HomeLatest Newsಹೈಕೋರ್ಟ್ ಗೆ ಎರಡು ವಾರ ಚಳಿಗಾಲದ ರಜೆ: ಜ. 5ರಿಂದ ಕಲಾಪ ಪುನಾರಂಭ

ಹೈಕೋರ್ಟ್ ಗೆ ಎರಡು ವಾರ ಚಳಿಗಾಲದ ರಜೆ: ಜ. 5ರಿಂದ ಕಲಾಪ ಪುನಾರಂಭ

ಬೆಂಗಳೂರು: ಹೈಕೋರ್ಟ್ ಗೆ ಡಿಸೆಂಬರ್ 20 ರಿಂದ 31ರವರೆಗೆ ಎರಡು ವಾರ ಚಳಿಗಾಲದ ರಜೆ ಇರುತ್ತದೆ. ಹೊಸ ವರ್ಷದ ಮೊದಲ ದಿನ ರಜೆ ಇರಲಿದ್ದು, ಜನವರಿ 2ರಂದು ಘೋಷಿತ ರಜೆ ನೀಡಲಾಗಿದೆ. ಶನಿವಾರ, ಭಾನುವಾರ ವಾರಾಂತ್ಯ ರಜೆ ಇದ್ದು ಅಧಿಕೃತವಾಗಿ ಜನವರಿ 5 ರಿಂದ ಹೈಕೋರ್ಟ್ ಕಲಾಪ ಪುನರಾರಂಭವಾಗಲಿದೆ.

ಡಿಸೆಂಬರ್ 23, 26 ಮತ್ತು 30ರಂದು ರಜಾ ಕಾಲದ ನ್ಯಾಯ ಪೀಠಗಳು ಕಾರ್ಯನಿರ್ವಹಿಸಲಿವೆ. ತುರ್ತು ಪ್ರಕರಣಗಳ ವಿಚಾರಣೆ ನಡೆಸಲಾಗುವುದು. ತುರ್ತು ಆದೇಶಗಳು, ತಡೆ ಆದೇಶಗಳು, ಮಧ್ಯಂತರ ನಿರ್ದೇಶನ ಮತ್ತಿತರ ಪ್ರಕರಣಗಳ ವಿಚಾರಣೆಯನ್ನು ಮಾತ್ರ ರಜಾಕಾಲೀನ ಪೀಠಗಳು ನಡೆಸಲಿವೆ.

ಬೆಂಗಳೂರು ಹೈಕೋರ್ಟ್ ಪೀಠದಲ್ಲಿ ಡಿಸೆಂಬರ್ 23ರಂದು ನ್ಯಾಯಮೂರ್ತಿಗಳಾದ ಎಸ್. ಸುನೀಲ್ ದತ್ ಯಾದವ್ ಮತ್ತು ಟಿ.ಎಂ. ನದಾಫ್ ವಿಭಾಗೀಯ ಪೀಠ, ನ್ಯಾಯಮೂರ್ತಿ ಪ್ರದೀಪ್ ಸಿಂಗ್ ಯೆರೂರ್ ಮತ್ತು ನ್ಯಾಯಮೂರ್ತಿ ಶ್ರೀಷಾನಂದ ಅವರ ಏಕ ಸದಸ್ಯ ಪೀಠಗಳು ವಿಚಾರಣೆ ನಡೆಸಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಧಾರವಾಡ ಪೀಠದಲ್ಲಿ ನ್ಯಾಯಮೂರ್ತಿಗಳಾದ ರವಿ ವಿ. ಹೊಸಮನಿ ಮತ್ತು ಕೆ.ಬಿ. ಗೀತಾ ವಿಭಾಗಿಯ ಪೀಠ, ಕಲಬುರಗಿ ಪೀಠದಲ್ಲಿ ನ್ಯಾಯಮೂರ್ತಿಗಳಾದ ಹೆಚ್.ಟಿ. ನರೇಂದ್ರ ಪ್ರಸಾದ್ ಮತ್ತು ಹಂಚಾಟಿ ಸಂಜೀವ್ ಕುಮಾರ್ ವಿಭಾಗೀಯ ಪೀಠ ವಿಚಾರಣೆ ನಡೆಸಲಿದೆ.

ಡಿಸೆಂಬರ್ 26ರಂದು ಬೆಂಗಳೂರಿನಲ್ಲಿ ನ್ಯಾಯಮೂರ್ತಿಗಳಾದ ಬಿ.ಎಂ. ಶ್ಯಾಮ್ ಪ್ರಸಾದ್ ಮತ್ತು ಟಿ. ವೆಂಕಟೇಶ್ ನಾಯಕ್ ವಿಭಾಗಿಯ ಪೀಠ, ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಹಾಗೂ ನ್ಯಾಯಮೂರ್ತಿ ಜಿ. ಬಸವರಾಜ್ ಅವರ ಏಕಸದಸ್ಯ ಪೀಠಗಳು ವಿಚಾರಣೆ ನಡೆಸಲಿವೆ.

ಧಾರವಾಡ ಪೀಠದಲ್ಲಿ ನ್ಯಾಯಮೂರ್ತಿಗಳಾದ ಕೆ.ಎಸ್. ಹೇಮಲೇಖಾ ಮತ್ತು ಬಿ. ಮುರಳಿಧರ ಪೈ, ಕಲಬುರಗಿ ಪೀಠದಲ್ಲಿ ನ್ಯಾಯಮೂರ್ತಿಗಳಾದ ಅಶೋಕ್ ಎಸ್. ಕಿಣಗಿ ಮತ್ತು ಎಸ್. ವಿಶ್ವಜಿತ್ ಶೆಟ್ಟಿ ವಿಭಾಗೀಯ ಪೀಠ ವಿಚಾರಣೆ ನಡೆಸಲಿವೆ.

ಡಿಸೆಂಬರ್ 30ರಂದು ಬೆಂಗಳೂರು ಪೀಠದಲ್ಲಿ ನ್ಯಾಯಮೂರ್ತಿಗಳಾದ ಸಚಿನ್ ಶಂಕರ್ ಮಗದುಮ್, ಡಾ. ಮನ್ಮಥ ರಾವ್ ವಿಭಾಗೀಯ ಪೀಠ, ನ್ಯಾಯಮೂರ್ತಿ ಅನಂತ ರಾಮನಾಥ ಹೆಗಡೆ ನ್ಯಾಯಮೂರ್ತಿ ಕೆ.ವಿ. ಅರವಿಂದ್ ಏಕಸದಸ್ಯ ಪೀಠಗಳು ವಿಚಾರಣೆ ನಡೆಸಲಿವೆ.

ಧಾರವಾಡ ಪೀಠದಲ್ಲಿ ನ್ಯಾಯಮೂರ್ತಿಗಳಾದ ಆರ್. ನಟರಾಜ್ ಮತ್ತು ವಿಜಯಕುಮಾರ್ ಎ. ಪಾಟೀಲ್, ಕಲಬುರಗಿ ಪೀಠದಲ್ಲಿ ನ್ಯಾಯಮೂರ್ತಿಗಳಾದ ಇ.ಎಸ್. ಇಂದಿರೇಶ್ ಮತ್ತು ತ್ಯಾಗರಾಜ್ ಎನ್. ಇನವಲ್ಲಿ ಅವರ ವಿಭಾಗೀಯ ಪೀಠ ವಿಚಾರಣೆ ನಡೆಸಲಿವೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular