ಕೊಪ್ಪಳ: ಗಂಗಾವತಿಯ ಹೊಸಳ್ಳಿ ರಸ್ತೆಯ ಹಳೆಯ ಸೇಲ್ಸ್ ಟ್ಯಾಕ್ಸ್ ಕಚೇರಿಯ ಎದುರುಗಡೆ ಇರುವ ಎಲ್&ಟಿ ಫೈನಾನ್ಸ್ ಅವರಿಂದ ಅಕ್ಟೋಬರ್ 28 ರಂದು ಗಂಗಾವತಿಯಲ್ಲಿ ವಾಕ್ ಇನ್ ಇಂಟರ್ವ್ಯೂವ್ ಅನ್ನು ಆಯೋಜಿಸಲಾಗಿದೆ.
ಪಿಯುಸಿ ಹಾಗೂ ಯಾವುದೇ ಪದವಿ ಪಡೆದ 18 ರಿಂದ 30 ವರ್ಷದೊಳಗಿನ ಅರ್ಹ ನಿರುದ್ಯೋಗಿ ಯುವಕ, ಯುವತಿಯರು ಈ ವಾಕ್ ಇನ್ ಇಂಟರ್ವ್ಯೂವ್ ನಲ್ಲಿ ಭಾಗವಹಿಸಬಹುದು. ಅಭ್ಯರ್ಥಿಗಳು ದೃಢೀಕರಿಸಲಾದ ತಮ್ಮ ವಿದ್ಯಾರ್ಹತೆಯ ಎಲ್ಲ ಪ್ರಮಾಣ ಪತ್ರಗಳ 3 ಪ್ರತಿಗಳು, ಆಧಾರ್ ಕಾರ್ಡ್, ಬಯೋಡೆಟಾ ಹಾಗೂ ಪಾಸ್ಪೋರ್ಟ್ ಅಳತೆಯ 2 ಭಾವಚಿತ್ರಗಳೊಂದಿಗೆ ವಾಕ್ ಇನ್ ಇಂಟರ್ ವ್ಯೂವ್ ನಲ್ಲಿ ಭಾಗವಹಿಸಿ ಉದ್ಯೋಗದ ನೆರವನ್ನು ಪಡೆಯಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಜಿಲ್ಲಾ ಆಡಳಿತ ಭವನ, ಮೊದಲನೇ ಮಹಡಿ, ಕೊಪ್ಪಳ ಇವರನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಉದ್ಯೋಗಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಬಕಾರಿ ಇಲಾಖೆಯಿಂದ ದಾಳಿ: ರೂ.3.15 ಲಕ್ಷ ಮೌಲ್ಯದ ಓಪಿಯಮ್ ಪೌಡರ್ ಜಪ್ತಿ
ಕೊಪ್ಪಳ: ಕೊಪ್ಪಳ ಅಬಕಾರಿ ಇಲಾಖೆಯಿಂದ ದಾಳಿ ವಿವಿಧೆಡೆ ದಾಳಿ ನಡೆಸಿದ್ದು, ರೂ.3.15 ಲಕ್ಷ ಮೌಲ್ಯದ ಓಪಿಯಮ್ ಪೌಡರ್(ಮಾದಕ ವಸ್ತು) ಜಪ್ತಿ ಮಾಡಲಾಗಿದೆ.
ಅಬಕಾರಿ ಜಂಟಿ ಆಯುಕ್ತರು(ಜಾರಿ& ತನಿಖೆ) ಹೊಸಪೇಟೆ ವಿಭಾಗ, ಹೊಸಪೇಟೆ ರವರು ಮತ್ತು ಅಬಕಾರಿ ಅಪರ ಆಯುಕ್ತರು (ಜಾರಿ ಮತ್ತು ಅಪರಾಧ) ಕೇಂದ್ರಸ್ಥಾನ ಬೆಳಗಾವಿ ರವರ ನಿರ್ದೇಶನದ ಮೇರೆಗೆ ಹಾಗೂ ಅಬಕಾರಿ ಉಪ ಅಧೀಕ್ಷಕರು, ಉಪ ವಿಭಾಗ ಕೊಪ್ಪಳ ಇವರ ಸೂಚನೆಯಂತೆ ಅಕ್ಟೋಬರ್ 22 ರಂದು ಮಧ್ಯಾಹ್ನ 01:20 ಗಂಟೆಯ ಸಮಯದಲ್ಲಿ ಕುಷ್ಟಗಿ ತಾಲೂಕಿನ ರಾಷ್ಟ್ರೀಯ ಹೆದ್ದಾರಿ-50 ರ ವಣಗೇರಿ ಟೋಲ್ ಸಮೀಪದ ನ್ಯೂ ಮಹದೇವ ರಾಜಸ್ಥಾನಿ ಹೋಟೆಲ್ ಮೇಲೆ ಸದರಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ/ಸ್ಥಳ ಪರಿಶೀಲನೆಗಾಗಿ ನೀಲಮ್ಮ ಗಲಗಲಿ, ಅಬಕಾರಿ ಉಪ ನಿರೀಕ್ಷಕರು-2 ರವರು ಅಬಕಾರಿ ಸಿಬ್ಬಂದಿಗಳಾದ ಮೋಹನ ಕುಮಾರ, ಅಬಕಾರಿ ಮುಖ್ಯ ಪೇದೆ ಹಾಗೂ ಕನಕಪ್ಪ ಬಾಲಪ್ಪನವರ್ ಅಬಕಾರಿ ಪೇದೆ ರವರೊಂದಿಗೆ ದಾಳಿ ನಡೆಸಲಾಯಿತು.
ದಾಳಿ ಸಂದರ್ಭ ಒಂದು ತಗಡಿನ ಮೇಲ್ಛಾವಣಿ ಹೊಂದಿದ್ದ ಕಟ್ಟಿಗೆ ಶೇಖರಣಾ ಕೊಠಡಿಯಲ್ಲಿ ಎರಡು ಪ್ಲಾಸ್ಟಿಕ್ ಬಕೆಟ್ಗಳಿದ್ದು ಅದರಲ್ಲಿ ಕಪ್ಪು ಬಣ್ಣದ ಬಕೆಟ್ ಮುಚ್ಚಳ ತೆಗೆದಿದ್ದು ಅದರಲ್ಲಿ ಬಿಳಿ ಬಣ್ಣದ ಪ್ಲಾಸ್ಟಿಕ್ ಚೀಲದ ಗಂಟೊಂದಿದ್ದು ಅದನ್ನು ಬಿಚ್ಚಿ ನೋಡಲಾಗಿ ಓಪೀಯಮ್ ನಂತಹ ಪುಡಿ ಪದಾರ್ಥವಿರುವುದು ಕಂಡು ಬಂದಿದೆ. ನಂತರ ಇನ್ನೊಂದು ಬಿಳಿ ಬಣ್ಣದ ಪ್ಲಾಸ್ಟಿಕ್ ಬಕೆಟ್ ಇದ್ದು, ಅದರ ಮುಚ್ಚಳ ಶೀಲ್ಡಿಂದ ಕೂಡಿದ್ದು ಇರುತ್ತದೆ.
ಮುಂದುವರೆದು ಅಬಕಾರಿ ಉಪ ನಿರೀಕ್ಷಕರ ರೆಡ್ ಮಿ-14 ಪ್ರೋ ಪ್ಲಸ್ ಮೊಬೈಲ್ ನಲ್ಲಿ ಸಿಬ್ಬಂದಿಯಾದ ಮೋಹನ ಕುಮಾರ ಅಬಕಾರಿ ಮುಖ್ಯ ಪೇದೆ ರವರ ಸಹಾಯದಿಂದ ಫೋಟೋ/ವೀಡಿಯೋ ಚಿತ್ರೀಕರಣದೊಂದಿಗೆ ಶೋಧನೆಯನ್ನು ಪ್ರಾರಂಭಿಸಿ ಮುದ್ದೇಮಾಲನ್ನು ತೂಕ ಮಾಡಿ ನೋಡಲಾಗಿ 1) ಮೈಲ್ ಮ್ಯಾಕ್ಸ್ ಇಂಜಿನ್ ಆಯಿಲ್ ಕಪ್ಪು ಬಣ್ಣದ ಬಕೆಟ್ ಸಹಿತ ತೂಗಿ ನೋಡಲಾಗಿ 3.990 ಕೆ.ಜಿ ತೂಕ ಇದ್ದು ಬಕೆಟ್ ತೆಗೆದು ಕೇವಲ ಬಿಳಿ ಬಣ್ಣದ ಪ್ಲಾಸ್ಟಿಕ್ ಚೀಲದ ಗಂಟನ್ನು ತೂಗಿ ನೋಡಲಾಗಿ 2.990 ಕೆ.ಜಿ ತೂಕ ಇರುವುದು ಅದರ ಮೌಲ್ಯ ರೂ.1,57,500/- ಆಗಿದ್ದು ಕಂಡು ಬಂದಿರುತ್ತದೆ. ನಂತರ 2) ತಿರುಮಲ ಕರ್ಡ್ ಹೆಸರಿನ ಬಿಳಿ ಬಣ್ಣದ ಬಕೆಟ್ ಸಹಿತ ತೂಗಿ ನೋಡಲಾಗಿ 3.480 ಕೆ.ಜಿ ತೂಕ ಇದ್ದು ಬಕೆಟ್ ತೆಗೆದು ಕೇವಲ ಬಿಳಿ ಬಣ್ಣದ ಪ್ಲಾಸ್ಟಿಕ್ ಚೀಲದ ಗಂಟನ್ನು ತೂಗಿ ನೋಡಲಾಗಿ 2.990 ಕೆ.ಜಿ ತೂಕ ಇದ್ದು ಅದರ ಮೌಲ್ಯ ರೂ.1,57,500/- ಕಂಡು ಬಂದಿರುತ್ತದೆ. (ಈ ಎರಡು ಜಪ್ತಿ ಪಡಿಸಿದ ತೂಕ ಒಟ್ಟು 5.980 ಕೆ.ಜಿ ಓಪೀಯಮ್ ಪೌಡರ್ ಅದರ ಒಟ್ಟು ಮೌಲ್ಯ ರೂ.3,15,000/- ಇದ್ದು) ನಂತರ ಮಾನ್ಯ ನ್ಯಾಯಾಧೀಶರ ಮುಂದೆ ಇನ್ವೆಂಟರಿ ಮಾಡಿಸಲು ಇಲಾಖಾ ಮುದ್ರೆ ಸಂಖ್ಯೆ:510 ರಿಂದ ಶೀಲ್ ಮಾಡಲಾಯಿತು ಎಂದು ಕೊಪ್ಪಳ ಅಬಕಾರಿ ಉಪ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

