ಹುಬ್ಬಳ್ಳಿ: ಮಹಿಳೆಯರನ್ನು ಕಂಡರೆ ಚುಡಾಯಿಸುವುದು, ಬಾಯಿಗೆ ಬಂದಂತೆ ಮಾತನಾಡಿ ಕಿರುಕುಳ ನೀಡುವುದು, ಅಸಭ್ಯವಾಗಿ ವರ್ತಿಸುತ್ತಿದ್ದ ವಿಕೃತ ಕಾಮಿಯನ್ನು ಹಿಡಿದು ಸ್ಥಳೀಯರು ಕಂಬಕ್ಕೆ ಕಟ್ಟಿಹಾಕಿ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಇಲ್ಲಿನ ಈಶ್ವರನಗರದಲ್ಲಿ ವ್ಯಕ್ತಿಯೋರ್ವ ಮನೆ ಬಳಿ ಬಂದು ಮಹಿಳೆಯರಿಗೆ ಕಾಟ ಕೊಡುತ್ತಿದ್ದನಂತೆ. ಅಸಭ್ಯವಾಗಿ ವರ್ತಿಸುವುದು, ಅವಾಚ್ಯವಾಗಿ ಮಾತನಾಡುವುದು ವಿಲಕ್ಷಣವಾಗಿ ವರ್ತಿಸುತ್ತಿದ್ದನಂತೆ. ಕಾಮುಕನ ಹುಚ್ಚಾಟ ಕಂಡು ಸ್ಥಳೀಯರು ಹಾಗೂ ಮಹಿಳೆಯರು ಆತನನ್ನು ಹಿಡಿದು ಹಗ್ಗದಿಂದ ಕಂಬಕ್ಕೆ ಕಟ್ಟಿಹಾಕಿ ಚಪ್ಪಲಿಯಿಂದ ಹೊಡೆದಿದ್ದಾರೆ. ಮನಬಂದಂತೆ ಥಳಿಸಿದ್ದಾರೆ.

