HomeLatest NewsBIG NEWS: ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತರ ಹೆಸರಲ್ಲಿ ವಾಟ್ಸಪ್ ಸಂದೇಶ: ಸೈಬರ್ ವಂಚಕರಿಂದ 50...

BIG NEWS: ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತರ ಹೆಸರಲ್ಲಿ ವಾಟ್ಸಪ್ ಸಂದೇಶ: ಸೈಬರ್ ವಂಚಕರಿಂದ 50 ಸಾವಿರ ಹಣಕ್ಕೆ ಬೇಡಿಕೆ

ಬೆಳಗಾವಿ: ಸೈಬರ್ ವಂಚನೆ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಬೆಂಗಳೂರಿನಲ್ಲಿ ಐಪಿಎಸ್ ಅಧಿಕಾರಿ ಅಕ್ಷಯ್ ಅವರ ಹೆಸರಿನಲ್ಲಿ ನಕಲಿ ವಾಟ್ಸಪ್ ಸಂದೇಶ ಕಳುಹಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಘಟನೆ ನಡೆದಿತ್ತು. ಇದೀಗ ಅಂತದ್ದೇ ಘಟನೆ ಗಡಿ ಜಿಲ್ಲೆ ಬೆಳಗಾವಿಯಲ್ಲಿಯೂ ನಡೆದಿದೆ. ಸೈಬರ್ ವಂಚಕರು ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತರ ಹೆಸರಲ್ಲಿ ನಕಲಿ ವಾಟ್ಸಪ್ ನಂಬರ್ ನಿಂದ ಸಂದೇಶ ಕಳುಹಿಸಿ ಹಣಕ್ಕೆ ಬೇಡಿಕೆ ಇಟ್ಟಿರುವ ಘಟನೆ ಬೆಳಕಿಗೆ ಬಂದಿದೆ.

ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತ ಕಾರ್ತಿಕ್ ಅವರ ಫೋಟೊ ಡಿಪಿಯಿರುವ ವಾಟ್ಸಪ್ ನಂಬರ್ ನಿಂದ ಸಂದೇಶಗಳನ್ನು ಕಳುಹಿಸಿರುವ ಖದೀಮರು, ನಾನು ಮೀಟಿಂಗ್ ನಲ್ಲಿದ್ದೇನೆ. ನಿಗದಿತ ಸಂಖ್ಯೆಗೆ ತುರ್ತಾಗಿ 50 ಸಾವಿರ ಹಾಕಿ ಸ್ಕ್ರೀನ್ ಶಾಟ್ ಕಳುಹಿಸಿ. ಮೀಟಿಂಗ್ ಬಳಿಕ ಹಣ ಪಾವತಿಸುವುದಾಗಿ ಹೇಳಿದ್ದಾರೆ. ಇದೇ ರೀತಿಯ ಸಂದೇಶ ಬೆಳಗಾವಿ ಉಪ ಆಯುಕ್ತ ಉದಯ್ ಕುಮಾರ್ ತಳವಾರ್ ಅವರಿಗೆ ಬಂದಿದೆ. ಅನುಮಾನಗೊಂಡ ಉಪ ಆಯುಕ್ತರು ಮೆಸೇಜ್ ಬಂದ ವಾಟ್ಸಪ್ ನಂಬರ್ ಗೆ ಕರೆ ಮಾಡಿದ್ದಾರೆ. ಆದರೆ ಕರೆ ಸ್ವೀಕರಿಸಿಲ್ಲ. ನಾನು ಸಭೆಯಲ್ಲಿದ್ದೇನೆ ಎಂದು ವಂಚಕನಿಂದ ಮತ್ತೆ ಮೆಸೇಜ್ ಬಂದಿದೆ. ಹಣ ಹಾಕಿದ ಬಳಿಕ ಸ್ಕ್ರೀನ್ ಶಾಟ್ ಕಳಿಸಿ ಎಂದು ಸಂದೇಶ ಬಂದಿದೆ.

ಇದರಿಂದ ಮತ್ತಷ್ಟು ಅನುಮಾನಗೊಂಡ ಉಪ ಆಯುಕ್ತ ಉದಯ್ ಕುಮಾರ್, ಆಯುಕ್ತರ ಪರ್ಸನಲ್ ನಂಬರ್ ಗೆ ಕರೆ ಮಾಡಿ ಈ ರೀತಿ ಸಂದೇಶ ಬಂದಿದೆ ಎಂದು ಹೇಳಿದ್ದಾರೆ. ವಿಷಯ ಕೇಳಿ ಶಾಕ್ ಆದ ಆಯುಕ್ತರು ತಾನು ಅಂತಹ ಯಾವುದೇ ಸಂದೇಶ ಕಳುಹಿಸಿಲ್ಲ ಎಂದು ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸೈಬರ್ ವಂಚಕರ ಸಂದೇಶದ ಬಗ್ಗೆ ಉಪ ಆಯುಕ್ತ ಉದಯ ಕುಮಾರ್ ಬೆಳಗಾವಿ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular