HomeLive Newsಮುಂದಿನ ವಾರ ಡಿಸಿಎಂ ಮತ್ತೆ ದೆಹಲಿಗೆ: ನಾನು ಹೋಗದೇ ಮತ್ಯಾರು ಹೋಗಬೇಕು? ಎಂದ ಡಿ.ಕೆ.ಶಿವಕುಮಾರ್

ಮುಂದಿನ ವಾರ ಡಿಸಿಎಂ ಮತ್ತೆ ದೆಹಲಿಗೆ: ನಾನು ಹೋಗದೇ ಮತ್ಯಾರು ಹೋಗಬೇಕು? ಎಂದ ಡಿ.ಕೆ.ಶಿವಕುಮಾರ್

ಬೆಂಗಳೂರು: ನಾನು ದೆಹಲಿಗೆ ಹೋಗುವುದು ಬರುವುದು ಇದ್ದೇ ಇರುತ್ತದೆ. ನಾನು ಹೋಗದೆ ಮತ್ಯಾರು ಹೋಗುತ್ತಾರೆ? ಅವರು ಯಾವಾಗ ಕರೆಯುತ್ತಾರೋ ಆಗೆಲ್ಲಾ ಹೋಗುತ್ತೇವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಮುಂದಿನ ವಾರ ದೆಹಲಿಗೆ ಹೋಗುತ್ತೀರುವುದಾಗಿ ತಿಳಿಸಿದ್ದಾರೆ. ದೆಹಲಿಗೆ ಹೋಗುತ್ತಿದ್ದೇನೆ. ನಾನು ಹೋಗದೇ ಮತ್ಯಾರು ಹೋಗಬೇಕು ಎಂದರು.

ರಾಹುಲ್ ಗಾಂಧಿ ಅವರು ಅಮೆರಿಕ ವಿಧಿಸಿರುವ ತೆರಿಗೆ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಟೀಕಿಸಿದ ಬಗ್ಗೆ ರಾಹುಲ್ ಗಾಂಧಿ ಅವರು ದೇಶದ ಹಿತಕ್ಕಾಗಿ ಏನು ಬೇಕೋ ಅದನ್ನು ಮಾಡುತ್ತಾರೆ, ಮಾತಾಡುತ್ತಾರೆ. ಅಮೆರಿಕದ ಜತೆಗಿನ ತೆರಿಗೆ ಒಪ್ಪಂದದಿಂದ ದೇಶದ ಪ್ರತಿ ರೈತನ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ರಾಹುಲ್ ಗಾಂಧಿ ಅವರು ಲೋಕಸಭೆ ವಿರೋಧ ಪಕ್ಷದ ನಾಯಕರಾಗಿ ಚರ್ಚೆ ಮಾಡುತ್ತಾರೆ ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇನ್ನು ಇಂದು ನಾನು ಹಾಗೂ ಸಿಎಂ ಇಬ್ಬರೂ ಕಾರವಾರಕ್ಕೆ ಹೋಗಿ ವೈದ್ಯಕೀಯ ವಿವಿ ಉದ್ಘಾಟನೆ ಮಾಡುತ್ತಿದ್ದೇವೆ. ನಾಳೆ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಎರಡೂ ಸೇರಿಸಿ ಮನರೇಗಾ ಉಳಿಸಿ ಸಮಾವೇಶ ಹಮ್ಮಿಕೊಂಡಿದ್ದೇವೆ. ದೆಹಲಿಯಿಂದ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ ಅವರು ಆಗಮಿಸುತ್ತಿದ್ದು, ಸಮಾವೇಶಕ್ಕೆ ಕಾಂಗ್ರೆಸ್ ಪಕ್ಷದ ಎಲ್ಲಾ ಶಾಸಕರು ಆಗಮಿಸಬೇಕು. ಮನರೇಗಾ ರಕ್ಷಣೆಗೆ ಆಗ್ರಹಿಸಿ ಬಹುತೇಕ ಎಲ್ಲಾ ಕ್ಷೇತ್ರಗಳಲ್ಲಿ ಪಾದಯಾತ್ರೆ ಮಾಡಲಾಗಿದೆ. ಬಾಕಿ ಇರುವ ಕ್ಷೇತ್ರಗಳಲ್ಲೂ ಮಾಡಲಾಗುವುದು ಎಂದು ತಿಳಿಸಿದರು.

ನಿನ್ನೆ ಜಿಬಿಎ ಕಾಮಗಾರಿಗಳ ಪ್ರಗತಿ ಪರಿಶೀಲನೆ ಸಭೆ ಮಾಡಿದ್ದು, ಬೆಂಗಳೂರು ನಗರದಲ್ಲಿ 5065 ಕೋಟಿ ರೂ. ಮೊತ್ತದ ರಸ್ತೆ ಕಾಮಗಾರಿಗಳು ನಡೆಯುತ್ತಿವೆ. ಎಲ್ಲವನ್ನೂ ಏಪ್ರಿಲ್ ತಿಂಗಳಾಂತ್ಯದಲ್ಲಿ ಪೂರ್ಣಗೊಳಿಸಲು ಸೂಚಿಸಲಾಗಿದೆ. ಬೆಂಗಳೂರು ಸುತ್ತಮುತ್ತ 40 ಕಿ.ಮೀ ಒಳಗೆ ಗುಡ್ಡಗಳ ಅಕ್ಕಪಕ್ಕ ಜಾಗ ಕೊಟ್ಟರೆ ಸರ್ಕಾರ ಅದನ್ನು ಖರೀದಿ ಮಾಡಲಿದೆ. ಸುಮಾರು 100 ಎಕರೆಯಷ್ಟು ಖರೀದಿ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಪರಮೇಶ್ವರ್ ಭೇಟಿ ವಿಚಾರವಾಗಿ ಪ್ರತಿಕ್ರಿಯಿಸಿದ ಡಿಸಿಎಂ, ಪರಮೇಶ್ವರ್ ಅವರು ತಮ್ಮ ಕ್ಷೇತ್ರದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಅಥವಾ ಕ್ಷೇತ್ರಕ್ಕೆ ಸಂಬಂಧಿಸಿದ ಇತರೆ ವಿಚಾರವಾಗಿ ಚರ್ಚೆ ಮಾಡಲು ಭೇಟಿಯಾಗಿರಬಹುದು. ರಾಜ್ಯ ಸಚಿವರು ಹಾಗೂ ಕೇಂದ್ರ ಸಚಿವರು ಭೇಟಿ ಮಾಡಿದ್ದಾರೆ ಎಂದು ತಿಳಿಸಿದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular