ಬೆಂಗಳೂರು : ಸಂಘದ ಸಾಲ ಕಟ್ಟುವ ವಿಚಾರಕ್ಕೆ ಪತಿ ಹಾಗೂ ಪತ್ನಿ ನಡುವೆ ಜಗಳ ನಡೆದು ಮನನೊಂದು ಪತ್ನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲದಲ್ಲಿ ನಡೆದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲದ ಬ್ಯಾಡರಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಪತಿ ಚಂದ್ರು ಹಾಗೂ ಪತ್ನಿ ಸುಮಾ ನಡುವೆ ನಡೆದ ಗಲಾಟೆ ಕೊನೆಗೆ ಕೊಲೆಯಲ್ಲಿ ಅಂತ್ಯವಾಗಿದೆ.
ಏನಿದು ಘಟನೆ
ಸುಮಾ ಅವರು 2000 ರೂ ಹಣವನ್ನು ಸ್ವಸಹಾಯ ಸಂಘಕ್ಕೆ ಕಟ್ಟಲೆಂದು ತೆಗೆದಿಟ್ಟಿದ್ದರು. ಆದರೆ ಪತಿ ಚಂದ್ರು ಯಾವುದೋ ಸಬೂಬು ಹೇಳಿ 2000 ರೂ ಹಣ ಖರ್ಚು ಮಾಡಿದ್ದರು. ಇಷ್ಟಕ್ಕೆ ಗಂಡಹೆಂಡತಿ ನಡುವೆ ಜಗಳ ನಡೆದಿದೆ. ಪತಿ ಚಂದ್ರು ಹೊರಗಡೆ ಹೋದ ಸಂದರ್ಭದಲ್ಲಿ 2 ಮಕ್ಕಳ ತಾಯಿ ಸುಮಾ (30) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತಿ ಊಟಕ್ಕೆಂದು ಮನೆಗೆ ಬಂದಾಗ ಪತ್ನಿ ಸುಮಾ ನೇಣಿನ ಕುಣಿಕೆಯಲ್ಲಿ ನೇತಾಡುತ್ತಿದ್ದರು. ಈ ಸಂಬಂಧ ನೆಲಮಂಗಲ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

