ಕೈಯೋ ಉಳುಕುವುದು, ಸ್ನಾಯು ಸೆಳೆತ (Muscle Catch) ಉಂಟಾಗುವುದು ತುಂಬಾ ಸಾಮಾನ್ಯ. ಆದರೆ ಇಂತಹ ತುರ್ತು ಸಂದರ್ಭದಲ್ಲಿ ನೋವು ಮತ್ತು ಊತ ಕಡಿಮೆ ಮಾಡಲು ಐಸ್ ಪ್ಯಾಕ್ (Cold Compress) ಹಚ್ಚಬೇಕೋ ಅಥವಾ ಬಿಸಿ ಶಾಖ (Hot Compress) ಕೊಡಬೇಕೋ? ಈ ಗೊಂದಲ ಪ್ರತಿಯೊಬ್ಬರನ್ನೂ ಕಾಡುತ್ತದೆ. ತಪ್ಪು ಚಿಕಿತ್ಸೆ ನೀಡಿದರೆ ನೋವು ಕಡಿಮೆಯಾಗುವ ಬದಲು ಸಮಸ್ಯೆ ಇನ್ನು ಹೆಚ್ಚಾಗಬಹುದು ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ,ಅಸಲಿಗೆ ಗಾಯವಾದ ತಕ್ಷಣ ನಾವು ಮಾಡಬೇಕಾದ ಸರಿಯಾದ ಪ್ರಥಮ ಚಿಕಿತ್ಸೆ ಏನು? ಆರೋಗ್ಯ ತಜ್ಞರು ನೀಡಿರುವ ಕಂಪ್ಲೀಟ್ ಮಾಹಿತಿ ಇಲ್ಲಿದೆ:
ಹೊಸದಾಗಿ ಗಾಯವಾದರೆ ತಕ್ಷಣವೇ ಕೋಲ್ಡ್ ಥೆರಪಿ (ಐಸ್ ಪ್ಯಾಕ್) ಬಳಸಿ
ನಿಮಗೆ ಇದ್ದಕ್ಕಿದ್ದಂತೆ ಬಿದ್ದ ತಕ್ಷಣ ಹೊಡೆತ ಬಿದ್ದರೆ, ಕೀಲುಗಳು ಉಳುಕಿದರೆ ಅಥವಾ ಹಠಾತ್ ಊತ ಕಾಣಿಸಿಕೊಂಡರೆ, ಮೊದಲ 24 ರಿಂದ 48 ಗಂಟೆಗಳ ಕಾಲ ಕೇವಲ ಕೋಲ್ಡ್ ಪ್ಯಾಕ್ ಅಥವಾ ಐಸ್ ಕ್ಯೂಬ್‌ಗಳನ್ನು ಬಳಸುವುದು ಅತ್ಯಂತ ಪರಿಣಾಮಕಾರಿ.
ಊತ ನಿಯಂತ್ರಣ: ಐಸ್ ಪ್ಯಾಕ್ ಹಚ್ಚುವುದರಿಂದ ಗಾಯಗೊಂಡ ಜಾಗದ ರಕ್ತನಾಳಗಳು ಸಂಕುಚಿತಗೊಳ್ಳುತ್ತವೆ (Shrink). ಇದರಿಂದ ಅಲ್ಲಿಗೆ ಅತಿಯಾಗಿ ರಕ್ತ ಹರಿಯುವುದು ತಪ್ಪುತ್ತದೆ ಮತ್ತು ಊತ ತಕ್ಷಣವೇ ಕಂಟ್ರೋಲ್‌ಗೆ ಬರುತ್ತದೆ.
ನೋವು ನಿವಾರಕ: ಐಸ್ ಆ ಜಾಗವನ್ನು ತಾತ್ಕಾಲಿಕವಾಗಿ ಮರಗಟ್ಟುವಂತೆ (Numb) ಮಾಡುತ್ತದೆ, ಇದರಿಂದ ಮೆದುಳಿಗೆ ನೋವಿನ ಸಂಕೇತಗಳು ತಲುಪುವುದು ಕಡಿಮೆಯಾಗಿ ತ್ವರಿತ ಪರಿಹಾರ ಸಿಗುತ್ತದೆ.
https://www.instagram.com/reel/DU_oSDPDEcE/?utm_source=ig_web_copy_link&igsh=NTc4MTIwNjQ2YQ==
ಬಿಸಿ ಶಾಖವನ್ನು ಯಾವಾಗ ನೀಡಬೇಕು?
ಬಹಳಷ್ಟು ಜನರು ಗಾಯವಾದ ತಕ್ಷಣವೇ ಬಿಸಿ ನೀರು ಅಥವಾ ಹಾಟ್ ಬ್ಯಾಗ್ ಇಟ್ಟು ಶಾಖ ಕೊಡಲು ಶುರು ಮಾಡುತ್ತಾರೆ. ಆದರೆ ನೆನಪಿಡಿ, ಹೊಸದಾಗಿ ರಕ್ತ ಹೆಪ್ಪುಗಟ್ಟಿದ ಅಥವಾ ಊತವಿರುವ ಜಾಗಕ್ಕೆ ಬಿಸಿ ಶಾಖ ಕೊಟ್ಟರೆ ಊತ ಮತ್ತಷ್ಟು ಹೆಚ್ಚಾಗುತ್ತದೆ
ಯಾವಾಗ ಬಳಸಬೇಕು?: ಗಾಯವಾಗಿ 48 ಗಂಟೆಗಳು ಕಳೆದ ನಂತರ, ಹಳೆಯ ಸ್ನಾಯು ನೋವು, ಕಠಿಣವಾದ ಕೀಲು ನೋವು (Stiffness) ಅಥವಾ ಶಸ್ತ್ರಚಿಕಿತ್ಸೆಯ (Surgery) ನಂತರದ ಹಳೆಯ ನೋವುಗಳಿಗೆ ಬಿಸಿ ಶಾಖ ನೀಡುವುದು ಸೂಕ್ತ. ಇದು ರಕ್ತ ಪರಿಚಲನೆಯನ್ನು ಹೆಚ್ಚಿಸಿ ಸ್ನಾಯುಗಳನ್ನು ಸಡಿಲಗೊಳಿಸುತ್ತದೆ.

