HomeKarnatakaBREAKING NEWS: ಕುಡಿಯುವ ನೀರಿಗೆ ಕ್ರಿಮಿನಾಶಕ ಬೆರೆಸಿ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಹತ್ಯೆಗೈದ ಪತಿ

BREAKING NEWS: ಕುಡಿಯುವ ನೀರಿಗೆ ಕ್ರಿಮಿನಾಶಕ ಬೆರೆಸಿ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಹತ್ಯೆಗೈದ ಪತಿ

ಮಂಡ್ಯ: ಕುಡಿಯುವ ನೀರಿಗೆ ವಿಷ ಬೆರಸಿ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಹತ್ಯೆಗೈದ ಪತಿ ಮಹಾಶಯ ತಾನೂ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ನಡೆದಿದೆ.

ಕೀರ್ತನಾ (23) ಮಕ್ಕಳಾದ ಜಯಸಿಂಹ (4) ಹಾಗೂ ಒಂದು ವರ್ಷದ ರಿಷಿಕಾ ಮೃತರು. ಕುಡಿಯುವ ನೀರಿಗೆ ಕ್ರಿಮಿನಾಷಕ ಹಾಕಿದ್ದ ಆರೋಪಿ ನರಸಿಂಹ, ಹೆಂಡತಿ ಹಾಗೂ ಮಕ್ಕಳಿಗೆ ಅದೇ ನೀರನ್ನು ಕುಡಿಸಿದ್ದಾನೆ. ಬಳಿಕ ತಾನೂ ಅದೇ ನೀರು ಸೇವಿಸಿದ್ದಾನೆ.

ತೀವ್ರ ಅಸ್ವಸ್ಥಗೊಂಡ ಪತ್ನಿ ಹಾಗೂ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ. ಅಸ್ವಸ್ಥಗೊಂಡಿರುವ ನರಸಿಂಹನನ್ನು ನಾಗಮಂಗಲ ಆಸ್ಪತ್ರೆಗೆ ದಾಖಲಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

5 ವರ್ಷಗಳ ಹಿಂದೆ ನರಸಿಂಹ ಹಾಗೂ ಕೀರ್ತನಾ ವಿವಾಹವಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದರು. ಆರೋಪಿ ನರಸಿಂಹ ಕಟಿಂಗ್ ಶಾಪ್ ಇಟ್ಟುಕೊಂಡಿದ್ದ. ಪತಿ ನರಸಿಂಹ ಅಕ್ರಮ ಸಂಬಂಧ ಹೊಂದಿದ್ದಾನೆ ಎಂದು ಮನೆಯಲ್ಲಿ ಪತ್ನಿ ಸದಾ ಜಗಳವಾಡುತ್ತಿದ್ದಳು ಎನ್ನಲಾಗಿದೆ. ಇದೇ ಕಾರಣಕ್ಕೆ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಕೊಂದ ಪತಿ, ತಾನೂ ಅತ್ಮಹತ್ಯೆಗೆ ಯತ್ನಿಸಿದ್ದಾನೆ.

ನಾಗಮಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

For Latest News Updates, Join Our Whatsapp Community🚩
RELATED ARTICLES

Most Popular