ಡಿ.ಕೆ.ಶಿವಕುಮಾರ್ ಸಂಘಟನಾ ಚತುರ. ಕೆಪಿಸಿಸಿ ಅಧ್ಯಕ್ಷರು. ಹಾಲಿ ಕರ್ನಾಟಕದ ಉಪಮುಖ್ಯಮಂತ್ರಿ. ಡಿ.ಕೆ.ಶಿವಕುಮಾರ್ ಕಾರ್ಯ ವೈಖರಿ ನೋಡಿಯೇ ಎಐಸಿಸಿ ಅವರಿಗೆ ಮಹತ್ವದ ಜವಾವ್ದಾರಿಯನ್ನು ನೀಡಿದೆ.
ಅಸ್ಸಾಂ ವಿಧಾನಸಭೆ ಚುನಾವಣೆ 2026 ದಿನಾಂಕ ಘೋಷಣೆಗೆ ದಿನಗಣನೆ ಆರಂಭವಾಗಿದೆ. ಎಐಸಿಸಿ ಅಸ್ಸಾಂ ರಾಜ್ಯಕ್ಕೆ ಡಿ.ಕೆ.ಶಿವಕುಮಾರ್ ಅವರನ್ನು ಉಸ್ತುವಾರಿಯಾಗಿ ನೇಮಕ ಮಾಡಿದೆ. ಈಗಾಗಲೇ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಿದೆ.
126 ಸದಸ್ಯ ಬಲದ ಅಸ್ಸಾಂ ವಿಧಾನಸಭೆ ಅವಧಿ ಮೇ 20ರಂದು ಅಂತ್ಯವಾಗಲಿದೆ. ಅಷ್ಟರೊಳಗೆ ಚುನಾವಣೆ ನಡೆದು ಹೊಸ ಸರ್ಕಾರ ರಚನೆಯಾಗಬೇಕಿದೆ. ಎಐಸಿಸಿ ಅಸ್ಸಾಂ ರಾಜ್ಯದ ಉಸ್ತುವಾರಿ ಡಿ.ಕೆ.ಶಿವಕುಮಾರ್ ಅಸ್ಸಾಂ ಚುನಾವಣೆ ಗೆಲ್ಲುವುದು ಹೇಗೆ? ಎಂದು Chatgpt ಕೇಳಿದ್ದಾರೆ.
ಡಿ.ಕೆ.ಶಿವಕುಮಾರ್ ವಿವರಣೆ: ಅಸ್ಸಾಂ ಚುನಾವಣೆ ಗೆಲ್ಲುವುದು ಹೇಗೆ? ಎಂದು Chatgpt ಕೇಳಿದ್ದಾಗಿ ಸ್ವತಃ ಡಿ.ಕೆ.ಶಿವಕುಮಾರ್ ವಿಧಾನ ಪರಿಷತ್ ಕಲಾಪದಲ್ಲಿ ಹೇಳಿದ್ದಾರೆ. ಬಿಜೆಪಿ ಸದಸ್ಯೆ ಭಾರತಿ ಶೆಟ್ಟಿ ಆಡಳಿತ ಸುಧಾರಣೆಯಲ್ಲಿ ಎಐ ಬಳಕೆಯ ವಿಷಯನ್ನು ಪ್ರಸ್ತಾಪ ಮಾಡಿದ್ದರು.
ಈ ಬಗ್ಗೆ ಮಾತನಾಡಿದ ಡಿ.ಕೆ.ಶಿವಕುಮಾರ್, “ನಾನೇ ಚಾಟ್ ಜಿಪಿಟಿ ಬಳಸಿದ್ದೇನೆ. ನನ್ನ ಭಾಷಣದ ಬಗ್ಗೆ ಆಪ್ತ ಸಹಾಯಕನಿಗೆ ಕೇಳುತ್ತಿದ್ದೆ. ನನ್ನ ಮಗಳು ಚಾಟ್ ಜಿಪಿಟಿ ಹೇಗೆ ಬಳಸಬೇಕು? ಎಂದು ತೋರಿಸಿಕೊಟ್ಟಳು” ಎಂದರು.
“ನಾನು ಅಸ್ಸಾಂಗೆ ಹೋಗಿದ್ದ ಸಂದರ್ಭದಲ್ಲಿ ಚಾಟ್ ಜಿಪಿಟಿ ಬಳಿಸಿದ್ದೇನೆ. How to win ಅಸ್ಸಾಂ ಎಲೆಕ್ಷನ್ ಅಂತ ಕೇಳಿದೆ. ಆದರೆ ಅದರಲ್ಲಿ ಬರುವುದನ್ನು ಇಟ್ಟುಕೊಂಡು ಚುನಾವಣೆ ಮಾಡುವುದಕ್ಕೆ ಆಗುತ್ತದೆಯೇ?” ಎಂದು ಹೇಳಿದರು.
“ಅಸ್ಸಾಂ ಚುನಾವಣೆ ಗೆಲ್ಲುವುದು ಹೇಗೆ? ಅಂದರೆ ಕರ್ನಾಟಕ ಮಾಡೆಲ್ ಫಾಲೋ ಮಾಡಿ ಎಂದು ತೋರಿಸುತ್ತದೆ. ಅದು ಒಂದು ರಿಪೋರ್ಟ್ ಕೊಟ್ಟಿತು. ಅದರ ಮೇಲೆ ಚುನಾವಣೆ ಮಾಡುವುದಕ್ಕೆ ಆಗುತ್ತದೆಯೇ?” ಎಂದ ಉಪಮುಖ್ಯಮಂತ್ರಿಗಳು ಪ್ರಶ್ನೆ ಮಾಡಿದರು.
“ನಾವು ಕಲಾಪದಿಂದ ಹೊರಗೆ ಹೋಗೋಣ. ಮೊಬೈಲ್‌ನಲ್ಲಿ ತೋರಿಸತ್ತೇನೆ. If u go to Karnataka model u will win election ಅಂತ ಅದು ಹೇಳತ್ತದೆ. ಹಾಗೆಲ್ಲಾ ಮಾಡಲು ಆಗುತ್ತದೆಯೇ?. ಕರ್ನಾಟಕ ಮಾಡೆಲ್‌ನಲ್ಲಿ ಅಸ್ಸಾಂ ಎಲೆಕ್ಷನ್ ಗೆಲ್ಲುವುದಕ್ಕೆ ಆಗಲ್ಲ” ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

