HomeKarnatakaನಟೇಶ್ ಬಡ್ತಿ ನೀಡುವ ವಿಚಾರದಲ್ಲಿ ಸುಳ್ಳು ಆರೋಪ ಮಾಡಿದ್ದೇನೆಂದು ಕ್ಷಮೆ ಕೋರಿರುವುದಿಲ್ಲ: ಸ್ನೇಹಮಯಿ ಕೃಷ್ಣ

ನಟೇಶ್ ಬಡ್ತಿ ನೀಡುವ ವಿಚಾರದಲ್ಲಿ ಸುಳ್ಳು ಆರೋಪ ಮಾಡಿದ್ದೇನೆಂದು ಕ್ಷಮೆ ಕೋರಿರುವುದಿಲ್ಲ: ಸ್ನೇಹಮಯಿ ಕೃಷ್ಣ

ನಟೇಶ್ ರವರಿಗೆ ಬಡ್ತಿ ನೀಡುವ ವಿಚಾರದಲ್ಲಿ ಸುಳ್ಳು ಆರೋಪ ಮಾಡಿದ್ದೇನೆಂದು ಕ್ಷಮೆ ಕೋರಿರುವುದಿಲ್ಲ, ಕೇವಲ ಈ ಸಂದರ್ಭದಲ್ಲಿ CS ಶಾಲಿನಿ ರಜನೀಶ್ ಹೆಸರನ್ನು ಉಲ್ಲೇಖ ಮಾಡಿದ ಬಗ್ಗೆ ಕ್ಷಮೆ ಕೇಳಿದ್ದೇನೆ ಎಂದು ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ತಿಳಿಸಿದ್ದಾರೆ.

ಏಕೆಂದರೆ ನಾನು ಆರೋಪ ಮಾಡಿರುವ ಎಲ್ಲಾ ವಿಚಾರವನ್ನು ಒಪ್ಪಿಕೊಂಡು, ಅದಕ್ಕೆ ಪೂರಕವಾಗಿ ಎಲ್ಲಾ ಮಾಹಿತಿ, ಸಾಕ್ಷ್ಯಾಧಾರಗಳನ್ನು ನೀಡಿದ ವಿನೋದ್ ಈ ಒಂದು ವಿಚಾರದಲ್ಲಿ ಉಲ್ಟಾ ಹೊಡೆದಿದ್ದಾನೆ. ನಟೇಶ್ ರವರಿಗೆ ಬಡ್ತಿ ನೀಡುವ ವಿಚಾರದಲ್ಲಿ ಪ್ರಭಾವಿಗೆ ಲಂಚ ಕೊಟ್ಟಿರುವುದು ನಿಜ ಎಂದು ಒಪ್ಪಿಕೊಂಡಿದ್ದಾನೆ, ಅದಕ್ಕೆ ಪೂರಕವಾಗಿ ಕೆಲವು ಸಾಕ್ಷ್ಯಾಧಾರಗಳನ್ನು ನೀಡಿದ್ದಾನೆ, ಅದನ್ನು ಆಧರಿಸಿ, ತನಿಖೆ ನಡೆಸಿದಾಗ, “ಪ್ರಭಾವಿ” ಯಾರು ಎಂಬ ಸತ್ಯ ತಿಳಿಯುತ್ತದೆ ಎಂದು ಹೇಳಿದ್ದಾರೆ.

14 ನಿವೇಶನಗಳನ್ನು ಕಾನೂನು ಬದ್ದವಾಗಿ ಪಡೆದಿದ್ದೇವೆ ಎಂದು ವಿಧಾನಸೌಧದಲ್ಲೇ ಆರ್ಭಟಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ನಾನು ಪ್ರಕರಣ ದಾಖಲು ಮಾಡುತ್ತಿದ್ದಂತೆ ತಮ್ಮ ತಪ್ಪನ್ನು ಒಪ್ಪಿಕೊಂಡು, 14 ನಿವೇಶನಗಳನ್ನು ವಾಪಾಸ್ಸು ಕೊಟ್ಟಿದ್ದಕ್ಕಿಂತ ದೊಡ್ಡ ತಪ್ಪನ್ನು ನಾನು ಮಾಡಿರುವುದಿಲ್ಲ, ನಡೆಯುವಾಗ ಕೆಲವು ಸಲ ಎಡವುದು ಸಹಜ. ಸೈಬರ್ ಠಾಣಾ ಅಧಿಕಾರಿಗಳು ನನ್ನನ್ನು ವಶಕ್ಕೆ ಪಡೆದ ಸಂದರ್ಭದಲ್ಲಿ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ನನ್ನ ಬೆಂಬಲಕ್ಕೆ ನಿಂತ ಮಾದ್ಯಮದವರಿಗೆ, ರಾಜ್ಯದ ಜನತೆಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು, .ನಿಮ್ಮಗಳ ಬೆಂಬಲ, ಅಭಿಮಾನ ಹೀಗೆಯೇ ಇರಲಿ, ಸಾಯುವವರೆಗೆ, ಸಮಾಜದ ಹಿತಕ್ಕಾಗಿ ದುಡಿಯುತ್ತೇನೆ ಎಂದು ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular