ಹೈದರಾಬಾದ್: ತೆಲಂಗಾಣ ವಿಧಾನಸಭೆಯಿಂದ ಕೆಟಿಆರ್ ಸೇರಿದಂತೆ 22 ಬಿಆರ್‌ಎಸ್ ಶಾಸಕರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.
ತೆಲಂಗಾಣ ವಿಧಾನಸಭೆ ಕಲಾಪದ ವೇಳೆ ಘೋಷಣೆಗಳನ್ನು ಕೂಗುತ್ತಾ ಸದನದ ಬಾವಿಗೆ ಇಳಿದು ಪ್ರತಿಭಟನೆ ನಡೆಸುವ ಮೂಲಕ ಸದನದ ಕಲಾಪಕ್ಕೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ 22 ಬಿಆರ್‌ಎಸ್ ಶಾಸಕರನ್ನು ತೆಲಂಗಾಣ ವಿಧಾನಸಭೆಯಿಂದ ಉಳಿದ ಮಳೆಗಾಲದ ಅಧಿವೇಶನ ಮುಗಿಯುವವರೆಗೂ ಅಮಾನತುಗೊಳಿಸಲಾಗಿದೆ.
ಸಸ್ಪೆಂಡ್ ಆಗುತ್ತಿದ್ದಂತೆ ಸದನ ಸಭೆ ಸೇರಿದ ಬಿಆರ್‌ಎಸ್ ಶಾಸಕರು, ನಮಗೆ ನ್ಯಾಯ ಬೇಕು ಎಂದು ಘೋಷಣೆಗಳನ್ನು ಕೂಘಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಆರ್‌ಎಸ್ ಕಾರ್ಯಾಧ್ಯಕ್ಷ ಕೆ ಟಿ ರಾಮರಾವ್ ಅವರು ಎರಡು ದಿನಗಳ ಹಿಂದೆ ಪಕ್ಷದ ಮಹಿಳಾ ಶಾಸಕರ ವಿರುದ್ಧ ಪೊಲೀಸರ ಕ್ರಮ (ಪೊಲೀಸರು ವಿಧಾನಸಭೆಯ ಗೇಟ್‌ನಲ್ಲಿ ಬಿಆರ್‌ಎಸ್ ಶಾಸಕರನ್ನು ತಡೆದಾಗ) ಮತ್ತು ಬಿಆರ್‌ಎಸ್ ಮುಖ್ಯಸ್ಥ ಕೆ ಚಂದ್ರಶೇಖರ್ ರಾವ್ ಅವರ ಮರಣವನ್ನು ಬಯಸಿ ಆಡಳಿತ ಪಕ್ಷ ಕಾಂಗ್ರೆಸ್ ನ ಕೆಲ ಸದಸ್ಯರು ನೀಡಿದ್ದ ಹೇಳಿಕೆಗಳನ್ನು ಖಂಡಿಸಿ, ಚರ್ಚೆಗೆ ಅವಕಾಶ ಕೋರಿ ಕಲಾಪ ಮುಂದೂಡಿಕೆ ನಿರ್ಣಯ ಮಂಡಿಸಿದ್ದರು.
ಇಂದು ಸದನದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಬಿಆರ್ ಎಸ್ ಸದಸ್ಯರು, ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್, ಉಪಮುಖ್ಯಮಂತ್ರಿ ಮಲ್ಲು ಭಟ್ಟಿ ವಿಕ್ರಮಾರ್ಕ ಮತ್ತು ಶಾಸಕಾಂಗ ವ್ಯವಹಾರಗಳ ಸಚಿವ ಡಿ ಶ್ರೀಧರ್ ಬಾಬು ಅವರು ಪದೇ ಪದೇ ಮನವಿ ಮಾಡಿದರೂ ತಮ್ಮ ಸ್ಥಾನಗಳಿಗೆ ಮರಳಲು ನಿರಾಕರಿಸಿದರು.
ಚಂದ್ರಶೇಖರ್ ರಾವ್ ಅವರಿಗೆ ಆರೋಗ್ಯಕರ, ದೀರ್ಘಾಯುಷ್ಯ ಮತ್ತು ಸಾರ್ವಜನಿಕ ಸೇವೆಯಲ್ಲಿ ದೀರ್ಘ ವೃತ್ತಿಜೀವನವನ್ನು ಹಾರೈಸುವುದಾಗಿ ವಿಕ್ರಮಾರ್ಕ ಮತ್ತು ಇತರ ಕಾಂಗ್ರೆಸ್ ನಾಯಕರು ಹೇಳಿದರು. ಇದೇ ವೇಳೆ ಬಿಆರ್‌ಎಸ್ ಸದಸ್ಯರು ತಮ್ಮ ಬೇಡಿಕೆಗಳನ್ನು ಲಿಖಿತವಾಗಿ ತಮಗೆ ಸಲ್ಲಿಸಿದ್ದಾರೆಯೇ ಎಂಬುದನ್ನು ಪರಿಶೀಲಿಸುವುದಾಗಿ ಸ್ಪೀಕರ್ ಹೇಳಿದರು. ಆದಾಗ್ಯೂ ಬಿಆರ್ ಎಸ್ ದಸಯರ ಪ್ರತಿಭಟನೆ ಮುಂದುವರೆದ ಹಿನ್ನೆಲೆಯಲ್ಲಿ ಬಿಆರ್ ಎಸ್ ಸದಸ್ಯರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಯಿತು.
ಸದಸ್ಯರು ತಮ್ಮ ಸ್ಥಾನಗಳಿಂದಲೇ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಬೇಕು ಮತ್ತು ಬೆದರಿಕೆ ಮತ್ತು ಆಕ್ರಮಣಕಾರಿ ರೀತಿಯಲ್ಲಿ ವರ್ತಿಸಬಾರದು ಎಂದು ಸ್ಪೀಕರ್ ತಿಳಿಸಿದ್ದಾರೆ.
ಸೆಪ್ಟೆಂಬರ್ 8 ರಂದು ಬಿಆರ್‌ಎಸ್ ಎಂಎಲ್‌ಸಿ ಟಾಟಾ ಮಧುಸೂಧನ್ ಅವರು ಸ್ಪೀಕರ್ ಪ್ರಸಾದ್ ಕುಮಾರ್ ವಿರುದ್ಧ ನಿಂದನೀಯ ಹೇಳಿಕೆಗಳನ್ನು ನೀಡಿರುವುದನ್ನು ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಮತ್ತು ದಲಿತ ಕಾರ್ಯಕರ್ತರು ಪ್ರತಿಭಟನೆ ನಡೆಸಿದ ಎರ್ರಾವೆಲ್ಲಿಯಲ್ಲಿರುವ ಕೆಸಿಆರ್ ಅವರ ಫಾರ್ಮ್‌ಹೌಸ್ ಬಳಿ ಬಿಆರ್‌ಎಸ್ ನಾಯಕರು ಅರಿಶಿನ ನೀರು ಸಿಂಪಡಿಸುವ ಮೂಲಕ ಶುದ್ಧೀಕರಣ ನಡೆಸಿದ್ದಾರೆ ಎಂಬ ವರದಿಗಳನ್ನು ಉಲ್ಲೇಖಿಸಿ, ಬಿಆರ್‌ಎಸ್ ವಿರುದ್ಧ ಕಾಂಗ್ರೆಸ್ ನಾಯಕರು ಕಿಡಿಕಾರಿದ್ದರು.
ಇನ್ನು ಮುಂದೆ ಯಾವುದೇ ಅವಮಾನ ಸಹಿಸಲು ನಾವು ಇಲ್ಲಿಲ್ಲ. ಇದು ಸ್ವಾಭಿಮಾನದ ಪ್ರಶ್ನೆ. ಏನೇ ಆಗಲಿ, ಸದನ ಮತ್ತು ಸಮಾಜದ ವ್ಯಕ್ತಿಗಳ ಸ್ವಾಭಿಮಾನಕ್ಕಾಗಿ ನಿಲ್ಲೋಣ. ಇದಲ್ಲದೆ, ಸ್ಪೀಕರ್ ಆಗಿರುವ ನಿಮಗೆ ನಾವು ಅವಮಾನವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿಕೆ ನೀಡಿದರು. ಶ್ರೀಧರ್ ಬಾಬು ಅವರು ಪ್ರಸ್ತಾವನೆಯನ್ನು ಮಂಡಿಸಿದ ನಂತರ ಸ್ಪೀಕರ್ ಬಿಆರ್‌ಎಸ್ ಸದಸ್ಯರ ಅಮಾನತು ಘೋಷಿಸಿದರು.
ಬಿಆರ್‌ಎಸ್ ಶಾಸಕರಾದ ಕೆ ಟಿ ರಾಮರಾವ್, ಅನಿಲ್ ಜಾಧವ್, ಟಿ ಹರೀಶ್ ರಾವ್, ಜಿ ಜಗದೀಶ್ ರೆಡ್ಡಿ, ಗಂಗೂಲ ಕಮಲಾಕರ್, ಕೌಶಿಕ್ ರೆಡ್ಡಿ, ಮಾಧವರಂ ಕೃಷ್ಣರಾವ್, ಕೋವಾ ಲಕ್ಷ್ಮಿ, ಕೆ ಮಾಣಿಕ್ ರಾವ್, ಚಿಂತಾ ಪ್ರಭಾಕರ್, ಕೋತ ಪ್ರಭಾಕರ್ ರೆಡ್ಡಿ, ವೇಮುಲ ಪ್ರಶಾಂತ್ ರೆಡ್ಡಿ, ಮರ್ರಿ ರಾಜಶೇಖರ್ ರೆಡ್ಡಿ, ಪಲ್ಲ ಶ್ರೀನಿವಾಸ್ ರೆಡ್ಡಿ, ಪಲ್ಲ ಶ್ರೀನಿವಾಸ್ ರೆಡ್ಡಿ, ಪಲ್ಲ ಶ್ರೀನಿವಾಸ್ ರೆಡ್ಡಿ ಯಾದವ್, ಡಿ ಸುಧೀರ್ ರೆಡ್ಡಿ, ವಿ ಸುನಿತಾ ಲಕ್ಷ್ಮರೆಡ್ಡಿ, ಕಾಳೇರು ವೆಂಕಟೇಶ್, ವಿಜಯುಡು ಮತ್ತು ಕೆ ಪಿ ವಿವೇಕಾನಂದ ಸೇರಿದಂತೆ 22 ಶಾಸಕರು ಅಮಾನತುಗೊಂಡವರು. ಅಮಾನತುಗೊಳ್ಳುತ್ತಿದ್ದಂತೆ ಬಿಆರ್ ಎಸ್ ಶಾಸಕರು ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ ನಡೆಸಿದ್ದಾರೆ.

