HomeLifestyleಮನುಷ್ಯನ ಮೆದುಳಿನ ನೆನಪಿನ ಶಕ್ತಿ ಎಷ್ಟು ಜಿಬಿ (GB) ಗೊತ್ತಾ?ಇಡೀ ಜಗತ್ತಿನ ಸೂಪರ್ ಕಂಪ್ಯೂಟರ್‌ಗಳೂ ಇದರ...

ಮನುಷ್ಯನ ಮೆದುಳಿನ ನೆನಪಿನ ಶಕ್ತಿ ಎಷ್ಟು ಜಿಬಿ (GB) ಗೊತ್ತಾ?ಇಡೀ ಜಗತ್ತಿನ ಸೂಪರ್ ಕಂಪ್ಯೂಟರ್‌ಗಳೂ ಇದರ ಮುಂದೆ ವೇಸ್ಟ್ ಯಾಕೆ ಗೊತ್ತಾ?

ಬೆಂಗಳೂರು: ಮನುಷ್ಯನ ಮೆದುಳು ಕೇವಲ ಒಂದು ಅಂಗವಲ್ಲ, ಅದೊಂದು ಅದ್ಭುತ ಪವರ್ ಹೌಸ್ ಏಕೆಂದರೆ ಇದು ಇಡೀ ನಮ್ಮ ದೇಹದ ಆಜ್ಞೆಯ ಕೇಂದ್ರವಾಗಿರುತ್ತದೆ. ದೈನಂದಿನ ಜೀವನದಲ್ಲಿ ನಾವು ಮಾಡುವ ಸಣ್ಣ ಪುಟ್ಟ ಕೆಲಸಗಳಿಂದ ಹಿಡಿದು ಅನೇಕ ವಿಷಯಗಳನ್ನು ದೀರ್ಘಕಾಲದವರೆಗೂ ನೆನಪಿನಲ್ಲಿಟ್ಟುಕೊಳ್ಳುವ ತನಕ ಮೆದುಳಿನ ಪಾತ್ರ ತುಂಬಾನೇ ಮುಖ್ಯ. ನೆನಪು (Memory) ಉತ್ತಮ ನಿರ್ಧಾರ ತೆಗೆದುಕೊಳ್ಳುವಿಕೆ ಭಾವನೆಗಳು ಮತ್ತು ದೇಹದ ಚಲನೆಯವರೆಗೆ ಎಲ್ಲದಕ್ಕೂ ಮೆದುಳೇ ಪ್ರಧಾನ.

ಮಾನವನ ಮೆದುಳನ್ನು ಅತ್ಯಂತ ಶಕ್ತಿಶಾಲಿ ಕಂಪ್ಯೂಟರ್ ಎಂದು ಕರೆಯಲಾಗುತ್ತದೆ. ಇದರ ಸಾಮರ್ಥ್ಯವು ವಿಶ್ವದ ಅತ್ಯಂತ ವೇಗದ ಸೂಪರ್‌ಕಂಪ್ಯೂಟರ್‌ಗಳಿಗಿಂತಲೂ ಬಹಳ ಶ್ರೇಷ್ಠ ಎಂದು ಪರಿಗಣಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಮಾನವನ ಮೆದುಳು ಎಷ್ಟು ಜಿಬಿ (GB) ಸಾಮರ್ಥ್ಯ ಹೊಂದಿದೆ ಎಂಬ ಚರ್ಚೆ ಜೋರಾಗಿದ್ದು, ವಿಜ್ಞಾನಿಗಳು ಇದರ ಅಸಲಿ ಸೀಕ್ರೆಟ್ ಬಿಚ್ಚಿಟ್ಟಿದ್ದಾರೆ.

2.5 ಪೆಟಾಬೈಟ್ ಅಂದ್ರೆ ಎಷ್ಟು ಜಿಬಿ ಸಂಗ್ರಹ ಸಾಮರ್ಥ್ಯ?

ವಿಜ್ಞಾನಿಗಳ ಅಧ್ಯಯನಗಳ ಪ್ರಕಾರ, ಮನುಷ್ಯರ ಮೆದುಳು ಸರಿ ಸುಮಾರು 2.5 ಪೆಟಾಬೈಟ್ ಅಂದರೆ 25 ಲಕ್ಷ ಗಿಗಾಬೈಟ್ (2.5 Million GB) ಡಿಜಿಟಲ್ ಮೆಮೊರಿಯನ್ನು ಸಂಗ್ರಹಿಸುವ ಸಾಮರ್ಥ್ಯ ಹೊಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇದನ್ನು ಡಿಜಿಟಲ್ ಜಗತ್ತಿಗೆ ಹೋಲಿಸಿದರೆ ಹೀಗಿದೆ:

3 ಮಿಲಿಯನ್ ಗಂಟೆಗಳ ವಿಡಿಯೋ: ಈ ಸಾಮರ್ಥ್ಯವು ಸರಿಸುಮಾರು 30 ಲಕ್ಷ (3 ಮಿಲಿಯನ್) ಗಂಟೆಗಳ ಹೆಚ್​ಡಿ ವಿಡಿಯೋ ಸಂಗ್ರಹಕ್ಕೆ ಸಮಾನವಾಗಿದೆ.

340 ವರ್ಷಗಳ ಪ್ಲೇಬ್ಯಾಕ್: ನೀವು ನಿರಂತರವಾಗಿ ವಿಡಿಯೋ ಪ್ಲೇ ಮಾಡಿದರೆ, 340 ವರ್ಷಗಳಿಗೂ ಹೆಚ್ಚು ಕಾಲ ಯಾವುದೇ ಅಡೆತಡೆಯಿಲ್ಲದೆ ವಿಡಿಯೋ ನೋಡಬಹುದು.

ಕೋಟಿ ಫೈಲ್‌ಗಳಿಗೆ ಸಮ: 1 ಪೆಟಾಬೈಟ್ ಎಂದರೆ ಪಠ್ಯ ದಾಖಲೆಗಳಿಂದ ತುಂಬಿದ ಸುಮಾರು 2 ಕೋಟಿ ಫೈಲಿಂಗ್ ಕ್ಯಾಬಿನೆಟ್‌ಗಳು ಅಥವಾ 13.3 ವರ್ಷಗಳ ಕಾಲ ನಿರಂತರವಾಗಿ ಓಡುವ HD-TV ವಿಡಿಯೋಗೆ ಸಮಾನ

ಡೇಟಾ ಸೆಂಟರ್‌ಗಳಿಗಿಂತ ದೊಡ್ಡದು: ಇಂಟರ್ನೆಟ್ ದೈತ್ಯ ಯಾಹೂ (Yahoo) ತನ್ನ ಕೋಟ್ಯಂತರ ಗ್ರಾಹಕರ ನಡವಳಿಕೆ ತಿಳಿಯಲು ಬಳಕೆಗೆ ತಂದಿರುವ ಬೃಹತ್ 2.0 ಪೆಟಾಬೈಟ್ ಡೇಟಾ ಸೆಂಟರ್ ಕೂಡ ಮನುಷ್ಯನ ಒಂದು ಮೆದುಳಿನ ಸಾಮರ್ಥ್ಯಕ್ಕಿಂತ ಶೇಕಡಾ 20 ರಷ್ಟು ಚಿಕ್ಕದಾಗಿದೆ

ಕೇವಲ 20 ವ್ಯಾಟ್ಸ್ ಪವರ್ ಒಂದು ಸಣ್ಣ ಬಲ್ಬ್‌ನಷ್ಟೇ ವಿದ್ಯುತ್

ಮೆದುಳಿನ ಈ ಗಮನಾರ್ಹ ಕಾರ್ಯಕ್ಷಮತೆಯ ಹೊರತಾಗಿ, ಮತ್ತೊಂದು ಅಚ್ಚರಿಯ ವಿಷಯವೆಂದರೆ ನಮ್ಮ ಮೆದುಳು ಕಾರ್ಯನಿರ್ವಹಿಸಲು ಕೇವಲ 20 ವ್ಯಾಟ್ಗಳಷ್ಟು ಶಕ್ತಿ (Power) ಸಾಕು. 20 ವ್ಯಾಟ್ ಅಂದರೆ ಕೇವಲ ಒಂದು ಸಣ್ಣ ಜೀರೋ ಬಲ್ಬ್‌ಗೆ ಸಮಾನ

ಮತ್ತೊಂದೆಡೆ, ಸೂಪರ್‌ಕಂಪ್ಯೂಟರ್‌ಗಳು ಕಾರ್ಯನಿರ್ವಹಿಸಲು ಮೆಗಾವ್ಯಾಟ್‌ಗಳಷ್ಟು ಭಾರಿ ಪವರ್ ಅಗತ್ಯವಿರುತ್ತದೆ. ಸೂಪರ್‌ಕಂಪ್ಯೂಟರ್‌ಗಳು ನಾವು ನೀಡಿದ ಡೇಟಾ ಮತ್ತು ಕಮಾಂಡ್‌ಗಳ ಆಧಾರದ ಮೇಲೆ ಮಾತ್ರ ಕೆಲಸ ಮಾಡುತ್ತವೆ. ಆದರೆ ನಮ್ಮ ಮೆದುಳು ಯಾವುದೇ ಕಮಾಂಡ್ ಇಲ್ಲದೆ ಸ್ವಯಂಚಾಲಿತವಾಗಿ ಉಸಿರಾಟ, ಹೃದಯ ಬಡಿತ, ದೃಷ್ಟಿ ಮತ್ತು ಆಲೋಚನೆಗಳನ್ನು ಏಕಕಾಲದಲ್ಲಿ ನಿಯಂತ್ರಿಸುತ್ತದೆ.

86 ಶತಕೋಟಿ ನರಕೋಶಗಳ ಜಾಲ

ನಮ್ಮ ಮೆದುಳಿನಲ್ಲಿ ಸರಿಸುಮಾರು 86 ಶತಕೋಟಿ (86 Billion) ನರಕೋಶಗಳು (Neurons) ಇವೆ. ಪ್ರತಿಯೊಂದು ನರಕೋಶವು ಸಿನಾಪ್ಸಸ್ (Synapses) ಎಂದು ಕರೆಯಲ್ಪಡುವ ಸಾವಿರಾರು ಸಂಪರ್ಕಗಳನ್ನು ರೂಪಿಸುತ್ತದೆ. ಮೆದುಳಿನ ಸೆರೆಬ್ರಲ್ ಕಾರ್ಟೆಕ್ಸ್ ಒಂದರಲ್ಲೇ 125 ಟ್ರಿಲಿಯನ್ ಸಿನಾಪ್ಸ್‌ಗಳಿದ್ದು, ಪ್ರತಿ ಸಿನಾಪ್ಸ್ 4.7 ಬಿಟ್ಸ್ ಮಾಹಿತಿಯನ್ನು ಸಂಗ್ರಹಿಸಬಲ್ಲದು.

ನಾವು ಏನನ್ನಾದರೂ ಯೋಚನೆ ಮಾಡುವಾಗ, ಹೊಸದನ್ನು ಕಲಿಯುವಾಗ ಮತ್ತು ಹೊಸ ಅನುಭವಗಳನ್ನು ಪಡೆಯುವಾಗ ನಮ್ಮ ಬ್ರೈನ್ ನಿರಂತರವಾಗಿ ಹೊಸ ನರ ಸಂಪರ್ಕಗಳನ್ನು ಕ್ರಿಯೇಟ್ ಮಾಡುತ್ತದೆ. ಟೆಕ್ಸಾಸ್ ವಿಶ್ವವಿದ್ಯಾನಿಲಯದ ಸಂಶೋಧನೆಯ ಪ್ರಕಾರ, ಇಂತಹ ಸಂವೇದನಾ-ಸಮೃದ್ಧ ಅನುಭವಗಳು ನಮ್ಮ ಅರಿವಿನ ಸಾಮರ್ಥ್ಯಗಳನ್ನು ಮತ್ತು ನೆನಪಿನ ಶಕ್ತಿಯನ್ನು ಮತ್ತಷ್ಟು ಹೆಚ್ಚಿಸುತ್ತವೆ.

ನೆನಪಿನ ಶಕ್ತಿ ಕಡಿಮೆ ಆಗಲು ಕಾರಣವೇನು?

ನ್ಯೂಟ್ರಿಷನಲ್ ನ್ಯೂರೋಸೈನ್ಸ್ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ನಾವು ಸೇವಿಸುವ ಆಹಾರಕ್ಕೂ ಮೆದುಳಿಗೂ ನೇರ ಸಂಬಂಧವಿದೆ. ಸಂಸ್ಕರಿಸಿದ ಸಕ್ಕರೆ (Processed Sugar) ಹೆಚ್ಚಿರುವ ಆಹಾರಗಳನ್ನು ಅತಿಯಾಗಿ ಸೇವಿಸುವುದರಿಂದ ಮೆದುಳಿನಲ್ಲಿ ಉರಿಯೂತ ಮತ್ತು ಆಕ್ಸಿಡೇಟಿವ್ ಒತ್ತಡ ಉಂಟಾಗಬಹುದು. ಇದು ನೇರವಾಗಿ ನಿಮ್ಮ ನೆನಪಿನ ಶಕ್ತಿ ಕಡಿಮೆಯಾಗಲು ಪ್ರಮುಖ ಕಾರಣವಾಗುತ್ತದೆ.

ಮೆದುಳನ್ನು ಕಂಪ್ಯೂಟರ್‌ಗಿಂತ ಚುರುಕಾಗಿಸಲು ಸಿಂಪಲ್ ಹೆಲ್ತ್ ಟಿಪ್ಸ್:

ಧೂಮಪಾನ ಮತ್ತು ಮದ್ಯಪಾನದಿಂದ ಸಂಪೂರ್ಣ ದೂರವಿರಿ. ಸಕ್ಕರೆ ಮತ್ತು ಬೇಕ್ ಮಾಡಿದ ಸಂಸ್ಕರಿಸಿದ ಆಹಾರವನ್ನು ಕಡಿಮೆ ಮಾಡಿ.

ಆಹಾರದಲ್ಲಿ ಹಸಿರು ಎಲೆಗಳ ತರಕಾರಿಗಳು, ಒಣ ಹಣ್ಣುಗಳು (Nuts), ಬೆರ್ರಿಗಳು ಮತ್ತು ಒಮೆಗಾ-3 ಹೆಚ್ಚಿರುವ ಮೀನನ್ನು ಸೇರಿಸಿ.

ಪ್ರತಿದಿನ ನಿಯಮಿತವಾಗಿ ಕನಿಷ್ಠ 20 ನಿಮಿಷ ವ್ಯಾಯಾಮ ಮಾಡಿ ಮತ್ತು ರಾತ್ರಿ ಚೆನ್ನಾಗಿ ನಿದ್ರಿಸಿ.

ಹೊಸ ಭಾಷೆ ಕಲಿಯುವುದು, ಬ್ರೈನ್ ಗೇಮ್ಸ್ (ಫಜಲ್ಸ್) ಆಡುವುದು ಅಥವಾ ಹೊಸ ಜಾಗಗಳಿಗೆ ಪ್ರವಾಸ ಮಾಡುವುದರಿಂದ ಮೆದುಳನ್ನು ಸದಾ ಕ್ರಿಯಾಶೀಲವಾಗಿಡಿ.

ನಿತ್ಯವೂ ಧ್ಯಾನ (Meditation) ಮಾಡಿ ಮತ್ತು ಜನರೊಂದಿಗೆ ಸಾಮಾಜಿಕವಾಗಿ ಬೆರೆಯಿರಿ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular