HomeKarnatakaಹುಬ್ಬಳ್ಳಿಯಲ್ಲಿ ದಾರುಣ ಘಟನೆ: ಪಿಲ್ಲರ್ ಹಾಕಲು ತೋಡಿದ್ದ ಗುಂಡಿಗೆ ಬಿದ್ದು ಬಾಲಕ ಸಾವು

ಹುಬ್ಬಳ್ಳಿಯಲ್ಲಿ ದಾರುಣ ಘಟನೆ: ಪಿಲ್ಲರ್ ಹಾಕಲು ತೋಡಿದ್ದ ಗುಂಡಿಗೆ ಬಿದ್ದು ಬಾಲಕ ಸಾವು

ಹುಬ್ಬಳ್ಳಿಯ ವಿಜಯನಗರದಲ್ಲಿ ಪಿಲ್ಲರ್ ಹಾಕಲು ತೋಡಿದ್ದ ಗುಂಡಿಗೆ ಬಿದ್ದು 9 ವರ್ಷದ ಬಾಲಕ ಮೃತಪಟ್ಟಿದ್ದಾನೆ. ಹುಬ್ಬಳ್ಳಿಯ ಕೇಶ್ವಾಪುರದ ಆಜಾದ್ ನಗರ ನಿವಾಸಿ ಬಾಲಾಜಿ(9) ಮೃತಪಟ್ಟ ಬಾಲಕ ಎಂದು ಹೇಳಲಾಗಿದೆ.

ಸ್ನೇಹಿತರೊಂದಿಗೆ ಆಟವಾಡುತ್ತ ವಿಜಯನಗರಕ್ಕೆ ಬಂದಿದ್ದ ಬಾಲಾಜಿ ಕಾಂಪೌಂಡ್ ವೊಂದರ ಒಳಗೆ ಬಿದ್ದಿದ್ದ ತೆಂಗಿನ ಕಾಯಿ ತೆಗೆದುಕೊಳ್ಳಲು ಹೋಗಿದ್ದಾನೆ. ಆಗ ಪಿಲ್ಲರ್ ಹಾಕಲು ತೋಡಿದ್ದ ಗುಂಡಿಗೆ ಆಕಸ್ಮಿಕವಾಗಿ ಬಿದ್ದಿದ್ದಾನೆ.

ಆಳವಾಗಿದ್ದ ಗುಂಡಿಯ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಬಾಲಾಜಿ ಗುಂಡಿಗೆ ಬೀಳುತ್ತಿದ್ದಂತೆ ಜೊತೆಗಿದ್ದ ಇಬ್ಬರೂ ಬಾಲಕರು ಓಡಿಹೋಗಿದ್ದು, ಯಾರಿಗೂ ವಿಷಯ ತಿಳಿಸಿಲ್ಲ. ನಂತರ ಪೋಷಕರು ಮಗ ನಾಪತ್ತೆಯಾದ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪೊಲೀಸರು ಸಿಸಿಟಿವಿ ಕ್ಯಾಮೆರಾ ದೃಶ್ಯ ಪರಿಶೀಲಿಸಿ ತನಿಖೆ ನಡೆಸಿದ್ದು, ಬಾಲಕನ ಪತ್ತೆ ಮಾಡಿದ್ದಾರೆ. ಗುಂಡಿಯಲ್ಲಿದ್ದ ಮೃತ ದೇಹ ಮತ್ತೆ ಹಚ್ಚಲಾಗಿದೆ. ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular