ಆಧಾರ್ ಕಾರ್ಡ್ ಕೇವಲ ಗುರುತಿನ ಚೀಟಿಯಾಗಿ ಮಾತ್ರವಲ್ಲದೆ, ಬ್ಯಾಂಕ್ ವ್ಯವಹಾರಗಳಿಗೆ, ಸರ್ಕಾರಿ ಯೋಜನೆಗಳಿಗೆ ಹೀಗೆ ಪ್ರತಿದಿನದ ಹಲವಾರು ಅಗತ್ಯಗಳಿಗಾಗಿ ಅನಿವಾರ್ಯವಾಗಿದೆ.
ಆಧಾರ್ ಬಳಕೆ ಹೆಚ್ಚಾಗುತ್ತಿರುವಂತೆಯೇ, ಅದರ ದುರುಪಯೋಗವೂ ಹೆಚ್ಚುತ್ತಿದೆ ಎಂದು ತಜ್ಞರು ಹೇಳುತ್ತಾರೆ. ಈ ಹಿನ್ನೆಲೆಯಲ್ಲಿ ಆಧಾರ್ ಮೂಲಕ ನಡೆಯುವ ವಂಚನೆಗಳನ್ನು ತಡೆಗಟ್ಟಲು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಹೊಸ ಪ್ರಕ್ರಿಯೆಯನ್ನು ಜಾರಿಗೆ ತಂದಿದೆ. ಮರಣ ಹೊಂದಿದ ವ್ಯಕ್ತಿಯ ಆಧಾರ್ ಕಾರ್ಡ್ ಅನ್ನು ಅನಧಿಕೃತವಾಗಿ ಬಳಸದಂತೆ ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ.
ಮರಣ ಹೊಂದಿದ ವ್ಯಕ್ತಿಯ ಆಧಾರ್ ದುರುಪಯೋಗವಾಗದಂತೆ ಇರಲು ಅದನ್ನು ಡೀಆಕ್ಟಿವೇಟ್ ಮಾಡಬೇಕು ಎಂದು ತಿಳಿಸಲಾಗಿದೆ. ಆಧಾರ್ ಸಂಖ್ಯೆಯನ್ನು ಅನಧಿಕೃತವಾಗಿ ಬಳಸಲು ಸಾಧ್ಯವಾಗದಂತೆ ಆನ್ಲೈನ್ನಲ್ಲಿಯೇ ಸುಲಭವಾಗಿ ನಿಷ್ಕ್ರಿಯಗೊಳಿಸುವ ಪ್ರಕ್ರಿಯೆಯನ್ನು ಪರಿಚಯಿಸಲಾಗಿದೆ.
ಮರಣ ಹೊಂದಿದ ವ್ಯಕ್ತಿಯ ಆಧಾರ್ ಕಾರ್ಡ್ ಅನ್ನು ಡೀಆಕ್ಟಿವೇಟ್ ಮಾಡುವುದರಿಂದ ಆ ವ್ಯಕ್ತಿಯ ಗುರುತನ್ನು (Identity) ಕದಿಯದಂತೆ ಜಾಗ್ರತೆ ವಹಿಸಬಹುದು. ಅವರ ಹೆಸರಿನಲ್ಲಿರುವ ಕಾನೂನುಬದ್ಧ ಮತ್ತು ಆರ್ಥಿಕ ವ್ಯವಹಾರಗಳನ್ನು ದುರುಪಯೋಗಪಡಿಸಿಕೊಳ್ಳದಂತೆ ತಡೆಯಬಹುದು. ಒಮ್ಮೆ ಮರಣ ಹೊಂದಿದ ವ್ಯಕ್ತಿಯ ಆಧಾರ್ ಸಂಖ್ಯೆಯನ್ನು ಡೀಆಕ್ಟಿವೇಟ್ ಮಾಡಿದ ನಂತರ, ಅವರ ಹೆಸರಿನಲ್ಲಿ ಯಾವುದೇ ವ್ಯವಹಾರಗಳನ್ನು ಮಾಡಲು ಸಾಧ್ಯವಿಲ್ಲ.
ಮರಣ ಹೊಂದಿದ ವ್ಯಕ್ತಿಯ ಆಧಾರ್ ಸಂಖ್ಯೆಯನ್ನು ಡೀಆಕ್ಟಿವೇಟ್ ಮಾಡುವುದು ಹೇಗೆ? ಹಂತ ಹಂತದ ಪ್ರಕ್ರಿಯೆ:
- ಮೊದಲು ‘ಮೈ ಆಧಾರ್’ (My Aadhaar) ಪೋರ್ಟಲ್ ಓಪನ್ ಮಾಡಿ.
- ಆಧಾರ್ ವಿವರಗಳೊಂದಿಗೆ ಲಾಗಿನ್ ಆಗಬೇಕಾಗುತ್ತದೆ.
- ನಂತರ ‘ರಿಪೋರ್ಟ್ ಡೆತ್’ (Report Death) ಆಯ್ಕೆಯನ್ನು ಆರಿಸಿಕೊಳ್ಳಿ.
- ಮರಣ ಪ್ರಮಾಣ ಪತ್ರದಂತಹ (Death Certificate) ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ.
- ವೆರಿಫಿಕೇಶನ್ ರಿಕ್ವೆಸ್ಟ್ ಅನ್ನು ಸಬ್ಮಿಟ್ ಮಾಡಿ.
- ಒಮ್ಮೆ ನಿಮ್ಮ ವಿನಂತಿಯು ಅನುಮೋದನೆ (Approve) ಪಡೆದರೆ, ಮರಣ ಹೊಂದಿದ ವ್ಯಕ್ತಿಯ ಆಧಾರ್ ಸಂಖ್ಯೆಯು ಸಂಪೂರ್ಣವಾಗಿ ನಿಷ್ಕ್ರಿಯಗೊಳ್ಳುತ್ತದೆ.
ಗಮನಿಸಿ: ಮರಣ ಹೊಂದಿದ ವ್ಯಕ್ತಿಯ ಡೆತ್ ಸರ್ಟಿಫಿಕೇಟ್ ಅನ್ನು ಮುನ್ಸಿಪಾಲಿಟಿ ಅಥವಾ ರಿಜಿಸ್ಟ್ರಾರ್ ಕಚೇರಿಯಿಂದ ಪಡೆದಿರಬೇಕು. ಅರ್ಜಿಯ ಆಧಾರದ ಮೇಲೆ ವಿವರಗಳನ್ನು ಪರಿಶೀಲಿಸಿದ ನಂತರ UIDAI ಮೃತರ ಆಧಾರ್ ಅನ್ನು ಶಾಶ್ವತವಾಗಿ ಡೀಆಕ್ಟಿವೇಟ್ ಮಾಡುತ್ತದೆ.
ಆಧಾರ್ ಕಾರ್ಡ್ ಕಳೆದುಹೋದರೆ ಏನು ಮಾಡಬೇಕು?
ಆಧಾರ್ ಕಾರ್ಡ್ ಕಳೆದುಹೋದಾಗ ಅಥವಾ ಆಧಾರ್ ಸಂಖ್ಯೆ ನೆನಪಿಲ್ಲದಿದ್ದಾಗ UIDAI ಅಧಿಕೃತ ವೆಬ್ಸೈಟ್ ಓಪನ್ ಮಾಡಿ:
- “Retrieve Lost or Forgotten EID/UID” ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
- ನಂತರ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆ, ಹೆಸರು ಮತ್ತು ಇತರ ವಿವರಗಳನ್ನು ನಮೂದಿಸಿದ ನಂತರ, OTP ಪರಿಶೀಲಿಸಿ.
- ಇದಾದ ನಂತರ UIDAI ನಿಮ್ಮ ಆಧಾರ್ ಸಂಖ್ಯೆಯನ್ನು ಮೊಬೈಲ್ಗೆ SMS ಮೂಲಕ ಕಳುಹಿಸುತ್ತದೆ.
ಆಧಾರ್ ಕಾರ್ಡ್ ಕಳೆದುಹೋದ ಸಂದರ್ಭದಲ್ಲಿ UIDAI ವೆಬ್ಸೈಟ್ ಮೂಲಕ ಇ-ಆಧಾರ್ ಕಾರ್ಡ್ ಡೌನ್ಲೋಡ್ ಮಾಡಿಕೊಳ್ಳಬಹುದು:
- ವೆಬ್ಸೈಟ್ನಲ್ಲಿ “Download Aadhaar” ಆಯ್ಕೆಯನ್ನು ಕ್ಲಿಕ್ ಮಾಡಿ ಸುಲಭವಾಗಿ ಡೌನ್ಲೋಡ್ ಮಾಡಬಹುದು. ನಾರ್ಮಲ್ ಮತ್ತು ಮಾಸ್ಕ್ಡ್ ಆಧಾರ್ ಎರಡನ್ನೂ ಡೌನ್ಲೋಡ್ ಮಾಡುವ ಅವಕಾಶವಿದೆ.
- ಆಧಾರ್ ವೆರಿಫಿಕೇಶನ್ ಪೂರ್ಣಗೊಂಡ ನಂತರ ನಿಮ್ಮ ಆಧಾರ್ PDF ರೂಪದಲ್ಲಿ ಡೌನ್ಲೋಡ್ ಆಗುತ್ತದೆ.
- ಆಧಾರ್ ಫೈಲ್ ಪಾಸ್ವರ್ಡ್ನಿಂದ ಲಾಕ್ ಆಗಿರುತ್ತದೆ. ನಿಮ್ಮ ಹೆಸರಿನ ಮೊದಲ 4 ಅಕ್ಷರಗಳು (Capital letters) ಮತ್ತು ನಿಮ್ಮ ಹುಟ್ಟಿದ ವರ್ಷವನ್ನು (YYYY) ನಮೂದಿಸುವ ಮೂಲಕ ಫೈಲ್ ಓಪನ್ ಮಾಡಬಹುದು.

