HomeHealthಡಯಾಬಿಟಿಕ್‌ ಫುಟ್‌ ಅಲ್ಸರ್‌ ರೋಗಿಗಳಿಗೆ ಪರಿಣಾಮಕಾರಿ ಹೈಪರ್‌ಬೇರಿಕ್ ಆಮ್ಲಜನಕ ಚಿಕಿತ್ಸೆ: ವಿಶೇಷ ಚಿಕಿತ್ಸಾ ವಿಧಾನಕ್ಕೆ ಚಾಲನೆ

ಡಯಾಬಿಟಿಕ್‌ ಫುಟ್‌ ಅಲ್ಸರ್‌ ರೋಗಿಗಳಿಗೆ ಪರಿಣಾಮಕಾರಿ ಹೈಪರ್‌ಬೇರಿಕ್ ಆಮ್ಲಜನಕ ಚಿಕಿತ್ಸೆ: ವಿಶೇಷ ಚಿಕಿತ್ಸಾ ವಿಧಾನಕ್ಕೆ ಚಾಲನೆ

ಬೆಂಗಳೂರು: ದೇಶದಲ್ಲಿರುವ ಸುಮಾರು 8 ಕೋಟಿ ಮಂದಿ ಮಧುಮೇಹದಿಂದ ಬಳಲುತ್ತಿದ್ದು ಇವರಲ್ಲಿ ಬಹುತೇಕ ಮಂದಿ ಕಾಲುಗಳಿಗೆ ಸಂಬಂಧಿಸಿದ ಮತ್ತೊಂದು ಸಮಸ್ಯೆಯನ್ನೂ ಎದುರಿಸುತ್ತಿದ್ದಾರೆ ಎಂಬುದು ವರದಿಗಳಲ್ಲಿ ಕಂಡುಬಂದಿದೆ.

ಮಧುಮೇಹ ಪಾದದ ಹುಣ್ಣು ಅಂದರೆ ಡಯಾಬಿಟಿಕ್‌ ಫುಟ್‌ ಅಲ್ಸರ್‌ (DFU) ಮಧುಮೇಹ ರೋಗಿಗಳಲ್ಲಿ 25% ರಿಂದ 34% ರವರೆಗೆ ಒಂದು ಹಂತದಲ್ಲಿ ಪರಿಣಾಮ ಬೀರುತ್ತದೆ, ಆ ಪ್ರಕರಣಗಳಲ್ಲಿ ಅರ್ಧದಷ್ಟು ಗಂಭೀರ ಸೋಂಕಿಗೆ ತುತ್ತಾಗುತ್ತದೆ. ಈ ರೀತಿಯ ಸಮಸ್ಯೆಗಳಿಗೆ ಹೈಪರ್‌ಬೇರಿಕ್ ಆಮ್ಲಜನಕ ಚಿಕಿತ್ಸೆ (HBOT) ಪರಿಣಾಮಕಾರಿಯಾಗಿದ್ದು, ರೋಗಿಗಳಿಗೆ ಸಾಕಷ್ಟು ಸಮಾಧಾನ ಒದಗಿಸುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇಂದಿರಾನಗರದಲ್ಲಿರುವ ಕರ್ನಾಟಕ ಎಂಡೊಕ್ರೈನಾಲಜಿ ಮತ್ತು ಸಂಶೋಧನಾ ಸಂಸ್ಥೆಯಲ್ಲಿ (KIER) ಅಂತಹ ಚಿಕಿತ್ಸೆಯನ್ನು ಆರಂಭಿಸಲಾಗಿದೆ. “HBOT ಕೇವಲ ವೈದ್ಯಕೀಯ ಚಿಕಿತ್ಸೆಯಲ್ಲ. ಇದು ಸಮಾಧಾನಕರ ಜೀವನೋಪಾಯಕ್ಕೆ ಅವಕಾಶ ಕಲ್ಪಿಸುವುದಾಗಿದೆ.

ಈ ಚಿಕಿತ್ಸಾ ಪದ್ಧತಿಯನ್ನು ಉದ್ಘಾಟಿಸಿ ಮಾತನಾಡಿದ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಜೀವನೋಪಾಯ ಮತ್ತು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಶರಣಪ್ರಕಾಶ್ ಆರ್. ಪಾಟೀಲ್ ಈಗ ಮಧುಮೇಹ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಲು ನಾವು ಸಜ್ಜಾಗಿದ್ದೇವೆ ಎಂದರು.

ಅತಿ ಹೆಚ್ಚು ಮಧುಮೇಹಿಗಳನ್ನು ಹೊಂದಿರುವ ಜಗತ್ತಿನ ದೇಶಗಳ ಪೈಕಿ ಭಾರತ ಕೂಡ ಒಂದಾಗಿದೆ. ಪ್ರತಿ 7 ವಯಸ್ಕರಲ್ಲಿ ಒಬ್ಬರಿಗೆ ಮಧುಮೇಹ ಇದೆ. ಜೊತೆಗೆ ಮಧುಮೇಹ ಪಾದದ ಕಾಯಿಲೆಯು ಇರುವುದು ಸಮಸ್ಯೆಯನ್ನು ಹೆಚ್ಚಿಸಿದೆ. ದೈನಂದಿನ ಸಮಯದಲ್ಲಿ ಬರಿಗಾಲಿನಲ್ಲಿ ನಡೆಯುವುದು ಇವರಿಗೆ ದುಸ್ತರವಾಗಿದೆ. ಇದರಿಂದ ಆರ್ಥಿಕ ಹಾನಿಯೂ ಆಗುತ್ತಿದೆ. ಮಧುಮೇಹ ಪಾದದ ರೋಗನಿರ್ಣಯದಿಂದ ಗುಣಪಡಿಸುವವರೆಗೆ ಸರಾಸರಿ ₹1.5 ಲಕ್ಷ ವೆಚ್ಚವಾಗುತ್ತದೆ.

ಈ ಕುರಿತು ಮಾತನಾಡಿದ ಕೆಐಇಆರ್‌ ನಿರ್ದೇಶಕ ಡಾ. ರವಿ, ಮಧುಮೇಹ ಪಾದದ ಗಾಯದ ರೋಗಿಗಳಿಗೆ ಹೆಚ್ಚಿನ ಸಾಂದ್ರತೆಯ ಆಮ್ಲಜನಕವನ್ನು ನೀಡುವ ಮೂಲಕ ಇದನ್ನು ಗುಣಪಡಿಸಬಹುದಾಗಿದೆ. ಈ ಚಿಕಿತ್ಸೆಯು ಸೋಂಕಿನ ವಿರುದ್ಧ ಹೋರಾಡುತ್ತದೆ ಅಥವಾ ಕತ್ತರಿಸಬಹುದಾದ ಅಂಗಗಳನ್ನು ಉಳಿಸಲು ನಿರ್ಣಾಯಕವಾಗಿ ಸಹಾಯ ಮಾಡುತ್ತದೆ ಎಂದು ವಿವರಿಸಿದರು.

ಕರ್ನಾಟಕದಲ್ಲಿ ಮಧುಮೇಹದ ಹರಡುವಿಕೆಯು 12–16% ಎಂದು ಅಂದಾಜಿಸಲಾಗಿದೆ, ನಗರಗಳಲ್ಲಿಯೂ ಇದರ ಪ್ರಮಾಣ ಹೆಚ್ಚಾಗಿದೆ. ವಾರ್ಷಿಕವಾಗಿ 11,000–13,500 ಹೊಸ ಮಧುಮೇಹ ಪಾದ ಪ್ರಕರಣಗಳು ವರದಿಯಾಗುತ್ತಿವೆ. ಇದು ಆಘಾತಕಾರಿಯಲ್ಲದಿದ್ದರೂ ಸುಮಾರು 80% ರಷ್ಟು ಅಂಗಚ್ಛೇದನಗಳಿಗೆ ಕಾರಣವಾಗುತ್ತಿವೆ ಎಂದು ಅಂದಾಜಿಸಲಾಗಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular