HomeLatest NewsBIG NEWS: ವಾಹನ ಸವಾರರಿಗೆ ಬಿಗ್ ಶಾಕ್: ಏಪ್ರಿಲ್ 1ರಿಂದ ರಾಜ್ಯಾದ್ಯಂತ ಟೋಲ್ ದರ ಹೆಚ್ಚಳ

BIG NEWS: ವಾಹನ ಸವಾರರಿಗೆ ಬಿಗ್ ಶಾಕ್: ಏಪ್ರಿಲ್ 1ರಿಂದ ರಾಜ್ಯಾದ್ಯಂತ ಟೋಲ್ ದರ ಹೆಚ್ಚಳ

ಬೆಂಗಳೂರು: ರಾಜ್ಯದ ಜನತೆಗೆ ಒಂದರ ಬೆನ್ನಲ್ಲೇ ಮತ್ತೊಂದು ಶಾಕ್ ಕಾದಿದೆ. ಅದರಲ್ಲಿಯೂ ವಾಹನ ಸವಾರರಿಗೆ ಬಿಗ್ ಶಾಕ್ ಎದುರಾಗಿದೆ. ರಾಜ್ಯದಾದ್ಯಂತ ಟೋಲ್ ದರಗಳನ್ನು ಹೆಚ್ಚಲವಾಗಲಿದೆ.

ಏಪ್ರಿಲ್ 1ರಿಂದ ಟೋಲ್ ದರ ಶೇ 3 ರಿಂದ 5 ರವರೆಗೆ ಹೆಚ್ಚಿಸುವುದು ಬಹುತೇಕ ಖಚಿತವಾಗಿದ್ದು, ಅಧಿಕೃತ ಘೋಷಣೆಯಷ್ಟೇ ಬಾಕಿ ಇದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮಾಹಿತಿಯ ಪ್ರಕಾರ, ಪ್ರತಿವರ್ಷದಂತೆ ಈ ಬಾರಿ ಕೂಡ ಹೋಲ್​ಸೇಲ್ ಪ್ರೈಸ್ ಇಂಡೆಕ್ಸ್ ಆಧಾರಿತವಾಗಿ ಟೋಲ್ ದರ ಪರಿಷ್ಕರಣೆ ಮಾಡಲಾಗುತ್ತಿದೆ.

ಈ ಮೂಲಕ ರಾಜ್ಯದ ಬಹುತೇಕ ಟೋಲ್ ಪ್ಲಾಜಾಗಳಲ್ಲಿ ದರ ಏರಿಕೆ ಆಗುವ ಸಾಧ್ಯತೆ ಇದೆ. ಕೆಲವೇ ಪ್ಲಾಜಾಗಳಲ್ಲಿ ಅಂದರೆ ಸುಮಾರು 10 ಪ್ಲಾಜಾಗಳಲ್ಲಿ ಸೆಪ್ಟೆಂಬರ್ 1ರಂದು ದರ ಹೆಚ್ಚಳ ಜಾರಿಗೆ ಬರಲಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಕೆಳಗಿನ ಟೋಲ್ ಪ್ಲಾಜಾಗಳಲ್ಲಿ ದರ ಹೆಚ್ಚಳವಾಗಲಿದೆ:

ಕಣಿಮಿಣಿಕೆ ಮತ್ತು ಶೇಷಗಿರಿಹಳ್ಳಿ (ಬೆಂಗಳೂರು–ಮೈಸೂರು ಮಾರ್ಗ)
ಬಾಗೇಪಲ್ಲಿ (ಬೆಂಗಳೂರು–ಹೈದರಾಬಾದ್ ಮಾರ್ಗ)
ಸಾದಹಳ್ಳಿ (ಬೆಂಗಳೂರು ವಿಮಾನ ನಿಲ್ದಾಣ ರಸ್ತೆ)
ನಾಂಗ್ಲಿ (ಬೆಂಗಳೂರು–ತಿರುಪತಿ ಮಾರ್ಗ)
ಹುಲಿಕುಂಟೆ ಮತ್ತು ನಲ್ಲೂರು ದೇವನಹಳ್ಳಿ (ಸ್ಟಿಆರ್‌ಆರ್ ಮಾರ್ಗ)

ಟೋಲ್ ದರವನ್ನು ಹೋಲ್​ಸೇಲ್ ಪ್ರೈಸ್ ಇಂಡೆಕ್ಸ್ ಆಧಾರಿತವಾಗಿ ನಿಗದಿ ಮಾಡಲಾಗುತ್ತದೆ. ಉದಾಹರಣೆಗೆ 2.5 ರೂ. ಅಥವಾ ಅದಕ್ಕಿಂತ ಹೆಚ್ಚು ಏರಿಕೆಯಿದ್ದರೆ, ಅದನ್ನು 5 ರೂ.ಗೆ ರೌಂಡ್ ಆಫ್ ಮಾಡಲಾಗುತ್ತದೆ. ಈ ಪರಿಷ್ಕರಣೆ 2008ರ ರಾಷ್ಟ್ರೀಯ ಹೆದ್ದಾರಿ ಶುಲ್ಕ ನಿಯಮಾವಳಿಗಳ ಪ್ರಕಾರ ನಡೆಯುತ್ತಿದ್ದು, ಪ್ರತೀ ಹಣಕಾಸು ವರ್ಷದ ಆರಂಭದಲ್ಲಿ ದರ ಪರಿಷ್ಕರಣೆ ಸಾಮಾನ್ಯವಾಗಿದೆ.

ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ಈಗಾಗಲೇ ಟೋಲ್ ದರಗಳು ಹೆಚ್ಚಾಗಿದ್ದು, ಇದೀಗ ಮತ್ತಷ್ಟು ಏರಿಕೆಯಿಂದ ಪ್ರಯಾಣಿಕರಿಗೆ ಆರ್ಥಿಕವಾಗಿ ಹೊರೆಯಾಗಲಿದೆ. ಒಂದು ಕಡೆಗಿನ ಪ್ರಯಾಣಕ್ಕೆ 180 ರೂ. ಟೋಲ್ ಈಗಾಗಲೇ ಹೆಚ್ಚು ಇದೆ, ಮತ್ತೆ ಏರಿಕೆ ಆದರೆ ಕಷ್ಟವಾಗುತ್ತದೆ ಎಂದು ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಿಂದ ಕೇರಳಕ್ಕೆ ಹೋಗುವ ಪ್ರಯಾಣದ ವೆಚ್ಚ ಈಗಾಗಲೇ 2000–3000 ರೂ. ವರೆಗೆ ಇದೆ. ಟೋಲ್ ಹೆಚ್ಚಳದಿಂದ ಈ ವೆಚ್ಚ ಇನ್ನಷ್ಟು ಏರಲಿದೆ ಎಂದು ಪ್ರವಾಸಿ ವಾಹನಗಳ ಮಾಲೀಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular