HomeLatest Newsಬಟ್ಟೆ ಬದಲಿಸಿದಂತೆ ಯುವತಿಯರನ್ನು ಬದಲಿಸುತ್ತಾ ಮದುವೆಯಾಗುವುದೇ ಈ ಇಂಜಿನಿಯರ್ ಕಾಯಕ; ಪತ್ನಿ ಗರ್ಭಿಣಿಯಾಗಿದ್ದಾಗಲೇ ಮತ್ತೋರ್ವಳೊಂದಿಗೆ ನಿಶ್ಚಿತಾರ್ಥ

ಬಟ್ಟೆ ಬದಲಿಸಿದಂತೆ ಯುವತಿಯರನ್ನು ಬದಲಿಸುತ್ತಾ ಮದುವೆಯಾಗುವುದೇ ಈ ಇಂಜಿನಿಯರ್ ಕಾಯಕ; ಪತ್ನಿ ಗರ್ಭಿಣಿಯಾಗಿದ್ದಾಗಲೇ ಮತ್ತೋರ್ವಳೊಂದಿಗೆ ನಿಶ್ಚಿತಾರ್ಥ

ಆನೇಕಲ್: ಇಲ್ಲೋರ್ವ ಇಂಜಿನಿಯರ್ ಮಹಾಶಯ ಮದುವೆಯಾಗುವುದನ್ನೇ ಖಯಾಲಿ ಮಾಡಿಕೊಂಡಿದ್ದಾನೆ. ಈಗಾಗಲೇ ಒಂದು ಮದುವೆಯಾಗಿ ಪತ್ನಿ ಇದ್ದರೂ ಕೂಡ ಯುವತಿಯರನ್ನು ನಂಬಿಸಿ ಪ್ರೀತಿ-ಪ್ರೇಮ ಎಂದು ಸುತ್ತಾಡಿ ಮದುವೆಯಾಗಿ ಮೋಸ ಮಾಡಿ ಬಳಿಕ ಬೇರೋಬ್ಬ ಯುವತಿಯ ಹಿಂದೆ ಬಿದ್ದು ಆಕೆಯನ್ನು ಬಲೆಯಲ್ಲಿ ಬೀಳಿಸಿಕೊಂಡು ವಂಚಿಸುವುದೇ ಈತನ ಕಾಯಕ ಯುವತಿಯರನ್ನು ಬದಲಿಸುತ್ತಾ ಮದುವೆಯಾಗುವುದು ಎಂದರೆ ಈ ಕಾಮುಕನಿಗೆ ಬಟ್ಟೆ ಬದಲಿಸಿದಷ್ಟು ಸುಲಭ.

ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಜಿಗಣಿಯಲ್ಲಿ ಈ ಘಟನೆ ನಡೆದಿದೆ. ರವಿ ಎಂಬಾತ ಮದುವೆಯಾಗಿದ್ದರೂ ಹಲವು ಯುವತಿಯರನ್ನು ನಂಬಿಸಿ ಮತ್ತೊಂದು ಮದುವೆಯಾಗಿ ಮೋಸ ಮಾಡುತ್ತಿದ್ದ ಆರೋಪಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಕಾಮುಕ ಇಂಜಿನಿಯರ್ ನ ಸರಣಿ ವಂಚನೆಗಳು ಇದೀಗ ಬಯಲಾಗಿವೆ. ಇಬ್ಬರು ಯುವತಿಯರನ್ನು ಮದುವೆಯಾಗಿ, ಮತ್ತೊಬ್ಬಳ ಜೊತೆ ನಿಶ್ಚಿತಾರ್ಥ ಮಾಡಿಕೊಂಡು ಅಮಾಯಕ ಹೆಣ್ಣುಮಕ್ಕಳ ಜೀವನದ ಜೊತೆ ಆಟವಾಡುತ್ತಿದ್ದ ರವಿ ವಿರುದ್ಧ ಜಿಗಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತುಮಕೂರಿನ ಚಿಕ್ಕನಾಯಕನಹಳ್ಳಿ ಮೂಲದ ರವಿ, ಜಿಗಣಿ ಬಳಿಯ ಖಾಸಗಿ ಕಂಪನಿಯೊಂದರಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ. 2024ರ ಜನವರಿಯಲ್ಲಿ ಈತ ಯುವತಿಯೊಬ್ಬಳನ್ನು ಮದುವೆಯಾಗಿದ್ದ. ಮದುವೆಯಾದ ಆರಂಭದಿಂದಲೇ ಪತ್ನಿಯ ಜೊತೆ ವಿಕೃತವಾಗಿ ವರ್ತಿಸುತ್ತಿದ್ದ ಈತ, ವರದಕ್ಷಿಣೆಗಾಗಿ ಪೀಡಿಸುತ್ತಿದ್ದ.

ಮೊದಲ ಪತ್ನಿ ಗರ್ಭಿಣಿಯಾದ ಸಂದರ್ಭದಲ್ಲಿ ಆಕೆಯನ್ನು ಪೋಷಿಸಬೇಕಿದ್ದ ರವಿ, ತನಗೆ ಮದುವೆಯಾಗಿಲ್ಲ ಎಂದು ಸುಳ್ಳು ಹೇಳಿ ತನ್ನ ಕುಟುಂಬದವರೊಟ್ಟಿಗೆ ಸೇರಿ ಬೇರೆ ಹುಡುಗಿ ನೋಡಲು ಶುರು ಮಾಡಿದ್ದ. ಅಷ್ಟೇ ಅಲ್ಲದೆ, ಅಕ್ಟೋಬರ್ ತಿಂಗಳಲ್ಲಿ ಮತ್ತೊಬ್ಬ ಯುವತಿಯ ಜೊತೆ ಎಂಗೇಜ್‌ಮೆಂಟ್ ಕೂಡ ಮಾಡಿಕೊಂಡಿದ್ದ. ಈ ವಿಚಾರ ತಿಳಿದ ಮೊದಲ ಪತ್ನಿ, ನಿಶ್ಚಿತಾರ್ಥ ಮಾಡಿಕೊಂಡ ಯುವತಿಯ ಕುಟುಂಬಕ್ಕೆ ಸತ್ಯ ತಿಳಿಸಿದ್ದರು. ಆ ಸಮಯದಲ್ಲಿ ಆ ಯುವತಿಯ ಮನೆಯವರು ರವಿಗೆ ಹಿಗ್ಗಾಮುಗ್ಗಾ ಥಳಿಸಿದ್ದರು. ಧರ್ಮದೇಟು ತಿಂದಿದ್ದರೂ ಬುದ್ಧಿ ಕಲಿಯದ ರವಿ, ಮೊದಲ ಪತ್ನಿ ಹೆರಿಗೆಗಾಗಿ ತವರು ಮನೆಗೆ ಹೋದಾಗ ಮತ್ತೊಂದು ಮದುವೆಯಾಗಿದ್ದಾನೆ.

2025ರ ಡಿಸೆಂಬರ್‌ನಲ್ಲಿ ಮತ್ತೊಬ್ಬ ಯುವತಿಯನ್ನು ತನಗೆ ಮದುವೆಯಾಗಿಲ್ಲ ಎಂದು ನಂಬಿಸಿ ಮದುವೆಯಾಗಿದ್ದ. ಈ ಎರಡನೇ ಮದುವೆಯ ವಿಷಯ ತಿಳಿದ ಮೊದಲ ಪತ್ನಿ ಮತ್ತು ಆಕೆಯ ಕುಟುಂಬಸ್ಥರು ರವಿಯ ಮನೆಗೆ ನುಗ್ಗಿ ಆತನಿಗೆ ಸಾರ್ವಜನಿಕವಾಗಿ ಹಲ್ಲೆ ಮಾಡಿ ಬುದ್ಧಿ ಕಲಿಸಿದ್ದಾರೆ. ಆದಾಗ್ಯೂ ತನ್ನ ಹಳೇ ಚಾಳಿ ಬಿಡದ ರವಿ ಈಗ ಮತ್ತೋರ್ವ ಯುವತಿಯ ಹಿಂದೆ ಬಿದ್ದಾನೆ. ವಿಷಯ ತಿಳಿದ ಪತ್ನಿ ಪತ್ನಿಯ ಹುಚ್ಚಾಟಕ್ಕೆ ಬ್ರೇಕ್ ಹಾಕಿದ್ದಾಳೆ. ಜಿಗಣಿ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ರವಿ ಪರಾರಿಯಾಗಿದ್ದು, ಜಿಗಣಿ ಪೊಲೀಸರು ವಂಚನೆ ಮತ್ತು ಬಹುಪತ್ನಿತ್ವದ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular