HomeBusinessShocking News: ಬೆಂಗಳೂರು ನಗರದಲ್ಲಿ ಮನೆ ಬಾಡಿಗೆ ಭಾರೀ ಏರಿಕೆ

Shocking News: ಬೆಂಗಳೂರು ನಗರದಲ್ಲಿ ಮನೆ ಬಾಡಿಗೆ ಭಾರೀ ಏರಿಕೆ

ಬೆಂಗಳೂರು ನಗರದಲ್ಲಿ ಮನೆ ಬಾಡಿಗೆಯಲ್ಲಿ ಭಾರೀ ಏರಿಕೆಯಾಗಿದೆ. ದೇಶದ 8 ಪ್ರಮುಖ ನಗರಗಳಿಗೆ ಹೋಲಿಕೆ ಮಾಡಿದರೆ ಉದ್ಯಾನ ನಗರಿ ಬೆಂಗಳೂರಿನಲ್ಲಿ ಮನೆ ಬಾಡಿಗೆ ಶೇ 13ರಷ್ಟು ಏರಿಕೆಯಾಗಿದೆ.

2025ರಲ್ಲಿ ಬೆಂಗಳೂರು ನಗರದಲ್ಲಿ ಮನೆ ಬಾಡಿಗೆ ಶೇ 13ರಷ್ಟು ಏರಿಕೆ ಕಂಡಿದೆ ಎಂದು ರಿಯಲ್ ಎಸ್ಟೇಟ್ ಸಲಹಾ ಸಂಸ್ಥೆ ಪ್ರಾಪ್ ಟೈಗರ್ ಹೇಳಿದೆ. ದೇಶದ 8 ನಗರಕ್ಕೆ ಹೋಲಿಕೆ ಮಾಡಿದರೆ ಬೆಂಗಳೂರು ನಗರದಲ್ಲೇ ಅತಿ ಹೆಚ್ಚು ಏರಿಕೆ ಕಂಡು ಬಂದಿದೆ.

ಬೆಂಗಳೂರು, ಹೈದರಾಬಾದ್, ಅಹಮದಾಬಾದ್, ದೆಹಲಿ-ಎನ್‌ಸಿಆರ್, ಕೋಲ್ಕತ್ತಾ, ಮುಂಬೈ ಮಹಾನಗರ ಮತ್ತು ಪುಣೆಯನ್ನು ಹೋಲಿಕೆ ಮಾಡಲಾಗಿದೆ. ಈ 8 ನಗರಗಳ ಪೈಕಿ ಯಾವುದೇ ನಗರದಲ್ಲಿಯೂ ಬಾಡಿಗೆ ಎರಡಂಕಿ ಏರಿಕೆ ಕಂಡಿಲ್ಲ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

2024ರಲ್ಲಿ 8 ನಗರಗಳಲ್ಲಿ ಮನೆಗಳ ಸರಾಸರಿ ಬಾಡಿಗೆ ಶೇ 17ರಷ್ಟು ಏರಿಕೆಯಾಗಿತ್ತು. ಆದರೆ 2025ರಲ್ಲಿ ಶೇ 6ರಷ್ಟು ಏರಿಕೆಯಾಗಿದೆ. ಚೆನ್ನೈನಲ್ಲಿ ಯಥಾಸ್ಥಿತಿ ಇದೆ. ಆದರೆ ಬೆಂಗಳೂರು ನಗರದಲ್ಲಿ ಮಾತ್ರ ಬಾಡಿಗೆ ಹೆಚ್ಚಾಗುತ್ತಿದೆ.

ನಗರದಲ್ಲಿ ಐಟಿ ಕಂಪನಿಗಳು ಮನೆಯಿಂದ ಕೆಲಸ ಮಾಡುವ ಆಯ್ಕೆಯನ್ನು ಕಡಿಮೆ ಮಾಡಿವೆ. ವಾರದಲ್ಲಿ ಕನಿಷ್ಠ 3-4 ದಿನಗಳ ಕಾಲ ಕಚೇರಿಗೆ ಬರಬೇಕು ಎಂದು ಕಟ್ಟುನಿಟ್ಟಿನ ನಿಯಮ ಜಾರಿಗೊಳಿಸಿವೆ. ಆದ್ದರಿಂದ ನಗರದಲ್ಲಿ ಮನೆಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ.

ಎಲ್ಲಿ ಎಷ್ಟು ಬಾಡಿಗೆ ಏರಿಕೆ?

  • ಬೆಂಗಳೂರು 2024ರಲ್ಲಿ 7,536, 2025ರಲ್ಲಿ 8,533
  • ಹೈದರಾಬಾದ್ 2024ರಲ್ಲಿ 7053, 2025ರಲ್ಲಿ 7,644
  • ಅಹಮದಾಬಾದ್ 2024ರಲ್ಲಿ 4,402, 2025ರಲ್ಲಿ 4,754
  • ದೆಹಲಿ-ಎನ್‌ಸಿಆರ್ 2024ರಲ್ಲಿ 8105, 2025ರಲ್ಲಿ 8,750
  • ಕೋಲ್ಕತ್ತಾ 2024ರಲ್ಲಿ 5,633, 2025ರಲ್ಲಿ 5,945
  • ಮುಂಬೈ 2024ರಲ್ಲಿ 12,600, 2025ರಲ್ಲಿ 13,164
  • ಪುಣೆ 2024ರಲ್ಲಿ 7,108, 2025ರಲ್ಲಿ 7,192

ವಿವಿಧ ರಾಜ್ಯಗಳು, ದೇಶಗಳ ಜನರನ್ನು ಬೆಂಗಳೂರು ನಗರ ಸೆಳೆಯುತ್ತದೆ. ಹೂಡಿಕೆದಾರರು, ವಲಸೆ ಕಾರ್ಮಿಕರಿಗೆ ಬೆಂಗಳೂರು ನಗರ ನೆಚ್ಚಿನ ತಾಣವಾಗಿದೆ. ಬೇಡಿಕೆ ಹೆಚ್ಚಳವೇ ಬೆಂಗಳೂರು ನಗರದಲ್ಲಿ ಬಾಡಿಗೆ ಹೆಚ್ಚಳವಾಗಲು ಕಾರಣ ಎಂದು ವಿವಿಧ ವರದಿಗಳು ಹೇಳುತ್ತಿವೆ.

ಬೆಂಗಳೂರು ನಗರದಲ್ಲಿ ಪೂರ್ವ ಮತ್ತು ಉತ್ತರ ಭಾಗದಲ್ಲಿ ಮೂಲ ಸೌಕರ್ಯ ಸುಧಾರಣೆ ಆಗುತ್ತಿದೆ. ಇಲ್ಲಿ ಮನೆ, ಸೈಟುಗಳ ಬೇಡಿಕೆ ಹೆಚ್ಚುತ್ತಿದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular