HomeEntertainment'ಎಲ್ಲೋ ಜೋಗಪ್ಪ ನಿನ್ನರಮನೆ' ಚಿತ್ರದ ''ಹೌದ್ದಾ ಹುಲಿಯ'' ಹಾಡು ರಿಲೀಸ್

‘ಎಲ್ಲೋ ಜೋಗಪ್ಪ ನಿನ್ನರಮನೆ’ ಚಿತ್ರದ ”ಹೌದ್ದಾ ಹುಲಿಯ” ಹಾಡು ರಿಲೀಸ್

ಹಯವದನ ನಿರ್ದೇಶನದ ಬಹುನಿರೀಕ್ಷಿತ ‘ಎಲ್ಲೋ ಜೋಗಪ್ಪ ನಿನ್ನರಮನೆ; ಚಿತ್ರದ ‘ಹೌದ್ದಾ ಹುಲಿಯ’ ಎಂಬ ವಿಡಿಯೋ ಹಾಡು ಜಾನಕಾರ್ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದ್ದು, ಗಾನ ಪ್ರಿಯರ ಗಮನ ಸೆಳೆದಿದೆ.  ರವೀಂದ್ರ ಸೊರಗಪುರ, ವಿಶಾಕ್ ನಾಗಲಾಪುರ ಹಾಗೂ ಶಿಯೋಮ್ ಈ  ಹಾಡಿಗೆ ಧ್ವನಿಯಾಗಿದ್ದು, ರವೀಂದ್ರ ಸಾಹಿತ್ಯ ಬರೆದಿದ್ದಾರೆ.

ಈ ಚಿತ್ರವನ್ನು ಪಂಡೋರಸ್ ಬಾಕ್ಸ್ ಪ್ರೊಡಕ್ಷನ್ಸ್ & ಕೃಷ್ಣಛಾಯಾ ಬ್ಯಾನರ್ ನಲ್ಲಿ ಪವನ್ ಶಿಮಿಕೇರಿ ಮತ್ತು ಸಿಂಧು ಹಯವದನ ನಿರ್ಮಾಣ ಮಾಡಿದ್ದು, ಅಂಜನ್ ನಾಗೇಂದ್ರ ಸೇರಿದಂತೆ ವೆನ್ಯಾ ರೈ, ಸಂಜನಾ ದಾಸ್, ಶರತ್ ಲೋಹಿತಾಶ್ವ, ದಾನಪ್ಪ ದಿನೇಶ್, ಸ್ವಾತಿ ಬಿರಾದಾರ್, ಲಕ್ಷ್ಮಿ, ನಾಡಗೌಡ, ಬಣ್ಣ ಹಚ್ಚಿದ್ದಾರೆ. ಸಿ ರವಿಚಂದ್ರನ್ ಸಂಕಲನ, ಮೋಹನ್ ಭಜರಂಗಿ ನೃತ್ಯ ನಿರ್ದೇಶನ, ವೇಣುಗೋಪಾಲ್ ಹಸರಳಿ ಮತ್ತು ಹಯವದನ ಸಂಭಾಷಣೆ, ನಟರಾಜು ಮದ್ದಾಳ ಅವರ ಛಾಯಾಗ್ರಹಣವಿದೆ.

For Latest News Updates, Join Our Whatsapp Community🚩
RELATED ARTICLES

Most Popular