HomeLatest NewsBIG NEWS: ಬೆಂಗಳೂರಿನಲ್ಲಿ ಸೈಕೋ ಕಾಟಕ್ಕೆ ಬೇಸತ್ತು ಪೊಲೀಸ್ ಠಾಣೆ ಮೆಟ್ಟಿಲೇರಿದ ವೈದ್ಯೆ

BIG NEWS: ಬೆಂಗಳೂರಿನಲ್ಲಿ ಸೈಕೋ ಕಾಟಕ್ಕೆ ಬೇಸತ್ತು ಪೊಲೀಸ್ ಠಾಣೆ ಮೆಟ್ಟಿಲೇರಿದ ವೈದ್ಯೆ

ಬೆಂಗಳೂರು: ಸೈಕೋ ಕಾಟಕ್ಕೆ ಬೇಸತ್ತು ವೈದ್ಯೆಯೊಬ್ಬರು ಪೊಲೀಸ್ ಠಾಣೆ ಮೆಟ್ಟಿಲೇರಿರುವ ಘಟನೆ ಬೆಂಗಳೂರಿನ ಕೋರಮಂಗಲದಲ್ಲಿ ನಡೆದಿದೆ.

ಕಳೆದ ಮೂರು ತಿಂಗಳಿಂದ ವ್ಯಕ್ತಿಯೋರ್ವ ವೈದ್ಯೆಯೊಬ್ಬರನ್ನು ಹಿಂಬಾಲಿಸಿಕೊಂಡು ಬರುವುದು, ಎಲ್ಲೆಂದರಲ್ಲಿ ಪ್ರತ್ಯಕ್ಷನಾಗುವುದು ಮಾಡುತ್ತಿದ್ದನಂತೆ. ರಾತ್ರಿ ಮನೆ ಬಳಿ ಬರುವುದು, ವೈದ್ಯೆಯ ಬೆಡ್ ರೂಂ ಕಿಟಕಿ ಬಳಿ ಪ್ರತ್ಯಕ್ಷನಾಗುವುದು, ಮನೆಯಲ್ಲಿ ಇಣುಕಿ ನೋಡುವುದು ಮಾಡುತ್ತಿದ್ದನಂತೆ. ಪ್ರಶ್ನೆ ಮಾಡಿದರೆ ಮಾತನಾಡದೇ ಸುಮ್ಮನೇ ನಿಲ್ಲುವುದು, ದಿಟ್ಟಿಸಿ ನೋಡುವುದು ಮಾಡುತ್ತಿದ್ದನಂತೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸೈಕೋ ಪಾತ್ ಕಾಟಕ್ಕೆ ನೊಂದ ವೈದ್ಯೆ ಕೋರಮಂಗಲ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಬರುತ್ತಿದ್ದಂತೆ ವ್ಯಕ್ತಿ ಸ್ಥಳದಿಂದ ಪರಾರಿಯಾಗಿದ್ದಾನೆ. ಆತನಿಗಾಗಿ ಪೊಲೀಸರು ನಗರದಲ್ಲಿ ಶೋಧ ನಡೆಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular